ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 30ರ ಸೋಮವಾರ ನಗರದ ಬಂಟ್ಸ್ ಹಾಸ್ಟೆಲ್ ರೋಡ್ ನಲ್ಲಿರುವ "ತಪೋವನ"ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ (ಆರೋಗ್ಯ ಕೇಂದ್ರ) ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸೆ ಉತ್ತಮವಾದ ಚಿಕಿತ್ಸಾ ಪದ್ದತಿಯಾಗಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಆರೋಗ್ಯಕ್ಕೆ ಹಾಗೂ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.
ಬೇರೆ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದ ಆಯುರ್ವೇದಿಕ್ ಚಿಕಿತ್ಸೆ ಜನರಿಗೆ ಈ ಆರೋಗ್ಯ ಕೇಂದ್ರದಲ್ಲಿ ದೊರೆಯಲಿದ್ದು, ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ತಪೋವನ ತಪೋವನ"ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ ನ (ಆರೋಗ್ಯ ಕೇಂದ್ರ) ವೈದ್ಯರಾದ ಡಾ. ಹರ್ಷ ಹೆಬ್ಬಾರ್, ಡಾ. ದೇವಿಕೃಪಾ ರೈ, ಡಾ.ಸಚ್ಚಿದಾನಂದ ರೈ, ಕಾರ್ಪೊರೇಟರ್ ಮನೋಹರ್, ಸಂಜಯ ಪ್ರಭು, ನಿತಿನ್ ಶೆಟ್ಟಿ, ಹೊಸದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸಚಿವ ಅಂಗಾರ ಅವರ ಕಾಳಜಿ:
ಆಯುರ್ವೇದ ಚಿಕಿತ್ಸೆ ಒಂದು ಉತ್ತಮವಾದ ಚಿಕಿತ್ಸಾ ಪದ್ದತಿ ಎಂಬುದು ಜನಜನಿತ. ಆಯುರ್ವೇದ ಚಿಕಿತ್ಸೆ ಪಡೆದ ಬಳಿಕ, ರೋಗಿ ಈಜುಕೊಳದಲ್ಲಿ ಸ್ವಲ್ಪ ಹೊತ್ತು ಈಜಾಡಿದರೆ ಚಿಕಿತ್ಸೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಮುಂದೆ ಇಂತಹ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ ಗಳಲ್ಲಿ ಈಜು ಕೊಳ ವನ್ನೂ ಸಹ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಚಿಕಿತ್ಸಾ ಕೇಂದ್ರದ ಪ್ರವರ್ತಕರಲ್ಲಿ ಮನವಿ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ