||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೈಹಿಕ ಆರೋಗ್ಯ, ಚಿತ್ತ ಶಾಂತಿ, ಆಧ್ಯಾತ್ಮ ಸಾಧನೆಗೆ ಅಷ್ಟಾಂಗ ಯೋಗದ ಮೂರನೇ ಅಂಗ ಆಸನ

ದೈಹಿಕ ಆರೋಗ್ಯ, ಚಿತ್ತ ಶಾಂತಿ, ಆಧ್ಯಾತ್ಮ ಸಾಧನೆಗೆ ಅಷ್ಟಾಂಗ ಯೋಗದ ಮೂರನೇ ಅಂಗ ಆಸನ


ಸ್ಥಿರಂ ಸುಖಂ ಆಸನಂ


ನಮ್ಮ ಭಾರತೀಯ ಸಂಸ್ಕøತಿ ಕಲೆಯಾದ ಯೋಗವನ್ನು ನಮಗೆ ಅಧಿಕೃತವಾಗಿ ಪರಿಚಯ ಮಾಡಿಕೊಟ್ಟ ಪತಂಜಲಿ ಮಹರ್ಷಿಗಳು ಈಗಾಗಲೇ ತಿಳಿಸಿದಂತೆ ಅಷ್ಟಾಂಗ ಯೋಗಗಳನ್ನು ಜೀವನದಲ್ಲಿ ಅಳವಡಿಸಿದಾಗ ಉತ್ತಮ ಜೀವನ ಶೈಲಿಯಲ್ಲಿ ಬಾಳಲು, ಆಧ್ಯಾತ್ಮ ಸಾಧನೆಗೂ ಮತ್ತು ಆತ್ಮದ ಉನ್ನತ ಸ್ಥಿತಿಗೆ ತಲುಪಲು ಸಹಕಾರಿಯಾಗುತ್ತದೆ. ಯೋಗದ ಮೊದಲನೆ ಅಂಗ ಯಮ. ಎರಡನೆಯ ನಿಯಮವನ್ನು ವ್ಯಕ್ತಿಯು ಆಚರಿಸಿದಾಗ ನೈತಿಕ ಬಲ ಸುಧಾರಣೆಯಾಗುತ್ತದೆ. ಅಷ್ಟಾಂಗ ಯೋಗದ ಮೂರನೇ ಅಂಗವೇ ಆಸನ. ಪತಂಜಲಿ ಋಷಿಗಳು ಸ್ಥಿರಂ, ಸುಖಂ ಆಸನ ಎಂದಿದ್ದಾರೆ. ಸುಖಕರವಾದ ಸ್ಥಿರವಾದ ಶರೀರದ ವಿವಿಧ ಭಂಗಿಗಳೂ ಯಾ ಸ್ಥಿತಿಗಳು ಆಗಿದೆ. ಆಸನ ಎಂದರೆ ದೇಹದ ನಿಲುಮೆ ಆಗಿದೆ.  ಆಸನಗಳ ಅಭ್ಯಾಸವು ಚಕ್ರಗಳನ್ನು ಪ್ರಚೋದಿಸುತ್ತದೆ. ಇಲ್ಲಿ ದೇಹವನ್ನು ಶಿಸ್ತು ಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿ ಮಾಡುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ ನÀರಮಂಡಲಕ್ಕೂ ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ ಮಾಂಸಖಂಡಗಳೂ ಪೆಡಸಾಗಿರದೆ ಶಕ್ತಿಯುತವಾಗುವವು ಮತ್ತು ಚೈತನ್ಯಭರಿತವಾಗುವುವು.  

ಜಗದ್ಗುರುವೂ ಯೋಗಾಚಾರ್ಯನೂ ಆದ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದ್ದು ಭಗವದ್ಗೀತೆಯು ಯೋಗಕ್ಕೆ ಉತ್ತಮ ಉದಾಹರಣೆ.


ಪ್ರಮುಖ ವ್ಯಾಖ್ಯಾನಗಳು:-

• ಯೋಗಃ ಕರ್ಮಸು ಕೌಶಲಂ'- (2-50 ಭಗವದ್ಗೀತೆ) ಕೌಶಲ ಪೂರ್ಣವಾದ ಕೆಲಸವೇ ಯೋಗ

•"ಸಮತ್ವಂ ಯೋಗ ಉಚ್ಯತೇ' (2-48 ಭಗವದ್ಗೀತೆ) ಮನಸ್ಸಿನ ಸಮಸ್ಥಿತಿಯನ್ನು ಸಾಧಿಸುವುದೇ ಯೋಗ.

ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆಯಾಗುವುದೇ ಯೋಗ (ಭ-6)

•  ಆನಂದ ಸ್ವರೂಪವನ್ನು ಪಡೆಯುವ ಸಾಧನೆಯೇ ಯೋಗ.

• ಸಾಧಿಸಲಾಗದ್ದನ್ನು ಸಾಧಿಸುವುದೇ "ಯೋಗ'. ಸಾಧಿಸಿ ಪಡೆದದ್ದನ್ನು ಉಳಿಸಿಕೊಳ್ಳುವುದೇ "ಕ್ಷೇಮ'. ("ಯೋಗ ಕ್ಷೇಮವಹಾಮ್ಯಹಂ'- ಗೀತೆ.

• "ಅಭ್ಯಾಸೇನತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ" (ಭ-6-35) ಅಭ್ಯಾಸದಿಂದಲೂ, ವೈರಾಗ್ಯದಿಂದಲೂ ಮನಸ್ಸನ್ನು ನಿಗ್ರಹಿಸಬಹುದು.


ಆಸನಗಳು ದೇಹದ ನಾಡಿಗಳನ್ನು ನಿಯಂತ್ರಿಸಿ ಶುದ್ಧಿಕರಿಸುತ್ತದೆ. ಆಸನಗಳಿಂದ ದೊರಕುವ ಪ್ರಯೋಜನಗಳು:

- ಯೋಗಾಸನಗಳು ದೇಹ ಮನಸ್ಸಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ.

- ದೇಹ ಮತ್ತು ಮನಸ್ಸಿನ ಗಂಟುಗಳ ಬಿಗಿತಗಳನ್ನು ಸರಿಪಡಿಸುತ್ತದೆ.

- ಆಸನಗಳು ದೈಹಿಕವಾಗಿ ವರ್ತಿಸುವ ಮೂಲಕ ಮಾನಸಿಕ ಒತ್ತಡಗಳನ್ನು ಬಿಡುಗಡೆ ಮಾಡುತ್ತದೆ. 

- ವಪೆ, ಶ್ವಾಸಕೋಶ ಹಾಗೂ ಉಸಿರಾಟ ಪ್ರಕ್ರಿಯೆಗಳು ಸರಾಗವಾಗುತ್ತದೆ. ಇದರಿಂದ ಅಸ್ತಮಾ ರೂಪದ ಕಾಯಿಲೆಗಳು ನಿಯಂತ್ರಣಗೊಳ್ಳುತ್ತದೆ.

- ದೇಹದ ಭಾಗದಲ್ಲಿರುವ ಸ್ನಾಯುಗಳ ಬಿಗಿತ ನಿವಾರಣೆಯಾಗುತ್ತದೆ.

- ಯೋಗಾಸನಗಳ ಸಾಧನೆಯಿಂದ ಪ್ರತಿಯೊಂದು ಅಂಗವೂ ಸ್ಫೂರ್ತಿಯುತವೂ, ಹಗರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತದೆ. ಶ್ವಾಸಕೋಶ, ಹೃದಯ ಮಸ್ತಿಷ್ಕಗಳು ಪೂರ್ಣ ವಿಕಾಸ ಹೊಂದಿ ಏಕಾಗ್ರತೆ ಉಂಟಾಗಿ ಬುದ್ಧಿ ಸೂಕ್ಷ್ಮ ಹಾಗೂ ಹೆಚ್ಚು ಚುರುಕಾಗುತ್ತದೆ.

- ಯೋಗಾಸವನವನ್ನು ಮಕ್ಕಳೂ, ವೃದ್ಧರೂ, ಸ್ತ್ರೀಯರೂ ಮತ್ತು ಯುವಕ ಯುವತಿಯವರೂ ಎಲ್ಲರೂ ಮಾಡಬಹುದು.

- ಯೋಗಾಸನ ಮಾಡಲಿಕ್ಕೆ ಜಾತಿ, ಮತ, ಲಿಂಗ ಭೇದ ಎಂಬುದಿಲ್ಲ.

- ಯೋಗ ಔಷಧಕ್ಕೊಂದು ಪರ್ಯಾಯ ರಾಮಬಾಣವೂ ಹೌದು; ರೋಗ ನಿರೋಧಕ ಶಕ್ತಿವರ್ಧಕ ಉಪಾಯವೂ ಹೌದು.


ಇಲ್ಲಿ ವ್ಯಕ್ತಿಗೆ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮಗಳ ಕೊರತೆಯಾದಾಗ ಯೋಗಾಸನಗಳು ತುಂಬಾ ಸಹಕಾರಿಯಾಗುತ್ತದೆ. ಯೋಗಾಸನಗಳಿಂದ ದೈಹಿಕ ಮಾನಸಿಕ ವೃದ್ಧಿಯಾಗುತ್ತದೆ. ಅಲ್ಲದೆ ಆಧ್ಯಾತ್ಮ ಸಾಧನೆಗೆ ರಹದಾರಿಯಾಗುತ್ತದೆ. ಪ್ರತಿಯೊಂದು ಯೋಗಾಸನಗಳಲ್ಲಿ ಅದರದ್ದೇ ಆದ ಮಹತ್ವವಿದೆ. ಹಾಗೂ ಉಪಯೋಗವಿದೆ. 


-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್

ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

“ಪಾರಿಜಾತ”, ಮನೆ ಸಂಖ್ಯೆ 2-72:5


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post