ಯೋಗ: ಆರೋಗ್ಯಕ್ಕೆ ವಿನೂತನ ಆಯಾಮ ಬಣ್ಣ ಚಿಕಿತ್ಸೆ

Upayuktha
3 minute read
0


 


ಬಣ್ಣ ಬಣ್ಣದ ಆಸೆ, ಬಣ್ಣದ ಕನಸು….! ಬಣ್ಣಗಳು ಸ್ಥಿರ. ಕೆಲವರಿಗೆ ಆ ಬಣ್ಣ ಇಷ್ಟ, ಈ ಬಣ್ಣ ಇಷ್ಟ ಮತ್ತೆ ಕೆಲವರಿಗೆ ಕಪ್ಪು, ಬಿಳಿ ಇಷ್ಟ. ನೂರಾರು ಬಗೆಯ ಬಟ್ಟೆಗಳಿಗೆ ನೂರು, ಸಾವಿರ ಬಣ್ಣ, ವಿನ್ಯಾಸ, ಬಗೆಬಗೆಯ ತಿಂಡಿಗಳಿಗೆಲ್ಲ ಬೇರೆಬೇರೆಯೇ ಬಣ್ಣ. ಬಣ್ಣದ ಹೂವು, ಬಣ್ಣದ ಹಕ್ಕಿ, ಬಣ್ಣದ ಚಿಟ್ಟೆ, ಬಣ್ಣದ ಪ್ರಾಣಿಗಳು, ಮನೆಗೊಂದು ಬಣ್ಣ, ವಾಹನಕ್ಕೊಂದು ಬಣ್ಣ, ಬಾನಿಗೆ ನೀಲಿ ಬಣ್ಣ, ಕಾಡಿಗೆ ಹಸಿರು ಬಣ್ಣ. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥ, ಒಂದೊಂದು ಸಂಕೇತ! ಅಬ್ಬ! ಪ್ರಪಂಚವೆಲ್ಲ ಬಣ್ಣಗಳದ್ದೇ ಆಟ! ಅಲ್ಲವೇ?


ಸೃಷ್ಟಿಯೆಂಬ ಈ ಸೋಜಿಗದಲ್ಲೇ ಸಪ್ತವರ್ಣಗಳೂ ಸೃಷ್ಟಿಯಾಗಿವೆ. ಹಾಗಿದ್ದರೆ ಬಣ್ಣದ ಇತಿಹಾಸ ಸೃಷ್ಟಿಯ ಇತಿಹಾಸದೊಂದಿಗೇ ಆರಂಭ! ಈ ಹಿನ್ನೆಲೆಯಲ್ಲಿ ನೋಡಿದರೆ ಬಣ್ಣ ಚಿಕಿತ್ಸೆ ಎಂಬ ಪರಿಕಲ್ಪನೆಯೂ ಆಗಲೇ ಆರಂಭಗೊಂಡಿದೆಯೋ ಏನೋ ಎನ್ನಬಹುದು. ಆದರೆ ಅಧಿಕೃತವಾಗಿ  ಬಹಳ ಹಿಂದೆಯೇ ಬಣ್ಣ ಚಿಕಿತ್ಸೆ ರೂಪುಗೊಂಡಿತ್ತು ಮತ್ತು ಪ್ರಸ್ತುತ ಅದು ಅತ್ಯಂತ ಜನಪ್ರಿಯಗೊಳ್ಳುತ್ತಿದೆ ಎನ್ನುವುದಂತೂ ಸತ್ಯ.


ಬಣ್ಣಗಳು ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನು ಅಲ್ಲಗಳೆಯುವುದಂತೂ ಅಸಾಧ್ಯ ತಾನೇ? ಎಲ್ಲರೂ ಇದನ್ನು ಒಪ್ಪಲೇಬೇಕು. ಆದರೆ ಬಣ್ಣಕ್ಕೆ ಚಿಕಿತ್ಸಕ ಗುಣ ಇದ್ದೇ ಇದೆ ಎಂದಾಯಿತು. ಬಣ್ಣಗಳು ನಮ್ಮ ಕಣ್ಣುಗಳ ಮೂಲಕ ಹಾದು, ಚರ್ಮವನ್ನು ಪ್ರವೇಶಿಸಿ, ಮನಸ್ಸಿಗೆ ನುಗ್ಗಿ ನಮ್ಮ ದೇಹದಲ್ಲಿರುವ ಯೋಗ ಚಕ್ರಗಳ ಮೇಲೆಯೂ ನೇರ ಪರಿಣಾಮ ಬೀರಿ ದೇಹ ಮನಸ್ಸುಗಳ ಆರೋಗ್ಯದಲ್ಲಿ ಆಟ ಆಡುತ್ತವೆ.



ಬಣ್ಣ ಚಿಕಿತ್ಸೆಯ ಇತಿಹಾಸ:

ಈ ಮೊದಲೇ ಪ್ರಸ್ತಾಪಿಸಿರುವಂತೆ ಈ ಬಣ್ಣ ಚಿಕಿತ್ಸೆಯ ಪದ್ಧತಿ ಇಂದು ನಿನ್ನೆಯದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿ.ಪೂದ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿ.ಪೂದ ಕೆಲವು ಶತಮಾನಗಳ ಹಿಂದೆ ಈಜಿಪ್ಟ್ ಹಾಗೂ ಭಾರತ ದೇಶದಲ್ಲಿ ಆರೋಗ್ಯಕ್ಕಾಗಿ ಸೂರ್ಯಕಿರಣಗಳನ್ನು ದೇಹಕ್ಕೆ ಹಾಯಿಸಿಕೊಳ್ಳುತ್ತಿದ್ದರು ಮತ್ತು ಇದರಲ್ಲಿನ ಪ್ಲೋರಾ ಬಣ್ಣಗಳು ಮಾನಸಿಕ ಕ್ರಿಯಾಶೀಲತೆಗೆ ಕಾರಣವಾಗುತ್ತವೆ ಎಂಬ ಸತ್ಯ ತಿಳಿದಿತ್ತು.

ಕ್ರಿ. ಪೂ 6ನೇ ಶತಮಾನದಲಿ ಓರ್ಪಿಯಸ್ ಎಂಬಾತ ಗ್ರೀಸ್ ದೇಶದಲ್ಲಿ ಮೊತ್ತಮೊದಲ ಬಾರಿಗೆ ಸ್ಥಾಪಿಸಿದ ಒeಣಚಿಠಿhಥಿsiಛಿಚಿಟ ಒಥಿsಣeಡಿಥಿ  (ಆಧ್ಯಾತ್ಮ ರಹಸ್ಯ) ಲೆಯಲ್ಲಿ ಬೆಳಕು ಮತ್ತು ಬಣ್ಣಗಳ ಸಂಯೋಜನೆಯ ತರಂಗ ಚಿಕಿತ್ಸೆಯನ್ನು ಕಾಯಿಲೆ ಶಮನ  ಮ್ತು ಆಧ್ಯಾತ್ಮಿಕ ಪ್ರಚೋದನೆಗಾಗಿ ಪ್ರಯೋಗ ಮಾಡಿದನು. ಪೈಥಾಗೋರಸ್, ಪ್ಲೇಟೋ ಮುಂತಾದ ವಿಶ್ವವಿಖ್ಯಾತ ತತ್ವವಿಜ್ಞಾನಿಗಳು ಈ ವಿಚಾರಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದರು ಎನ್ನಲಾಗಿದೆ.


ರೋಗ ಬಾರದಂತೆ ತಡೆಯುವ ಮತ್ತು ಬಂದ ರೋಗವನ್ನು ಗುಣಪಡಿಸುವ ಶಕ್ತಿ ಬಣ್ಣಗಳಿಗಿದೆ ಎಂದು ಕ್ರಿ.ಶ. 980-1037ರಲ್ಲಿ ಕ್ಯಾನತ್ ಮೆಡಿಲನ್ ಎಂಬಾತ ಪ್ರಚುರಪಡಿಸಿದ. ಬಣ್ಣಗಳ ಒಂದು ನಕ್ಷೆಯಲ್ಲಿ ಆತ ನೀಲಿ ಹಾಗೂ ಬಿಳಿ ಬಣ್ಣ ತಂಪು ನೀಡುವುದಕ್ಕೆ, ಹಳದಿ ಬಣ್ಣ ಸ್ನಾಯು ಸೆಳೆತಕ್ಕೆ ಔಷಧಿ ಎಂದು ಪ್ರತಿಪಾದಿಸಿದ. ಅಮೇರಿಕದ ಜನರಲ್ ಆಗಸ್ಟಸ್ (1801-1894) ಎಂಬಾತ 1876ರಲ್ಲಿ ಪುಸ್ತಕವೊಂದನ್ನು ಬರೆದು ಆಕಾಶ ನೀಲಿ ಬಣ್ಣವು (ಬ್ಲೂರೇಸ್) ಮಾನವನ ಹಾಗೂ ಜಾನುವಾರುಗಳ ರೋಗ ನಿವಾರಣೆಗೆ ಸಹಾಯವಾಗುತ್ತದೆ ಎಂದನು.


ಬೆಳಕು ಹಾಗೂ ಬಣ್ಣ ಚಿಕಿತ್ಸೆ ಪದ್ಧತಿ ಬಗ್ಗೆ ಆ ಬಳಿಕ ಸಂಶೋಧನೆಗಳನೇಕ ನಡೆದವು. 1977ರಲ್ಲಿ ಇಂಗ್ಲೆಂಡ್‍ನ ವೇಲ್ಸ್‍ನಲ್ಲಿ ಕೃಷಿ ಮತ್ತು ಅರಣ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ಕೋಳಿ ಮರಿಗಳ ಮೇಲೆ ಬಣ್ಣ ಪ್ರಯೋಗ ಚಿಕಿತ್ಸೆ ನಡೆಸಿತು. ಕೆಂಬಣ್ಣದ ಮೇಲು ಹಾಸಿನಡಿಯಲ್ಲಿದ್ದ ಕೋಳಿ ಮರಿಗಳು ಚುರುಕಾಗಿ ಓಡಾಡುವುದು ಹಾಗೂ ನೀಲಿ ಬಣ್ಣದ ಮೇಲುಹಾಸಿನ ಕೆಳಗೆ ಇರಿಸಿದ್ದ ಕೋಳಿಮರಗಳು ತುಂಬಾ ನಿಷ್ಕ್ರಿಯವಾಗಿರುವುದನ್ನು ಗಮನಿಸಲಾಯಿತು. ಆದರೆ ಇದೇ ವೇಳೆ ಅಮೇರಿಕದ ಸಂಸ್ಥೆಯೊಂದರಲ್ಲಿ ನಡೆದ ಕೃಷಿ ಸಂಶೋಧನೆಯೊಂದರಲ್ಲಿ ನೀಲಿ ಬಣ್ಣ ಹೊದೆÉಸಿದ ಗಿಡಗಳಲ್ಲಿ ಹೆಚ್ಚು ಫಲವತ್ತತೆ ಬರುವುದು ಕಂಡು ಬಂತು.


ಇವೆಲ್ಲ ಬಣ್ಣ ಚಿಕಿತ್ಸೆಯ ಒಂದು ಸಣ್ಣ ಇತಿಹಾಸವಾದರೆ, ಪ್ರಸ್ತುತ ನಾವು ಬೇರೆ ಬೇರೆ ಬಣ್ಣಗಳು ಹೇಗೆ ಬೇರೆ ಬೇರೆ ಗುಣ ಸ್ವಭಾವ, ಶಕ್ತಿಗಳನ್ನು ಹೊಂದಿವೆÉ ಹಾಗೂ ಆರೋಗ್ಯದ ವಿಚಾರದಲ್ಲಿ ಇವುಗಳ ಪಾತ್ರವೇನೆಂದು ಪರಿಶೀಲಿಸಬಹುದು.


ಬಣ್ಣಗಳು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತವೆ. ಕಣ್ಣಿನಿಂದಷ್ಟೇ ಕಾಣಬಹುದಾದ ಬಣ್ಣಗಳನ್ನು ಚರ್ಮ, ಮನಸ್ಸುಗಳೂ ಹೀರಿಯೇ ಹೀರುತ್ತವೆ. ಇನ್ನು, ನಮ್ಮ ದೇಹದೊಳಗಿರುವ ಏಳು ಯೋಗಚಕ್ರಗಳಿಗೂ ನಿರ್ದಿಷ್ಟ ಬಣ್ಣಗಳು ಹೊಂದಿಕೊಂಡಿವೆ. ಈ ಯೋಗಚಕ್ರಗಳು ಚೈತನ್ಯವಾಹಕಗಳಾಗಿದ್ದು, ಪ್ರಕೃತಿಯಲ್ಲಿನ ತರಂಗಗಳನ್ನು ಸಂಗ್ರಹಿಸಿ ದೇಹದ ನಾಡಿ, ಧಮನಿ, ಶಿರಸ್ಸಿಗೆ ತಲುಪಿಸುತ್ತವೆ. ಹೊರಗಿನಿಂದ ನಾವು ನೋಡುವ ಬಣ್ಣಗಳು  ನಿರ್ದಿಷ್ಟ ಚಕ್ರಗಳ ಮೇಲೆ ನೇರ ಪರಿಣಾಮ ಬೀರಿ ನಮ್ಮ ದೇಹ ಮನಸ್ಸುಗಳ ಆರೋಗ್ಯದಲ್ಲಿ ಪಾತ್ರ ವಹಿಸುತ್ತದೆ. ಈ ರೀತಿಯ ಪ್ರಕ್ರಿಯೆಯೇ ಬಣ್ಣ ಚಿಕಿತ್ಸೆ ಆಗಿದೆ.


ಬಣ್ಣಗಳ ಜಗತ್ತು ಅತ್ಯಂತ ವ್ಯಾಪಕ, ಆಕರ್ಷಕ ಹಾಗೂ ವಿಶೇಷ ಎನ್ನಬಹುದು. ಬಣ್ಣಗಳಷ್ಟು ಗಾಢವಾಗಿ ಕಾಡುವ ಪರಿಕಲ್ಪನೆ ಬೇರೊಂದಿಲ್ಲ. ಬಣ್ಣಗಳ ಸುಂದರವಾಗಿ ಸೆಳೆಯುವ ವೈಶಿಷ್ಟ್ಯ ಇನ್ನೊಂದಿಲ್ಲ. ಬಣ್ಣದ ಜಗತ್ತಿಗೆ ಮಾರುಹೋಗದವರಿಲ್ಲ. ಇಷ್ಟೊಂದು ಬಲಿಷ್ಠವಾಗಿರುವ ಬಣ್ಣದ ಜಗತ್ತು ಔಷಧರೂಪವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನ್ನ ಕಾರ್ಯ ಮಾಡಿಯೇ ಮಾಡುತ್ತದೆ. ಅತ್ಯಂತ ಸರಳ ವಿಧಾನದ ಈ ಚಿಕಿತ್ಸೆಯನ್ನು ಸಾಧ್ಯವಾದಷ್ಟು ಬಳಸಿಕೊಳ್ಳುವುದು ಅಪೇಕ್ಷಣೀಯವೇ ಸರಿ.


ನುರಿತ ಯೋಗ ಶಿಕ್ಷಕರ ಮುಖಾಂತರ ಕಲಿತು, ನಿತ್ಯ-ನಿರಂತರ, ಶಿಸ್ತು ಬದ್ಧ, ಕ್ರಮಬದ್ಧವಾಗಿ ಪ್ರಾಣಾಯಾಮಗಳೊಂದಿಗೆ ಯೋಗಾಭ್ಯಾಸ, ಮುದ್ರೆಗಳನ್ನು ಮತ್ತು ಬಣ್ಣ ಚಿಕಿತ್ಸೆಗಳ ಮೂಲಕ ಅಲ್ಲದೆ ಸತ್‍ಚಿಂತನೆ, ಸನ್ನಡತೆ, ಸರಿಯಾದ ಜೀವನ ಕ್ರಮ,ಮಾಡಿದಲ್ಲಿ ಮನಸ್ಸು ಮತ್ತು ಶರೀರ ಲವಲವಿಕೆಗೊಂಡು, ನಮ್ಮನ್ನು ಕಾಡುವ ಶಾರೀರಿಕ ಬಾಧೆಗಳು ನಿಯಂತ್ರಣದಲ್ಲಿದ್ದು, ಒತ್ತಡ ರಹಿತ ಜೀವನ ಶೈಲಿ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ.


- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, 

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಅಂತರರಾಷ್ಟೀಯ ಯೋಗ  ತೀರ್ಪುಗಾರರು,

“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,

ಪಿ.ಒ. ಕೊಂಚಾಡಿ, ಯೆಯ್ಯಾಡಿ ಪದವು, 

ಮಂಗಳೂರು-575 008 

ಮೊಬೈಲ್ ನಂಬ್ರ: 9448394987


Key Words: Yoga, Colour Therapy, Colours, ಯೋಗ, ಬಣ್ಣ ಚಿಕಿತ್ಸೆ, ಆರೋಗ್ಯಕ್ಕಾಗಿ ಯೋಗ, ಯೋಗಾಭ್ಯಾಸ, ದೇಲಂಪಾಡಿ ಯೋಗ,

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top