ಅವಲೋಕನ ಬಿಡುಗಡೆ, ಆನ್ಲೈನ್ ತರಗತಿಗಳ ಉದ್ಘಾಟನೆ
ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾರಂಭೋತ್ಸವ, ಅವಲೋಕನ ಬಿಡುಗಡೆ, ಆನ್ಲೈನ್ ತರಗತಿಗಳ ಉದ್ಘಾಟನೆ ಗೂಗಲ್ ಮೀಟ್ ಮೂಲಕ ಬುಧವಾರ ನಡೆಯಿತು.
ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಉದ್ಘಾಟಿಸಿದರು.
ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ 2020-21ನೇ ಸಾಲಿನ ಅವಲೋಕನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕೆನರಾ ಮೆಷಿನ್ ಸ್ಟೋರ್ ನ ಎನ್.ಸುಬ್ರಹ್ಮಣ್ಯ ಭಟ್, ಪೋಷಕರು, ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾಂಶುಪಾಲರಾದ ವಿದ್ಯಾ ಭಟ್ ಪ್ರಸ್ತಾಪಿಸಿದರು. ಹಿರಿಯ ಶಿಕ್ಷಕಿ ಸುಭದ್ರಾ ಭಟ್ ಸ್ವಾಗತಿಸಿದರು. ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ, ದಿವ್ಯಾ ರೈ, ಭಾರತೀ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾಧನಾ ನಿರೂಪಿಸಿದರು. ಉಪನ್ಯಾಸಕಿ ಪವಿತ್ರಗೌರಿ ಆಶಯಗೀತೆ ಹಾಡಿದರು. ಉಪನ್ಯಾಸಕಿ ನಿಖಿತಾ ವಂದಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ