ಪ್ರವಾಸಿ ಹಿಂದಿ ಸಾಹಿತ್ಯ ಕುರಿತ ಅಂತಾರಾಷ್ಟ್ರೀಯ ವೆಬಿನಾರ್‌ ಸಂಪನ್ನ

Upayuktha
0

  


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ವತಿಯಿಂದ ʼಪ್ರವಾಸಿ ಹಿಂದಿ ಸಾಹಿತ್ಯ- ವಿವಿಧ ಆಯಾಮಗಳುʼ ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ವೆಬಿನಾರ್‌ವೊಂದನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.  


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಆಂಧ್ರಪ್ರದೇಶದ ಆದಿವಾಸಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ವಿ ಕಟ್ಟಿಮನಿ ಪ್ರಧಾನ ಭಾಷಣ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ನೇಪಾಳದ ಅವಧಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿಷ್ಣು ಲಾಲ್‌ ಕುಮಾಲ್‌, ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗ ಮುಖ್ಯಸ್ಥ ಡಾ. ತಾರು ಎಸ್‌. ಪವಾರ್‌, ಸೋಲಾಪುರದ ಹಿಂದಿ ಮತ್ತು ಮರಾಠಿ ಸಾಹಿತಿ ಡಾ. ಧನ್ಯಕುಮಾರ್‌  ಬಿರಾಜದಾರ್‌ ಹಾಗೂ ರಷ್ಯಾದ ಯುವ ಸಾಹಿತಿ, ಅನುವಾದಕ ಏಲ್ಯಾ ಓಸತೋಪೆಕ್‌ ಪ್ರವಾಸೀ ಸಾಹಿತ್ಯದ ಕುರಿತು ಉಪನ್ಯಾಸಗೈದರು.  


ವಿವಿ ಕಾಲೇಜಿನ ಪೂರ್ವತನ ಪ್ರಾಂಶುಪಾಲ ಡಾ. ಉದಯ್‌ ಕುಮಾರ್‌ ಎಂ ಎ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥೆ ಡಾ. ನಾಗರತ್ನ ಎನ್‌. ರಾವ್‌, ಪ್ರಾಧ್ಯಾಪಕ ಡಾ. ಗುರುದತ್ತ, ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. 


ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್‌ ವಂದನಾರ್ಪಣೆಗೈದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top