ಅಭಿವೃದ್ಧಿ ಅನ್ನುವ ಪದವನ್ನು ವ್ಯಾಖ್ಯಾನಿಸುವುದು ಸುಲಭವಲ್ಲ. ಇದಕ್ಕೆ ವಿವಿಧ ಆಯಾಮಗಳಿವೆ. ವಿಭಿನ್ನವಾದ ದೃಷ್ಟಿ ಕೇೂನಗಳಿಂದ ಸೃಷ್ಟಿ ಸಲ್ಪಡುವ ಪರಿಕಲ್ಪನೆಯೂ ಹೌದು.
ಹಳ್ಳಿಗಳು ತಮ್ಮ ನೆೈಜ ಸ್ವರೂಪವನ್ನು ಕಳಚಿಕೊಂಡು ನಗರೀಕರಣದ ಸೌಕರ್ಯ ಪಡೆಯುವುದು ಅಭಿವೃದ್ಧಿಯೇ? ಸಣ್ಣಪುಟ್ಟ ರಸ್ತೆಗಳನ್ನು ಅಗಲೀಕರಣ ಗೊಳ್ಳಿಸುವುದು ಅಭಿವೃದ್ಧಿಯೇ? ಸೆೈಕಲ್ಲಿನಲ್ಲಿ ಓಡುತ್ತಿದ್ದವ ಮೇೂಟರ್ ಬೆೈಕ್ ಕಾರಿನಲ್ಲಿ ಓಡಲು ಶುರು ಮಾಡಿರುವುದು ಅಭಿವೃದ್ಧಿಯೇ? ಹೀಗೆ ಆಲೇೂಚಿಸುತ್ತಾ ಹೇೂದಾಗ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೇೂಗುತ್ತದೆ.
ದಿನನಿತ್ಯ ನಾವು ಕಂಡು ಮೇಲ್ನೋಟಕ್ಕೆ ಆನಂದಿಸುವ ಅಭಿವೃದ್ಧಿಯ ಪಥಗಳು ಎಷ್ಟು ಭಯಾನಕವಾಗಿದೆ ಅನ್ನುವ ದಿಕ್ಕಿನತ್ತ ಕಣ್ಣು ಹರಿಸಿದ್ದೇವೆಯೇ? ದಿನನಿತ್ಯವೂ ನಾವು ಉಡುಪಿಯಲ್ಲಿ ಕಂಡ ಅನುಭವದ ದೃಷ್ಟಾಂತದೊಂದಿಗೆ ಅಭಿವೃದ್ಧಿಯ ನೆೈಜ ಮುಖದ ಪರಿಚಯ ಮಾಡುವ ಪ್ರಯತ್ನ ಮಾಡುತ್ತೇನೆ.
ನಾವು ನೀವು ದಿನ ನಿತ್ಯವೂ ಕಂಡು ತಿರುಗಾಡುವ ರಸ್ತೆ ಅಂದರೆ ಕಲ್ಸಂಕ-ಕಡಿಯಾಳಿಯಿಂದ ಹಿಡಿದು ಮಣಿಪಾಲ ಬುಡದ ತನಕ. ಸುಮಾರು 20 ವರುಷಗಳ ಹಿಂದಿನ ರಸ್ತೆ ಅಂಗಡಿ ಮುಂಗಟ್ಟು ವ್ಯಾಪಾರ ವ್ಯವಹಾರ ಜನ ಜೀವನ ಹೇಗಿತ್ತು ಅನ್ನುವುದರ ಕಡೆಗೆ ನೆನಪು ಹಾಯಿಸಿದಾಗ ಕಾಣುವ ಸನ್ನಿವೇಶಕ್ಕೂ ಇಂದಿನ ಸನ್ನಿವೇಶಕ್ಕೂ ಅಜಗಜಾಂತರ ಕಾಣುತ್ತೇವೆ. ಅಲ್ವೇ?
ಅಂದು ಕಿರಿದಾದ ರಸ್ತೆ ಇಕ್ಕೆಡಗಳಲ್ಲಿ ಸಣ್ಣಪುಟ್ಟ ಹಂಚಿನ ಕಟ್ಟಡಗಳು ಅದರೊಳಗೆ ಸಣ್ಣಪುಟ್ಟ ಅಂಗಡಿಗಳು ರಸ್ತೆಯ ಬದಿಯಲ್ಲಿ ಗೂಡು ಅಂಗಡಿಗಳು. ಇದಕ್ಕೆ ಸರಿಯಾಗಿ ಜನರೂ ಕೂಡಾ ಸುಖವೊ ಕಷ್ಟವೊ ಹಾಸಿಗೆ ಇದ್ದಷ್ಟೇ ಕಾಲು ಚಾಚಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು.
ಕೇವಲ 15 ರಿಂದ 20 ವರುಷಗಳಲ್ಲಿ ಆದ ಬದಲಾವಣೆ ನೇೂಡಿ ಕಲ್ಸಂಕ ಕಡಿಯಾಳಿಯಿಂದ ಮಣಿಪಾಲ್ ದವರೆಗಿನ ರಸ್ತೆಯೂ ಅಗಲೀಕರಣ ದೊಂದಿಗೆ ಕಾಂಕ್ರೀಟೀಕರಣವೂ ಆಯಿತು.ಇದರೊಂದಿಗೆ ಹಿಂದೆ ಇದ್ದ ಹಂಚಿನ ಕಟ್ಟಡಗಳು ನೆಲಸಮವಾದವು. ತಂಪೆರೆಯುತ್ತಿದ್ದ ಮರಗಳು ನೆಲಕ್ಕೆ ಉರುಳಿದವು. ಇವುಗಳಿದ್ದ ಸ್ಥಳಗಳಲ್ಲಿ ಬೃಹತ್ ಗಾತ್ರದ ಕಟ್ಟಡಗಳು ತಲೆ ಎತ್ತಿ ಬಂದವು. ಗೂಡಂಗಂಡಿಗಳ ಸ್ಥಾನದಲ್ಲಿ ಮಹಲ್ ಗಳು ಹುಟ್ಟಿಕೊಂಡವು. ಮೂವತ್ತು ನಲ್ವತ್ತರ ವೇಗದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವಾಹನಗಳು. ತೊಂಭತ್ತು ನೂರರ ವೇಗದಲ್ಲಿ ವಾಹನಗಳು ಓಡಲು ಶುರು ಮಾಡಿದವು. ದೀಪಾಲಂಕೃತವಾದ ಕಟ್ಟಡಗಳನ್ನು ಕಾಣುವಾಗ ಬೆಂಗಳೂರಿನ ಎಂ.ಜಿ.ರೇೂಡೊ ಅನ್ನುವ ಹಾಗೇ ಕಾಣುವ ಭಾಗ್ಯ ಉಡುಪಿಯ ಮಹಾತ್ಮಗಾಂಧಿ ರಸ್ತೆಗೂ ಒಲಿದು ಬಂತು. ಇಷ್ಟೆಲ್ಲಾ ಸವಲತ್ತು ಸೌಕರ್ಯ ಸೌಂದರ್ಯದ ನಡುವೆ ನಾವು ಇಲ್ಲಿನ ಆಥಿ೯ಕ ಚಟುವಟಿಕೆಗಳ ಕಡೆಗೂ ತುಸು ಗಮನ ಹರಿಸಿದಾಗ ಕಾಣುವ ಭಯಾನಕ ಸ್ಥಿತಿ ನೇೂಡಿ.
ಬೃಹತ್ ಕಟ್ಟಡಗಳನ್ನು ಆಶ್ರಯಿಸಿ ಅದೆಷ್ಟೊ ಮಹಲ್‌ಗಳು ಬಂದವು ಹೊಸ ವಿನ್ಯಾಸದ ಬಟ್ಟೆಅಂಗಡಿಗಳು ಸೂಪರ್ ಬಜಾರ್‌ಗಳು ಹುಡುಕಿಕೊಂಡು ಬಂದವು. ಜಗಮಗಿಸುವ ಹೇೂಟೆಲುಗಳು ಬಂದು ತಳ ಊರಿದವು. ಈ ಆಧುನಿಕತೆ ಅಭಿವೃದ್ಧಿ ಎಂಬ ಬಿರುಗಾಳಿಯ ಹೊಡೆತಕ್ಕೆ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಬದುಕು ಕಟ್ಟಿಕೊಂಡವರ ಸ್ಥಿತಿ ಈಗ ಏನಾಗಿರಬಹುದು?
ವಿಪರ್ಯಾಸವೆಂದರೆ ಅದೇ ಜಾಗದಲ್ಲಿ ಬಂದು ಕುಳಿತ ನವ್ಯ ಭವ್ಯವಾದ ಎಲ್ಲ ಮಹಲ್‌ಗಳು ಶೇೂ ರೂಂಗಳು ಹೇೂಟೆಲುಗಳು ದಿನ ಬೆಳಗಾಗುವುದರೊಳಗೆ ಹೇಳ ಹೆಸರಿಲ್ಲದ ಹಾಗೇ ಬಾಗಿಲು ಮುಚ್ಚಿಕೊಂಡು ಹೇೂಗಿಯೇ ಬಿಟ್ಟವು. ಪಾಪ ಅದೆಷ್ಟೊ ಮಂದಿ ಸಾಲಸೋಲ ಮಾಡಿ ವ್ಯಾಪಾರ ಲಾಭದ ಆಸೆ ಇಟ್ಟುಕೊಂಡು ಬಂದವರ ಗತಿ ಏನಾಗಿರಬಹುದು? ಆಶ್ಚರ್ಯದ ಸಂಗತಿ ಅಂದರೆ ಈಗ ಸ್ವಲ್ಪ ಉಸಿರಾಡುತ್ತಿರುವ ಅಂಗಡಿಗಳು ಯಾವುದು ಅಂದ್ರೆ ಆಧುನಿಕತೆಯ ಅಭಿವೃದ್ಧಿಯ ಹೊಡೆತದ ನಡುವೆ ಪ್ರಾಣ ಉಳಿಸಿಕೊಂಡು ಬದುಕಿರುವ ಸಣ್ಣಪುಟ್ಟ ಕಟ್ಟಡಗಳಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚಿಕೊಂಡು ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು ಅನ್ನುವುದು ಅಷ್ಟೇ ಸತ್ಯ. ಹೇರಳ ಹಣವಿದ್ದು ಅದನ್ನು ಇಡಲು ಜಾಗವಿಲ್ಲದವರು ಇನ್‌ವೆಸ್ಟ್‌ಮೆಂಟ್ ಉದ್ದೇಶದಿಂದ ಕಟ್ಟಿದ ಭವ್ಯ ಕಟ್ಟಡಗಳು ರಾರಾಜಿಸುತ್ತವೇ ಬಿಟ್ಟರೆ ಆ ಕಟ್ಟಡಗಳ ಒಳಗೆ ವ್ಯಾಪಾರಕ್ಕಾಗಿ ಹೇೂಗಿ ಕೂತವರ ಪರಿಸ್ಥಿತಿ ಏನಾಗಿರಬಹುದು? ಸ್ವಲ್ಪ ಯೇೂಚಿಸಬೇಕಾದ ಅಭಿವೃದ್ಧಿಯ ಚಿಂತನೆಯ ದಾರಿಯೂ ಹೌದು.
ಅಭಿವೃದ್ಧಿ, ನಗರೀಕರಣ, ಸೌಕರ್ಯ ಸೌಲಭ್ಯ ಸೌವಲತ್ತುಗಳ ಧಾವಂತದಲ್ಲಿ ಹಳೆಯ ಬದುಕನ್ನೇ ಮರೆತು ಹೊಸ ಬದುಕಿನತ್ತ ಹೆಜ್ಜೆ ಇಡುವಾಗ ಹೆಚ್ಚು ಎಚ್ಚರಿಕೆ ವಹಿಸಲೇಬೇಕು ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿ ನಮ್ಮ ಕಣ್ಣು ಮುಂದೆ ನಿಲ್ಲುತ್ತದೆ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
Key Words: Development, Economic development, Concrete Jungle, Urbanisation, ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಕಾಂಕ್ರೀಟ್ ಕಾಡು, ನಗರೀಕರಣ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ