ಸಣ್ಣ ಜಾತಿಗಳು ರಾಜಕೀಯವಾಗಿ ನಶಿಸುವ ಅಂಚಿನಲ್ಲಿ

Upayuktha
0

(ಸಾಂದರ್ಭಿಕ ಚಿತ್ರ- ಕೃಪೆ: ಎನಾಮಿಕ್ ಟೈಮ್ಸ್)


ನಾವು ಕಾನೂನಾತ್ಮಕವಾಗಿ ಅಳವಡಿಸಿಕೊಂಡ ಹಿಂದುಳಿದ ವರ್ಗದ ಸಾಮಾಜಿಕ ರಾಜಕೀಯ ನ್ಯಾಯದ  ಮೀಸಲಾತಿ ಹೇಗಿದೆ ಅಂದರೆ ಹಿಂದುಳಿದ ವರ್ಗ ಪರಿಗಣಿಸುವಾಗ (1A, 2A, 3A.ಇತ್ಯಾದಿ) ಲಿಂಗಾಯತರು, ಒಕ್ಕಲಿಗರು, ಈಡಿಗರು, ಮೊಗವೀರರು ಬಂಟರು ಗಾಣಿಗರು ಹೀಗೆ ಸುಮಾರು 20ಕ್ಕೂ ಮಿಕ್ಕಿದ ಜಾತಿ ಉಪ ಜಾತಿಗಳನ್ನು ಒಟ್ಟು ಸೇರಿಸಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಈ ಹಿಂದುಳಿದ ವರ್ಗದ ಮೀಸಲಾತಿಯನ್ನು ಸ್ಥಳೀಯ ಆಡಳಿತದ ಚುನಾವಣೆ, ಉದ್ಯೋಗ ಮತ್ತಿತರ ಸರಕಾರದ ಸೌಲಭ್ಯ ನೀಡುವಾಗ ಈ ಹಿಂದುಳಿದ ವರ್ಗದ ಮೀಸಲಾತಿಯನ್ನು ಕಾನೂನು ನಿಯಮದ ಪ್ರಕಾರ ಅನ್ವಯಿಸುತ್ತಾ ಬಂದಿದ್ದೇವೆ.


ಅದೇ ಆಶ್ಚರ್ಯವೆಂದರೆ ಮಂತ್ರಿಗಿರಿ ಹಂಚುವಾಗ ಅವರ ಅನುಕೂಲ ಶಾಸ್ತ್ರದ ರಾಜಕೀಯ ಸಾಮಾಜಿಕ ನ್ಯಾಯದ ಮೀಸಲಾತಿ ಯಾವ ರೀತಿಯಲ್ಲಿ ಅನ್ವಯಿಸುತ್ತಾರೆ ಅಂದರೆ ರಾಜ್ಯದ ಸಚಿವ ಸಂಪುಟದಲ್ಲಿ ಇರ ಬೇಕಾದ ಸಚಿವರ ಒಟ್ಟು ಸಂಖ್ಯೆ 34 (ಮುಖ್ಯಮಂತ್ರಿಗಳನ್ನು ಸೇರಿಸಿ) ಮಂತ್ರಿಮಂಡಲ ರಚಿಸುವಾಗ ಇದರಲ್ಲಿ ಸರಿಸುಮಾರು 6ರಿಂದ 7 ಲಿಂಗಾಯತರು; 5ರಿಂದ6 ಒಕ್ಕಲಿಗರು. ಇದು ಪ್ರತ್ಯೇಕ ಮಾತ್ರವಲ್ಲ ಈ ಎರಡು ಜಾತಿಗಳು ಹಿಂದುಳಿದ ವರ್ಗದ ಲೆಕ್ಕಾಚಾರದಿಂದ ಹೊರಕ್ಕೆ. ಅದೇ ಇನ್ನಿತರ ಹಿಂದುಳಿದ ಜಾತಿಗಳು ಅಂದರೆ ಈಡಿಗರು, ಮೊಗವೀರರು, ಬಂಟರು, ಗಾಣಿಗರು ಮುಂತಾದ ಸುಮಾರು 15ರಿಂದ 20 ಹಿಂದುಳಿದ ಜಾತಿಗಳನ್ನು ಒಟ್ಟು ಸೇರಿಸಿ ಗರಿಷ್ಠ 3 ರಿಂದ 4 ಮಂದಿಗೆ ಮಂತ್ರಿಗಿರಿ ನೀಡಿ ಸಾಮಾಜಿಕ ರಾಜಕೀಯ  ನ್ಯಾಯಾ ನೀಡಿದ್ದೇವೆ ಅನ್ನುತ್ತಾರಲ್ಲ! ಇದು ಹೇಗೆ ಸಾಮಾಜಿಕ ರಾಜಕೀಯ ನ್ಯಾಯ ಅನ್ನಿಸಿಕೊಳ್ಳುತ್ತದೆ ಅನ್ನುವುದು ನಮ್ಮ ಪ್ರಶ್ನೆ? ಇದರಿಂದಾಗಿ ಅತಿ ಸಣ್ಣ ಜಾತಿ ಉಪ ಜಾತಿಗಳು ರಾಜಕೀಯವಾಗಿ ಮೂಲೆ ಪಾಲಾಗುವುದು ಖಚಿತವಲ್ಲವೇ?


ನಮ್ಮ ಒತ್ತಾಸೆ ಅಂದರೆ ಮಂತ್ರಿ ಪದವಿ ಹಂಚುವಾಗ ಕೂಡಾ ಸ್ಥಳೀಯ ಪಂಚಾಯತ್‌ಗಳಿಗೆ ಯಾವ ರೀತಿಯಲ್ಲಿ ರಾಜಕೀಯ ಮೀಸಲಾತಿ ನೀಡುತ್ತೀರೋ ಅದೇ ರೀತಿಯ ಅಳತೆ ಗೇೂಲಿನ ಮೀಸಲಾತಿಯನ್ನು ಅನುಷ್ಠಾನ ಮಾಡಿ. ಅದು ಬಿಟ್ಟು ಯಾವ ಯಾವ ಜಾತಿಯಲ್ಲಿ ಒಟ್ಟು ಎಷ್ಟು ಮತಗಳಿವೆ ಎಂಬ ಆಧಾರದ ಮೇಲೆ ಜಾತಿ ಲೆಕ್ಕಾಚಾರ ಮಾಡಿ ಸಚಿವ ಸ್ಥಾನ ನೀಡುತ್ತಾ ಹೇೂದರೆ ಇದು ಸಾಮಾಜಿಕ ರಾಜಕೀಯ ನ್ಯಾಯ ಅನ್ನಿಸಿ ಕೊಳ್ಳುವುದಿಲ್ಲ. ಬದಲಾಗಿ  ಓಟ್ ಬ್ಯಾಂಕ್ ರಾಜಕೀಯ ಎಂದು ಕರೆಯುವುದು ಸೂಕ್ತ. ಹೀಗೆ ಮುಂದುವರಿದರೆ ಮುಂದೊಂದು ದಿನ ಲಿಂಗಾಯತರು ಒಕ್ಕಲಿಗರನ್ನು ಹೊರತು ಪಡಿಸಿದ ಮಿಕ್ಕಿ ಉಳಿದ ಎಲ್ಲಾ ಹಿಂದುಳಿದ ಜಾತಿಗಳು ಒಟ್ಟಾಗಿ ಕ್ರೊಡೀಕೃತ ಮತ ಬ್ಯಾಂಕ್ ಆಗಿ ಪರಿವರ್ತನೆಯಾಗುವ ಕಾಲ ಕೂಡಿ ಬಂದರೂ ಆಶ್ಚರ್ಯ ಪಡ ಬೇಕಾಗಿಲ್ಲ?. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸರಂತಹ ಜಾತಿ ಮೀರಿದ ಸಮರ್ಥ ನಾಯಕ ಹುಟ್ಟಿ ಬರಬಹುದು ಕಾದು ನೇೂಡಿ.


- ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top