ಸಾಧನೆಯ ಹಾದಿ ಸರಳವಲ್ಲ, ಕಲ್ಲಿನಿಂದ ಅದ್ಹೇಗೆ ಶಿಲೆಯ ಕೆತ್ತುವೆವೋ ಅದೇ ರೀತಿ ನಮ್ಮ ಗೆಲುವಿನ ಚಿತ್ರ ನಾವೇ ಚಿತ್ರಿಸಬೇಕು! ಹಾಗೆಯೇ ಸಾಧನೆ ಮಾಡುವುದೇ ಪರಮಗುರಿ ಎಂದು ಚಿತ್ರಕಲೆಯ ಮೂಲಕ ಮುನ್ನುಗ್ಗುತ್ತಿದ್ದಾಳೆ ಬೆಟ್ಟಂಪಾಡಿಯ ಕುವರಿ.
ಹವ್ಯಾಸಿ ಹಾಡುಗಾರ್ತಿ, ಕವನ ರಚನೆಯ ಆಸಕ್ತಿ, ಸಣ್ಣ ವಯಸ್ಸಿನಿಂದಲೇ ಚಿತ್ರಕಲೆಯ ಮೇಲೆ ಭಕ್ತಿಯ ಜೊತೆಗೆ, ತಂದೆ ಚನಿಯಪ್ಪ ಹಾಗೂ ತಾಯಿ ಗೀತಾ ಇವರ ಬೆನ್ನ ಹಿಂದಿನ ಶಕ್ತಿಯೇ ಇವರನ್ನು ಸಾಧನೆಯತ್ತ ಸಾಗಲು ಪ್ರೇರೇಪಣೆ ನೀಡುತ್ತಿದೆ.
ಇವರ ಹೆಸರು ಸುಶ್ಮಿತಾ ಪಿ. 2000ನೇ ಇಸವಿಯಲ್ಲಿ ಬೆಟ್ಟಂಪಾಡಿಯಲ್ಲಿ ಜನಿಸಿದರು. ಸಣ್ಣ ಪ್ರಾಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ಅದ್ಭುತ ಚಿತ್ರಗಳನ್ನು ತನ್ನ ಕಲ್ಪನೆಯಲ್ಲಿ ಚಿತ್ರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಬಾಚಿಕೊಂಡಿದ್ದಲ್ಲದೇ, ಸೋತಾಗ ತನ್ನ ಕಲಾಕೌಶಲ್ಯವನ್ನು ಹೆಚ್ಚಿಸಲು ಶ್ರದ್ಧೆಯಿಂದ ತಪ್ಪುಗಳನ್ನು ತಿದ್ದಿ ಸಾಧನೆಯ ಹಾದಿಯ ದೂರ ವೇಗವಾಗಿ ಕ್ರಮಿಸುತ್ತಿದ್ದಾರೆ.
2011ರಲ್ಲಿ ಭಾರತ ಸರಕಾರದ 'ಜಲಸಂಪನ್ಮೂಲ' ಇಲಾಖೆ ಆಯೋಜಿಸಿದ "ಭವಿಷ್ಯಕ್ಕೆ ನೀರನ್ನು ಉಳಿಸಿ"ಎಂಬ ವಿಷಯದ ಮೇಲಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2012-13ರಲ್ಲಿ ಇಂತಹ ಹಲವಾರು ಉತ್ತಮ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 2015ರಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು ಆಯೋಜಿಸಿದ್ದ "ಕನಸುಗಳು" ಎಂಬ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯ ಸ್ಪರ್ಧಿಯಾಗಿದ್ದರು.
ಮನುಷ್ಯ ಹುಟ್ಟಿದಾಗ ಬಿಳಿ ಹಾಳೆಯಂತೆ ಖಾಲಿ ಇರುತ್ತಾನೆ. ತನ್ನ ಜೀವನ ರಥ ಮುಂದೆ ಹೋಗುತ್ತಾ ಬಿಳಿ ಹಾಳೆಗೆ ರಂಗನ್ನು ಚೆಲ್ಲುತ್ತಾ ಮುಂದೆ ಹೋಗಬೇಕು. ಅಂತೆ ತನ್ನ ಸುಂದರ ಜೀವನದ ಹಾದಿ ರಂಗಮಯವಾಗಿರಲೆಂದು ಹಂಬಲಿಸುತ್ತಿರುವ ಸುಶ್ಮಿತಾ ಇವರಿಗೆ ಎಲ್ಲರ ಸಹಕಾರ, ಆಶೀರ್ವಾದ ಅಗತ್ಯ.
-ಕಾರ್ತಿಕ್.ಪೈ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ