|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸತ್ಯನಾರಾಯಣ ಅಡಿಗರ ಯಕ್ಷ ಸಂಸಾರ

ಸತ್ಯನಾರಾಯಣ ಅಡಿಗರ ಯಕ್ಷ ಸಂಸಾರ



ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯಕ್ಷ ಸಂಸಾರ ಕಾಣಲು ಸಿಗುತ್ತೆ. ಅಂತಹ ಒಂದು ಯಕ್ಷ ಕುಟುಂಬದ ಪರಿಚಯವನ್ನು ನಾವು ಇವತ್ತು ಮಾಡಲು ಹೊರಟಿದ್ದೇವೆ. ಇಂದಿನ ಯಕ್ಷ ಸಾಧಕರು ಲೇಖನದಲ್ಲಿ ಅವರುಗಳು ಯಾರು ಎಂದರೆ ಶ್ರೀಯುತ ಸತ್ಯನಾರಾಯಣ ಅಡಿಗ ಹಾಗೂ ಇವರ ಮಕ್ಕಳು ಶ್ರೀಮತಿ ಅಮೃತಾ ಅಡಿಗ, ಅನನ್ಯ ಅಡಿಗ, ಅಳಿಯ ಕೌಶಿಕ್ ರಾವ್ ಹಾಗೂ ಇವರ ತಮ್ಮ ಕೌಶಲ್ ರಾವ್.


ಶ್ರೀಯುತ ಸತ್ಯನಾರಾಯಣ ಅಡಿಗ:-

ದಿನಾಂಕ 07.01.1971ರಲ್ಲಿ ಶ್ರೀಯುತ ಶಿವನಾರಾಯಣ ಅಡಿಗ ಹಾಗೂ ಭಾರತಿ ಅಡಿಗ ಇವರ ಪ್ರೀತಿಯ ಮಗನಾಗಿ ಜನನ. ದ್ವಿತೀಯ ಪಿ.ಯು.ಸಿ ಇವರ ವಿದ್ಯಾಭ್ಯಾಸ. ಯಕ್ಷಗಾನ ಕಲೆಯಲ್ಲಿರುವ ಆಸಕ್ತಿಯಿಂದ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಇವರಿಂದ ಚೆಂಡೆ ಹಾಗೂ ಮದ್ದಲೆಯನ್ನು ಪುಂಡಿಕಾಯಿ ಕೃಷ್ಣ ಭಟ್ ಇವರಿಂದ ಕಲಿತು ಯಕ್ಷಗಾನ ರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದರಾಗಿ ಹೊರಹೊಮ್ಮಿದರು. ಹವ್ಯಾಸಿ ಕಲಾವಿದನಾಗಿ 25 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ಕೌಶಿಕ್ ರಾವ್ ಹಾಗೂ ಕೃಷ್ಣಪ್ರಕಾಶ ಉಳಿತ್ತಾಯ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆವಾದಕರು. ಪಟ್ಲ ಸತೀಶ್ ಶೆಟ್ಟಿ ಹಾಗೂ ಪೂಳ್ಯ ಲಕ್ಷ್ಮೀನಾರಾಯಣ ಶೆಟ್ಟಿ ಇವರ ನೆಚ್ಚಿನ ಭಾಗವತರು. ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗ. ಕ್ರೀಡೆ ಇವರ ಹವ್ಯಾಸಗಳು. ಪ್ರಕಾಶ್ ಕಲಾ ಪ್ರತಿಷ್ಠಾನ ಮುಂಬೈ ಇವರಿಗೆ ಸಿಕ್ಕಿರುವ ಪ್ರಶಸ್ತಿ. ದಿನಾಂಕ 19.03.1998ರಂದು ಶ್ರೀಮತಿ ಜಯಲಕ್ಷ್ಮೀ_ಅಡಿಗ ಇವರನ್ನು ಮದುವೆಯಾಗಿ ಅಮೃತಾ ಅಡಿಗ ಹಾಗೂ ಅನನ್ಯ ಅಡಿಗ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಅಮೃತಾ ಅಡಿಗ ಪಾಣಾಜೆ:-

ದಿನಾಂಕ 06.05.1999ರಂದು ಅಮೃತಾ ಅಡಿಗ ಪಾಣಾಜೆ ಇವರ ಜನನ .B.Ed ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದ ಕಾರಣ ಯಕ್ಷಗಾನ ಇವರನ್ನು ತುಂಬಾನೇ ಆಕರ್ಷಿಸಿತು ಹಾಗೂ ತಂದೆಯಿಂದ ಪ್ರೇರಣೆಯಾಗಿ ಯಕ್ಷಗಾನ ರಂಗದಲ್ಲಿ ಒಳ್ಳೆಯ ಕಲಾವಿದೆಯಾಗಿ ರೂಪುಗೊಳ್ಳಲು ಸಹಕಾರವಾಯಿತು. ಗೋವಿಂದ ನಾಯಕ್ ಪಾಲೆಚ್ಚಾರು, ಜಿ. ಕೆ. ನಾವಡ ಹಾಗೂ ಪ್ರಸ್ತುತ ಪಟ್ಲ ಸತೀಶ್ ಶೆಟ್ಟಿ ಇವರ ಯಕ್ಷಗಾನದ ಗುರುಗಳು. ಯಕ್ಷಗಾನ ರಂಗದಲ್ಲಿ 10 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.


ಹವ್ಯಾಸಿ ಭಾಗವತರಾಗಿ ಇವರು ಸಾಲಿಗ್ರಾಮ, ಪೆರ್ಡೂರು, ಹಟ್ಟಿಯಂಗಡಿ, ಮಂಗಳಾದೇವಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವವಿದೆ. ದಕ್ಷಾಧ್ವರ, ದೇವೀ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಸಿಂಧುಭೈರವಿ, ಹನುಮತೋಡಿ, ಭೀಮ್ ಫಲಾಸ್ ಇವರ ನೆಚ್ಚಿನ ರಾಗಗಳು.ಪಟ್ಲ ಸತೀಶ್ ಶೆಟ್ಟಿ, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್, ಅಗರಿ ಶ್ರೀನಿವಾಸ್ ಭಾಗವತರು ಇವರ ನೆಚ್ಚಿನ ಭಾಗವತರು. ಪದ್ಮನಾಭ ಉಪಾಧ್ಯಾಯ, ಕೃಷ್ಣ ಪ್ರಕಾಶ ಉಳಿತ್ತಾಯ, ಗುರುಪ್ರಸಾದ್ ಬೊಳಿಂಜಡ್ಕ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆವಾದಕರು. ಮೊದಲು ಯಕ್ಷಗಾನದಲ್ಲಿ ವೇಷ ಮಾಡುತ್ತಿದ್ದರು,ಇವಾಗ ಯಕ್ಷಗಾನ ಭಾಗವತಿಗೆಯ ಬಗ್ಗೆ ತುಂಬಾನೇ ಒಲವು ಇದ್ದ ಕಾರಣ ವೇಷ ಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆ ಮಾಡಿದ್ದಾರೆ.


ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ, ಸರಯೂ ಪ್ರಶಸ್ತಿ, ಯಕ್ಷಮಂಜುಳಾ ಪ್ರಶಸ್ತಿ, ಸ್ವರ ಸಿಂಧೂರಿ ಬಿರುದು ಹೀಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿ ಇವರಿಗೆ ದೊರೆತಿದೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-ಜನರ ಮನೋರಂಜನೆಗಾಗಿ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಮುಂದುವರಿಯುತ್ತಿದೆ. 


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಹೊಸತನ್ನು ಬಯಸುವ ಪ್ರೇಕ್ಷಕರು ಕೆಲವರಾದರೆ  ಮತ್ತೆ ಕೆಲವರು ಪರಂಪರೆಯನ್ನೇ ಇಷ್ಟ ಪಡುತ್ತಾರೆ. ಇವೆರಡನ್ನೂ ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆ ಹಾಗೂ ಜವಾಬ್ದಾರಿ ಕಲಾವಿದರ ಮೇಲಿದೆ. 


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಯಕ್ಷಗಾನದ ಪರಂಪರೆಯನ್ನೂ ಉಳಿಸುತ್ತಾ ಜನರ ಅಭಿರುಚಿಗನುಸಾರವಾಗಿ ನಮ್ಮಿಂದ ಸಾಧ್ಯವಾದಷ್ಟು ದುಡಿಯಬೇಕು.


ದಿನಾಂಕ 12.07.2020ರಂದು ಕೌಶಿಕ್ ರಾವ್ ಪುತ್ತಿಗೆ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಕೌಶಿಕ್ ರಾವ್ ಪುತ್ತಿಗೆ:-

ದಿನಾಂಕ 22.08.1996ರಂದು ಶ್ರೀಯುತ ಜನಾರ್ದನ ರಾವ್ ಮತ್ತು ಗೀತಾ ರಾವ್ ಇವರ ಪ್ರೀತಿಯ ಮಗನಾಗಿ ಜನನ. ಉಡುಪಿಯ ಪಲಿಮಾರು ಮಠದಲ್ಲಿ ವೇದ ಆಗಮ ಪೌರೋಹಿತ್ಯ ಅಧ್ಯಯನ ಇವರ ವಿದ್ಯಾಭ್ಯಾಸ. ದೇಲಂತಮಜಲು ಸುಬ್ರಮಣ್ಯ ಭಟ್ ಹಾಗೂ ಕಡಬ ವಿನಯ ಆಚಾರ್ಯ ಇವರ ಪ್ರೇರಣೆಯಿಂದ ಯಕ್ಷಗಾನದ ಚೆಂಡೆ ಹಾಗೂ ಮದ್ದಲೆಯನ್ನು ಕಾರ್ತಿಕ್ ಕೊರ್ಡೆಲ್, ಗಿರೀಶ್ ಕಿನಿಲಕೋಡಿ, ಕೃಷ್ಣಪ್ರಕಾಶ ಉಳಿತ್ತಾಯ ಇವರಿಂದ ಕಲಿತು ಯಕ್ಷಗಾನದಲ್ಲಿ ಒಳ್ಳೆಯ ಕಲಾವಿದರಾಗಿ ಹೊರಹೊಮ್ಮಿದರು. 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.


ದೇಂತಡ್ಕ ಮೇಳ ಹಾಗೂ ಹವ್ಯಾಸಿಯಾಗಿ ಕಟೀಲು, ಸಾಲಿಗ್ರಾಮ, ಪೆರ್ಡೂರು, ಧರ್ಮಸ್ಥಳ, ಸುಂಕದಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಇದೆ.ದುಶ್ಯಾಸನ ವಧೆ, ದೇವಿ ಮಹಾತ್ಮೆ, ಇಂದ್ರಜಿತು ಕಾಳಗ , ಕೌಂಡ್ಲಿಕ ವಧೆ ಇವರ ನೆಚ್ಚಿನ ಪ್ರಸಂಗಳು. ತೆಲಂಗಳ ಗೋಪಾಲಕೃಷ್ಣ ಭಟ್, ಚಿಪ್ಪಾರು ಬಲ್ಲಾಳ ಅಜ್ಜ, ಶಂಕರನಾರಾಯಣ ಭಟ್ ಪದ್ಯಾಣ, ಪೆರುವಾಯಿ ನಾರಾಯಣ ಭಟ್, ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ಪತ್ನಿ ಅಮೃತಾ ಅಡಿಗ, ಬಲಿಪಜ್ಜ, ಪದ್ಯಾಣ ಗಣಪತಿ ಭಟ್, ಪುರುಷೋತ್ತಮ ಪೂಂಜರು  ಅಗರಿ ಶ್ರೀನಿವಾಸ್ ಭಾಗವತರು ಇವರ ನೆಚ್ಚಿನ ಭಾಗವತರು. ಚಿತ್ರ ಕಲೆ, ಶಾಸ್ತ್ರ ಚಿಂತನೆ ಪುರಾಣಗಳ ಅವಲೋಕನ ಇವರ ಹವ್ಯಾಸಗಳು.


ಯಕ್ಷಗಾನದ ಇಂದಿನನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 

ಹಳೆತನ ನಶಿಸದೆ ಹೊಸತನದ ಬಯಕೆಯಲ್ಲಿರುವ ಪ್ರೇಕ್ಷಕರಿಗೆ ಮುದ ನೀಡುವ ಹೊಣೆಗಾರಿಕೆ ಮತ್ತು ಸವಾಲು ಕಲಾವಿದರ ಮೇಲಿದೆ ಎಂದು ಹೇಳುತ್ತಾರೆ ಇವರು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಈ ರೀತಿಯಾಗಿ ಹೇಳುತ್ತಾರೆ:- 

ರಸಾಸ್ವದನೆ ಹಾಗೂ ಪರಂಪರೆ ಬಯಸುವ 2 ವರ್ಗದ ಪ್ರೇಕ್ಷಕರು ನಮಗೆ ಯಕ್ಷಗಾನದಲ್ಲಿ ನೋಡಲು ಸಿಗುತ್ತಾರೆ. 


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲಾಮಾತೆಯ ಸೇವೆ,ಕಲೆಯ ಉಳಿಸುವಿಕೆಗೆ ಸರ್ವ ರೀತಿಯ ಪ್ರಯತ್ನವನ್ನು ಮಾಡುತ್ತೇನೆ ಎಂದು ಇವರು ಹೇಳುತ್ತಾರೆ.


ದಿನಾಂಕ 12.07.2020 ರಂದು ಅಮೃತಾ ಅಡಿಗ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಕೌಶಲ್ ರಾವ್‌ ಪುತ್ತಿಗೆ:-

ಕೌಶಿಕ್ ರಾವ್ ಪುತ್ತಿಗೆ ಇವರ ತಮ್ಮ ಕೌಶಲ್ ರಾವ್ ಪುತ್ತಿಗೆ, ಅಮೃತಾ ಅಡಿಗ ಅವರ ಮೈದುನ. ದಿನಾಂಕ 21.07.2001 ಇವರ ಜನನ.ಜನಾರ್ದನ ರಾವ್ ಹಾಗೂ ಗೀತಾ ರಾವ್ ಇವರ ತಂದೆ ತಾಯಿ. ಪ್ರಸ್ತುತ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಚೆಂಡೆ ಹಾಗೂ ಮದ್ದಲೆ ಕಲಿಯಲು ಅಣ್ಣನೆ ಇವರಿಗೆ ಪ್ರೇರಣೆ.


ಅಣ್ಣ ಕೌಶಿಕ್ ರಾವ್ ಪುತ್ತಿಗೆ, ಗಿರೀಶ್ ಕಿನಿಲಕೋಡಿ, ಕೃಷ್ಣ ಪ್ರಕಾಶ ಉಳಿತ್ತಾಯ, ಮಯೂರ್ ನಾಯ್ಗ ಇವರ ಯಕ್ಷಗಾನದ ಗುರುಗಳು. ಯಕ್ಷಗಾನ ರಂಗದಲ್ಲಿ 5 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.ದೇಂತಡ್ಕ ಮೇಳ ಹಾಗೂ ಹವ್ಯಾಸಿಯಾಗಿ ಕಟೀಲು, ಸುಂಕದಕಟ್ಟೆ, ತಲಕಳ, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಇದೆ.ಚಿಪ್ಪಾರಜ್ಜ, ಪದ್ಯಾಣ ಶಂಕರನಾರಾಯಣ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ಬಲಿಪಜ್ಜ, ಅಗರಿ ಶ್ರೀನಿವಾಸ್ ಭಾಗವತರು, ಪದ್ಯಾಣ ಗಣಪತಿ ಭಟ್, ಅಮೃತಾ ಅಡಿಗ ಇವರ ನೆಚ್ಚಿನ ಭಾಗವತರು.ಅಗ್ರ ಪೂಜೆ, ರಕ್ತ ರಾತ್ರಿ, ದುಶ್ಶಾಸನ ವಧೆ, ದೇವೀ ಮಹಾತ್ಮೆ, ಇಂದ್ರಜಿತು ಕಾಳಗ ಇವರ ನೆಚ್ಚಿನ ಪ್ರಸಂಗಳು. ಯಕ್ಷಗಾನ ವೇಷ ಮಾಡಲು ತುಂಬಾನೇ ಆಸಕ್ತಿ ಇದೆ ಇವರಿಗೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಈ ರೀತಿ ಹೇಳುತ್ತಾರೆ:-

ಕಿರಿಯರಿಂದ ಹಿಡಿದು ಹಿರಿಯರ ವರೆಗೂ ಯಕ್ಷಗಾನದ ಮೇಲಿನ ಒಲವು ಹೆಚ್ಚಾಗಿದೆ. ಇದರಿಂದಾಗಿ ಯಕ್ಷಗಾನದ ಬೇಡಿಕೆ ಹೆಚ್ಚಾಗಿದೆ. ಇದು ಕಲೆಯ ಉನ್ನತಿಗೆ ಸಹಕಾರಿಯಾಗಿದೆ. 


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-

ಕಾಲಮಿತಿ ಯಕ್ಷಗಾನವನ್ನು ಜನರು ಹೆಚ್ಚು ಇಷ್ಟ ಪಡುತ್ತಾರೆ. 


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ:-

ಕಲಾಮಾತೆಯ ಸೇವೆಯನ್ನು ಸದಾ ಕಾಲ ಮಾಡಬೇಕು ಇದು ನನ್ನು ಯೋಜನೆ ಅಂತ ಹೇಳುತ್ತಾರೆ.


ಅನನ್ಯ ಅಡಿಗ ಪಾಣಾಜೆ:-

ಅಮೃತಾ ಅಡಿಗ ಇವರ ಪ್ರೀತಿಯ ತಂಗಿ ಅನನ್ಯ ಅಡಿಗ ಪಾಣಾಜೆ.ದಿನಾಂಕ 04.05.2004 ಇವರ ಜನನ.ಪ್ರಸ್ತುತ ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ. ಹಿಮ್ಮೇಳದಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ ಇರುವ ಕಾರಣ ಹಿಮ್ಮೇಳದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಹಾಗೂ ಇದುವೆ ಇವರಿಗೆ ಪ್ರೇರಣೆ ಕೂಡ ಆಯಿತು. ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಇವರಿಂದ ಯಕ್ಷಗಾನದ ಪೂರ್ವರಂಗ ಹಾಗೂ ತಂದೆ ಸತ್ಯನಾರಾಯಣ ಅಡಿಗ ಹಾಗೂ ಭಾವ ಕೌಶಿಕ್ ರಾವ್ ಇವರ ಬಳಿ ರಂಗ ನಡೆಯನ್ನು ಕಲಿಯುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 9 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗ. ತಂದೆ ಹಾಗೂ ಭಾವ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ಅಕ್ಕ ಅಮೃತಾ ಅಡಿಗ ಹಾಗೂ ಪಟ್ಲ ಸತೀಶ್ ಶೆಟ್ಟಿ ಇವರ ನೆಚ್ಚಿನ ಯಕ್ಷಗಾನ ಭಾಗವತರು. ಇವರಿಗೆ ಯಕ್ಷಗಾನದಲ್ಲಿ ವೇಷ ಮಾಡಲು ತುಂಬಾನೇ ಆಸಕ್ತಿ ಇದೆ. ನೃತ್ಯ ಹಾಗೂ ಯಕ್ಷಗಾನ ಇವರ ನೆಚ್ಚಿನ ಹವ್ಯಾಸಗಳು.


ಈ ಯಕ್ಷ ಕುಟುಂಬದ ಎಲ್ಲರೂ ಜೊತೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post