ವಿವಿ ಕಾಲೇಜಿನ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತ ವೇಣು ವಿನೋದ್ ಅಭಿಮತ
ಮಂಗಳೂರು: ಸ್ವಯಂ ನವೀಕರಣ ಮತ್ತು ಅನ್ವಯಿಸಿಕೊಳ್ಳುವಿಕೆಯನ್ನು ಅಳವಡಿಸಿಕೊಂಡಷ್ಟೂ ಪತ್ರಿಕೋದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ, ಎಂದು ʼವಿಜಯವಾಣಿʼ ಪತ್ರಿಕೆಯ ಮುಖ್ಯ ವರದಿಗಾರ ವೇಣು ವಿನೋದ್ ಕೆ.ಎಸ್ ಅಭಿಪ್ರಾಯಪಟ್ಟರು.
ಕನ್ನಡ ಪತ್ರಿಕಾ ದಿನಾಚರಣೆಯ ಭಾಗವಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು, ರಚನಾತ್ಮಕ ಮತ್ತು ತಾಂತ್ರಿಕ ವಿಭಾಗಗಳೆರಡಲ್ಲೂ ಅವಕಾಶಗಳಿವೆ. ಜಾಹಿರಾತು, ಸ್ಕ್ರಿಪ್ಟ್ ಬರವಣಿಗೆ, ಮಾಧ್ಯಮ ಸಲಹೆ, ಸಾರ್ವಜನಿಕ ಸಂಪರ್ಕ, ಕಾರ್ಯಕ್ರಮ ನಿರ್ವಹಣೆ, ಡಿಜಿಟಲ್ ಮಾರುಕಟ್ಟೆಗಳು ಹೊಸಬರಿಗಾಗಿ ಕಾಯುತ್ತಿವೆ. “ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗಿಂತ ಪತ್ರಿಕೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಓದಬೇಕು. ಜನರ ಅಭಿರುಚಿ ಅರಿತು, ಜನಜೀವನಕ್ಕೆ ಹತ್ತಿರವಾಗುವುದನ್ನು ಬರೆದಾಗ ನಿಮ್ಮ ಲೇಖನಗಳಿಗೆ ಹೆಚ್ಚು ಬೇಡಿಕೆಯಿರುತ್ತದೆ,” ಎಂದು ಅವರು ಸಲಹೆ ನೀಡಿದರಲ್ಲದೆ, ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವುದು ಮುಖ್ಯ, ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಬದಲಾಗುತ್ತಿರುವ ಸಮಾಜದ ಅಗತ್ಯತೆಗಳನ್ನು ಪತ್ರಕರ್ತ ಅರ್ಥಮಾಡಿಕೊಳ್ಳಬೇಕು. ಸಮಾಜದ ಆರೋಗ್ಯ, ದೇಶದ ಅಬಿವೃದ್ಧಿಯಲ್ಲಿ ಆತನ ಜವಾಬ್ದಾರಿ ಅತ್ಯಂತ ನಿರ್ಣಾಯಕ, ಎಂದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಶಾನಿ ಕೆ ಆರ್, ಪತ್ರಿಕೆ ನಡೆಸುವುದು ಉದ್ಯಮಕ್ಕಿಂದ ಒಂದು ಕರ್ತವ್ಯ, ರಾಷ್ಟ್ರೀಯತೆಯ ಭಾಗ ಎಂದು ಅಭಿಪ್ರಾಯಪಟ್ಟರು. ಬಳಿಕ ನಡೆದ ಸಂವಾದದಲ್ಲಿ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಗುರುಪ್ರಸಾದ್ ಟಿ ಎನ್, ಡಾ. ಸೌಮ್ಯ ಕೆ ಬಿ, ಜೊತೆಗೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Key Words: Patrika Dinacharane, UCM, ಪತ್ರಿಕಾ ದಿನಾಚರಣೆ, ಮಂಗಳೂರು ವಿವಿ ಕಾಲೇಜು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
It was a informative session, Thank you sir
ReplyDelete