ಆರೋಗ್ಯಕ್ಕಾಗಿ ಮುದ್ರಾ ಯೋಗ

Upayuktha
0


ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯು ಪದೇ ಪದೇ ಒತ್ತಡಕ್ಕೆ ಒಳಗಾಗಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ. ವ್ಯಕ್ತಿಯ ಉತ್ತಮ ಜೀವನ ಶೈಲಿಗೆ ಮತ್ತು ಆರೋಗ್ಯ ರಕ್ಷಣೆಗೆ ಪತಂಜಲಿ ಋಷಿಗಳ ಅಷ್ಟಾಂಗ ಯೋಗ ಇದರೊಂದಿಗೆ ನಮ್ಮ ಪೂರ್ವಜರು ತಿಳಿಸಿದ ಮುದ್ರೆಗಳು ಬಹಳ ಸಹಕಾರಿಯಾಗುತ್ತದೆ. ಇವು ಕೈಗಳು ಮತ್ತು ಬೆರಳುಗಳ ಸಹಾಯದಿಂದ ಮಾಡುವಂತಹುದು. ಕೈ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ. ಮುದ್ರೆ ಎಂದರೆ ಸಂಸ್ಕೃತದಲ್ಲಿ ‘ಭಾವ’ ಎಂದಾಗುತ್ತದೆ. ಮುದ್ರೆ ಎಂದರೆ ‘ಮೊಹರು’ ಎಂದರ್ಥ ಇದೆ. ಮುದ್ರೆಗಳನ್ನು ವಿಶೇಷವಾಗಿ ಮನಸ್ಸಿನ ಭಾವನೆಗಳನ್ನು ಪ್ರಕಟಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಉಪಯೋಗಿಸಲಾಗುತ್ತಿದೆ. ಮುದ್ರಾ ಎಂಬ ಪದವನ್ನು ಸಂಜ್ಞೆ ಎಂದು ತಿಳಿಸಲ್ಪಟ್ಟಿದೆ. ಮುದ್ರೆಗಳು ಮನಸಿಕ ಭಾವನಾತ್ಮಕ, ಭಕ್ತಿಯ ಹಾಗೂ ಕಲಾತ್ಮಕ ಸಂಜ್ಞೆ ಎಂದು ವಿವರಿಸಬಹುದು.


ಯೋಗಿಗಳು ಮುದ್ರೆಗಳನ್ನು ಚೈತನ್ಯ ಶಕ್ತಿ ಪ್ರವಹಿಸುವಿಕೆ ಎಂದು ತಿಳಿಸುತ್ತಾರೆ. ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗುತ್ತಿದೆ. ಕುಲಾರ್ಣವ ತಂತ್ರ ಎಂಬ ಗ್ರಂಥದಲ್ಲಿ ಮುದ್ರಾ ಎಂಬ ಪದದ ಬಗ್ಗೆ ಹೀಗೆ ವಿವರಿಸಲಾಗಿದೆ. ಮುದ್ ಎಂದರೆ ಸಂತೋಷ, ಹರ್ಷ, ಆನಂದ, ದ್ರವಯ್ ಎಂದರೆ ಹೊರ ಸೆಳೆಯುವುದು. ಮುದ್ರೆ ನಮ್ಮ ಮನಸ್ಥಿತಿ, ಮನೋಭಾವವನ್ನು ಬಳೆಯ ರೀತಿಗೆ ತರಲು ಸಹಕರಿಸುತ್ತದೆ. ಒಳ್ಳೆಯ ರೀತಿಗೆ ತರಲು ಸಹಕಾರಿಯಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಬಹುದು. ‘ಅಂಗೈಯಲ್ಲಿ ಆರೋಗ್ಯ’ ಎಂಬಂತೆ ಅಂಗೈಯ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುದ್ರೆಗಳು ಉನ್ನತ ಹಂತದ ಅಭ್ಯಾಸಗಳಾಗಿವೆ.



ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈಯಲ್ಲಿನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಹಾಗೂ ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ ಚೈತನ್ಯವನ್ನು ಹೊಂದಿದೆ. ಎಲ್ಲಾ ಬೆರಳುಗಳು ಚೇತನದಾಯಕ ಹಾಗೂ ಅವು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನ ತತ್ವಃ, ತೋರು ಬೆರಳು ವಾಯು, ಮಧ್ಯದ ಬೆಳು ಆಕಾಶ, ಉಂಗುರದ ಬೆರಳು ಪೃಥ್ವಿ (ಭೂಮಿ) ಕಿರು ಬೆರಳು ವರುಣನ್ನು (ಜಲತತ್ವ) ಪ್ರತಿನಿಧಿಸುತ್ತದೆ. ಪಂಚ ಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ, ಬೆರಳುಗಳ ತುದಿಗೆ ಸ್ಪರ್ಶಿಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತದೆ.


ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗುತ್ತಿದೆ. ಇವು ಕೈಗಳು ಮತ್ತು ಬೆರಳುಗಳ ಸಹಾಯದಿಂದ  ಮಾಡುವಂತಹುದು. ಕೈಯ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ´ಮುದ್ರೆ'. ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈಯಲ್ಲಿನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ, ಹಾಗೂ ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ ಚೈತನ್ಯವನ್ನು ಹೊಂದಿದೆ. ಎಲ್ಲಾ ಬೆರಳುಗಳೂ ಚೇತನದಾಯಕ ಹಾಗೂ ಅವು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನಿ ತತ್ವ; ತೋರು ಬೆರಳು ವಾಯು, ಮಧ್ಯದ ಬೆರಳು ಆಕಾಶ; ಉಂಗುರದ ಬೆರಳು ಪೃಥ್ವಿ (ಭೂಮಿ); ಕಿರುಬೆರಳು ವರುಣ (ಜಲತತ್ವ) ಪ್ರತಿನಿಧಿಸುತ್ತವೆ.

 

ಮುದ್ರೆಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಖ್ಯವಾಗಿ ನೃತ್ಯದಲ್ಲಿ, ದೇವರ ಪೂಜೆಯಲ್ಲಿ ಹಾಗೂ ಯೋಗಾಭ್ಯಾಸದ ಸಮಯದಲ್ಲಿ ಉಪಯೋಗಿಸುತ್ತಾರೆ. ಮುದ್ರೆಗಳನ್ನು ವಿಶೇಷವಾಗಿ ಮನಸ್ಸಿನ ಭಾವನೆಗಳನ್ನು ಪ್ರಕಟಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಉಪಯೋಗಿಸಲಾಗುತ್ತದೆ. ಸಂಸ್ಕೃತದಲ್ಲಿ ಮುದ್ರೆ ಎಂದರೆ ´ಭಾವ´ ಎಂದಾಗುತ್ತದೆ. ಮುದ್ರೆಗಳನ್ನು ಉತ್ತೇಜಕಗಳೆಂದು ಸಹ ತಿಳಿಯಲಾಗಿದೆ. ಮುದ್ರೆಗಳು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ಮೃದುವಾದ ಒತ್ತಡವನ್ನು ತಂದು ಪ್ರಾಣ ಶಕ್ತಿ ಮತ್ತು ಶಾರೀರಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಮುದ್ರೆಗಳನ್ನು ಯಾರೂ ಬೇಕಾದರೂ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು.  ಕುಳಿತುಕೊಂಡು ಇರುವಾಗಲಾದರೂ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಹಾಸಿಗೆಯಲ್ಲಿ ಮಲಗಿರುವಾಗಲೂ ಅಲ್ಲದೆ ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಮಾಡಬಹುದು.


ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಮುದ್ರೆಗಳನ್ನು ಯಾವುದೇ ಸ್ಥಿತಿಯಲ್ಲೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಒಂದೊಂದು ಮುದ್ರೆಯನ್ನು ಕನಿಷ್ಠ 15 ರಿಂದ 30 ನಿಮಿಷಗಳ ವರೆಗೆ ಮಾಡಿದಲ್ಲಿ ವಿಶೇಷ ಫಲ ದೊರಕುವುದು. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿರಲಿ. ಕೈಗಳು ಸಡಿಲವಾಗಿರಲಿ. ಮುದ್ರೆ ಹಾಕಿದಾಗ ಹಸ್ತವು ಮೇಲ್ಮಖವಾಗಿರಲಿ. ಮುಖದಲ್ಲಿ ಮುಗುಳು ನಗುವಿರಲಿ.  


- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, 

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,

“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,

ಪಿ.ಒ. ಕೊಂಚಾಡಿ, ಯೆಯ್ಯಾಡಿ ಪದವು, 

ಮಂಗಳೂರು-575 008 

ಮೊಬೈಲ್ ನಂಬ್ರ: 9448394987


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top