ಪುತ್ತೂರು: ಕೈತೋಟ ಎಂಬುದು ಒಂದು ಸುಂದರ ಕಲೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಜೀವನದಲ್ಲಿ ಸಸಿಗಳನ್ನು ನೆಟ್ಟು ತಮ್ಮ ಸ್ವಂತ ಕೈತೋಟ ನಿರ್ಮಿಸುವ ಸುಂದರ ಹವ್ಯಾಸವನ್ನು ಮೈಗೂಡಿಸಿಕೊಳ್ಳುವ ಅಗತ್ಯತೆ ಇದೆ. ಹಸಿರಿನ ಮೇಲಿನ ಪ್ರೀತಿಯೆಂಬುದು ಒಂದು ಬೀಜವಿದ್ದಂತೆ, ವಿದ್ಯಾರ್ಥಿಗಳು ಅದನ್ನು ತಮ್ಮ ಮನದಲ್ಲಿ ಬಿತ್ತಿದರೆ ಅದು ಎಂದಿಗೂ ಸಾಯುವುದಿಲ್ಲ. ಅದಕ್ಕೆ ಮನುಷ್ಯನ ಸಾಕಷ್ಟು ಕಠಿಣ ಕ್ಷಣಗಳನ್ನು ಗುಣಪಡಿಸುವ ಅದ್ಭುತ ಶಕ್ತಿ ಇದೆ ಎಂದು ನರೇಂದ್ರ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ, ಯಕ್ಷಗಾನ ಕಲಾವಿದೆ ಮಧುರಾ ಹೇಳಿದರು.
ಅವರು ಪದವಿ ಕಾಲೇಜಿನ ಸಸ್ಯ ಶಾಸ್ತ್ರ, ನೇಚರ್ ಕ್ಲಬ್ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ "ಹಸಿರಿನೊಂದಿಗೆ ಜೀವನವು ಸ್ವರ್ಗವಾಗಿದೆ" ಎಂಬ ವಿಷಯದ ಮೇಲೆ ನಡೆದ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅವರು, ತ್ಯಾಜ್ಯವನ್ನು ಮರುಬಳಕೆ ಮಾಡಿ ಹಸಿರನ್ನು ಬೆಳೆಸುವ ವಿಧಾನ ಮತ್ತು ಕೈತೋಟದ ಅಗತ್ಯತೆ ಹಾಗೂ ಅನುಕೂಲತೆಯ ಬಗ್ಗೆ ತಮ್ಮ ಸ್ವಂತ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ಶುಭ ಹಾರೈಸಿದರು.
ನೇಚರ್ ಕ್ಲಬ್ ನ ಸಂಯೋಜಕಿ ಹಾಗೂ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ಪಿ.ಜಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ವಿದ್ಯಾಶ್ರೀ ಸ್ವಾಗತಿಸಿ, ಶರಮ್ಯಾ ಸ್ವಾಗತಿಸಿದರು. ಶ್ರೇಯ ವಂದಿಸಿ, ಮಾನಸ ಸರಸ್ವತಿ ನಿರೂಪಿಸಿದರು. ವೆಬಿನಾರ್ ನಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ