||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡಕ್ಕೇ ಪ್ರಾಧಾನ್ಯತೆಯೆಂದರೆ ಇತರ ಭಾಷೆಗಳ ವಿರೋಧವಲ್ಲ: ಡಾ. ಅಶ್ವಥ್‌ ನಾರಾಯಣ ಸಿ ಎನ್‌

ಕನ್ನಡಕ್ಕೇ ಪ್ರಾಧಾನ್ಯತೆಯೆಂದರೆ ಇತರ ಭಾಷೆಗಳ ವಿರೋಧವಲ್ಲ: ಡಾ. ಅಶ್ವಥ್‌ ನಾರಾಯಣ ಸಿ ಎನ್‌


ಮಂಗಳೂರು: ರಾಜ್ಯದಲ್ಲಿ ಹಲವು ಭಾಷೆಗಳಿದ್ದರೂ ಕನ್ನಡವೇ ಸೇತುವಾಗಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ಪದ್ಧತಿ ಅನುಷ್ಠಾನದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ, ಇದರರ್ಥ ಸರ್ಕಾರ ಇತರ ಭಾಷೆಗಳ ವಿರುದ್ಧವಾಗಿದೆ ಎಂದಲ್ಲ,  ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ ನಾರಾಯಣ ಸಿ ಎನ್‌ ತಿಳಿಸಿದ್ದಾರೆ.


ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಹಾಲ್‌ನಲ್ಲಿ ಸಾಹಿತಿಗಳ ಜೊತೆ ಸಂವಾದ ನಡೆಸಿದ ಅವರು, ಎನ್‌ಇಪಿ-2020 ಯಲ್ಲಿ ಕನ್ನಡಿಗರು ಮತ್ತು ಹೊರಗಿನವರೂ ಪದವಿಯಲ್ಲಿ ಮೊದಲ ವರ್ಷ ಕನ್ನಡವನ್ನು ʼಫಂಕ್ಷನಲ್‌ ಲ್ಯಾಂಗ್ವೇಜ್‌ʼ ಆಗಿ ಕಲಿಯುವುದು ಕಡ್ಡಾಯ. ಮಾನವಿಕ ಮತ್ತು ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಉತ್ತೇಜನ ನೀಡಲಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯ ಲಾಭ ಕನ್ನಡಕ್ಕೂ ದೊರೆಯಬೇಕು. ಅಳಿವಿನಂಚಿನಲ್ಲಿರುವ ರಾಜ್ಯದ ಭಾಷೆಗಳ ರಕ್ಷಣೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎಂದರು.


“ನೂತನ ಶಿಕ್ಷಣ ಪದ್ಧತಿಯ ಕುರಿತು ಈಗಾಗಲೇ ಕನ್ನಡ ಜಾಲತಾಣವಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಮಾಹಿತಿ ನೀಡಲಾಗುತ್ತಿದೆ. ಶೀಘ್ರದಲ್ಲೇ ವಿಕಿಪೀಡಿಯಾವನ್ನೂ ಅಭಿವೃದ್ಧಿಪಡಿಸಲಾಗುವುದು. ಎನ್‌ಇಪಿ -2020ರ ಭಾಷಾ ನೀತಿ ಸ್ಪಷ್ಟವಾಗಿದೆ. ನಾವು ಬೇರೆ ಭಾಷೆಗಳ ಬಗ್ಗೆ ಚಿಂತೆ ಬಿಟ್ಟು ನಮ್ಮ ಕನ್ನಡವನ್ನು ಬಲಪಡಿಸುವ ಸಮಯ ಬಂದಿದೆ,” ಎಂದರು.ಇದೇ ವೇಳೆ ವಿವಿಧ ಸಾಹಿತಿಗಳು, ಪ್ರಾಧ್ಯಾಪಕರು ಡೀಮ್ಡ್‌ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸ್ವಾಯತ್ತ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡಕ್ಕೆ ಪಾಶಸ್ತ್ಯ ಸಿಗಬೇಕು, ಅಲ್ಲದೆ, ಪಿಯುಸಿಯಲ್ಲೂ ಕನ್ನಡ ಐಚ್ಛಿಕ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿದರು.


ಇದೇ ವೇಳೆ ಎಲ್ಲಾ ಸಾಹಿತಿಗಳು, ಕನ್ನಡ ಪ್ರಾಧ್ಯಾಪಕರ ಸಂಘದ ಪ್ರತಿನಿಧಿಗಳು ಕನ್ನಡವನ್ನು ಕಡ್ಡಾಯಗೊಳಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಸರ್ಕಾರ ಯಾವುದೇ ಕಾರಣಕ್ಕೂ ತನ್ನ ಕ್ರಮದಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು. ಹಿರಿಯ ಸಾಹಿತಿಗಳಾದ ಎ ವಿ ನಾವಡ, ವಸಂತ ಕುಮಾರ ಪೆರ್ಲ ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಸಾಹಿತಿಗಳು ಉಪಸ್ಥಿತರಿದ್ದರು.

 

ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ ಕೆ ಕಾರ್ಯಕ್ರಮ ನಿರ್ವಹಿಸಿದರು. ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌ ಪಿ, ಕುಲಸಚಿವ (ಪರೀಕ್ಷಾಂಗ) ಪ್ರೊ ಪಿ ಎಲ್‌ ಧರ್ಮ, ಸಿಂಡಿಕೇಟ್‌ ಸದಸ್ಯರು ಹಾಜರಿದ್ದರು.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post