ಮಿಸ್ಸಿ ರೋಗಕ್ಕೆ ದಾವಣಗೆರೆಯ 5 ವರ್ಷದ ಕಂದಮ್ಮ ಬಲಿ

Upayuktha
0

 

ದಾವಣಗೆರೆ: ದಾವಣಗೆರೆಯಲ್ಲಿ ಮಿಸ್ಸಿ ರೋಗಕ್ಕೆ 5 ವರ್ಷದ ಕಂದಮ್ಮ ಸಾವನ್ನಪ್ಪಿದೆ. ಈ ವಿಷಯದ ಕುರಿತು ದಾವಣಗೆರೆ ಜಿಲ್ಲಾಧಿಕಾರಿ ಮಹಾತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ. 


ಐದು ವರ್ಷದ ಕಂದಮ್ಮ  ಚಿತ್ರದುರ್ಗದಿಂದ ರೆಫೆರ್ ಆಗಿ ಬಂದಿದ್ದ  ಸೋಂಕಿತ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಮಗುವಿಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳ್ಳಿಗೆ 3 ಗಂಟೆಗೆ ಸಾವನ್ನಪ್ಪಿದೆ.  


ದಾವಣಗೆರೆಯಲ್ಲಿ ಒಟ್ಟು 10 ಮಿಸ್ಸಿ ರೋಗ ಪ್ರಕರಣಗಳಿದ್ದು. ಪ್ರಸ್ತುತ 8 ಮಂದಿ ಗುಣಮುಖರಾಗಿದ್ದಾರೆ ಇದರ ಜೊತೆಗೆ ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಈ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. 


ಮಿಸ್ಸಿ ಎಂಬ ರೋಗವು ಸಾಮಾನ್ಯವಾಗಿ 8 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಈ ರೋಗ ಕಂಡು ಬರುತ್ತದೆ. ಈ ರೋಗದಿಂದ 70ರಷ್ಟು ಹೃದಯದ ನಾಳದ ಹಿಗ್ಗುವಿಕೆ, ಕಡಿಮೆ ರಕ್ತದೊತ್ತಡ, ಹೃದಯ ಸ್ನಾಯು ಅಶಕ್ತತೆ ಕಾಡುತ್ತದೆ. ಇದರ ಜೊತೆಗೆ ಕೆಲವರಲ್ಲಿ ನಿಮೋನಿಯ ಸಮಸ್ಯೆ ಕೂಡ ಕಾಣಿಸುತ್ತದೆ.  


ಕೊರೊನಾದಿಂದ ಗುಣಮುಖರಾದವರಲ್ಲಿ ಈ ಮಿಸ್ಸಿ ರೋಗ ಕಾಣಿಸುತ್ತದೆ. ಬಹು ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಈ ರೋಗಕ್ಕೆ ಹಿಮೋಗ್ಲೋಬಿನ್ ಔಷಧ ನೀಡಿದರೆ ಗುಣ ಹೊಂದುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಚಿಕಿತ್ಸೆಗೆ ಸುಮಾರು ಒಂದು ಲಕ್ಷದವರೆಗೆ ಖರ್ಚಾಗುತ್ತದೆ. ಇನ್ನೂ ಲಕ್ಷಣ ರಹಿತ ಕೋವಿಡ್ ಸೋಂಕಿತ ಮಕ್ಕಳಲ್ಲಿ ಅತಿಸಾರ, ಡೆಂಗ್ಯೂ, ಜ್ವರ, ನಂತರ ಮಿಸ್ಸಿ ರೋಗ ಪತ್ತೆಯಾಗುತ್ತದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top