ಅಂತರಂಗದ ಚಳವಳಿ ಅಭಿಯಾನದ ವಿವೇಕಾನಂದ ಅವರ ಜ್ಞಾನಭಿಕ್ಷಾ ಪಾದಯಾತ್ರೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶ

Upayuktha
0


ಪ್ರಬುದ್ಧ ಮನಸ್ಸಿನ ಸಂಬುದ್ಧ ಸಂಚಾರಿ ಶ್ರೀ ಹೆಚ್, ಕೆ, ವಿವೇಕಾನಂದ ಅವರ ಜ್ಞಾನ ಭಿಕ್ಷಾ ಪಾದಯಾತ್ರೆ ಇಂದು  ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶವಾಗಿದೆ, 


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ- ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ 244 ದಿನಗಳಿಂದ ರಾಜ್ಯವ್ಯಾಪಿ ಜ್ಞಾನಭಿಕ್ಷಾ ಪಾದಯಾತ್ರೆ ಹೆಸರಿನಲ್ಲಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಅವರ ಈ ಯಾತ್ರೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಚಿಕ್ಕಮಗಳೂರು  ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ  ಅವರಿಗೆ ಸ್ವಾಗತ ಕೋರಿದೆ.  


ಹಿನ್ನೆಲೆ: 

ಕನ್ನಡವೆಂಬುದು ಕನ್ನಡಿಗರ ಅಸ್ಮಿತೆಯಾಗಿದೆ, ಇಂತಹ ಕನ್ನಡದ ಅಸ್ಮಿತೆ ಎಂದರೆ ಅದೊಂದು ಬಹುತ್ವದ ಬಹುರೂಪಿತನದೊಂದಿಗೆ ಹೆಣೆದುಕೊಂಡಿರುವ ಜಾತ್ಯತೀತ ಪ್ರಜ್ಞೆಯಾಗಿದೆ, ಇಂತಹ ಕನ್ನಡದ ಪ್ರಜ್ಞೆಯಿಂದ ವಿಶ್ವ ಮಾನ್ಯ ಪಟ್ಟಕ್ಕೆರಿದ ನಾಡ ಕವಿ ಪಂಪ, ರಾಷ್ಟ್ರ ಕವಿ ಕುವೆಂಪು ಅವರು ಪ್ರತಿಪಾದಿಸಿದ್ದು "ಮನುಜಕುಲ ತಾವೊಂದೇ ವಲಂ"ಎಂದು, ಇದು ಕನ್ನಡದ -ಕನ್ನಡಿಗರ ಹೆಗ್ಗಳಿಕೆಯಾಗಿದೆ, 


ಇಂತಹ ಹೆಗ್ಗಳಿಕೆಗೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಕನ್ನಡದ ಅಸ್ಮಿತೆಯನ್ನು  ಎತ್ತಿ ಹಿಡಿದು ಕನ್ನಡದ ನೆಲದಲ್ಲಿ ಬತ್ತಿಹೋಗದಂತೆ ಬಿತ್ತಿ ಬೆಳೆಯುವ ನಿಟ್ಟಿನಲ್ಲಿ ಇಡಿ ಕನ್ನಡ ನಾಡಿನಾದ್ಯಂತ ಜ್ಞಾನ ಭಿಕ್ಷಾ ಪಾದಯಾತ್ರೆ ಸಂಚರಿಸುತ್ತಿದೆ, 


ಈ ಜ್ಞಾನ ಭಿಕ್ಷಾ ಪಾದಯಾತ್ರೆಯನ್ನು ಹಲವು ಆಶಯಗಳೊಂದಿಗೆ ಎಕಾಂಗಿಯಾಗಿ ಹಮ್ಮಿಕೊಂಡಿರುವವರು ಪತ್ರಿಕೋದ್ಯಮ ಪದವೀಧರ ಬೆಂಗಳೂರಿನ ಶ್ರೀ, ಹೆಚ್, ಕೆ, ವಿವೇಕಾನಂದ ಅವರು.


2020 ಕನ್ನಡದ ಕಾಯಕ ವರ್ಷ, ಇಂತಹ ಕಾಯಕ ವರ್ಷದ 2020ನೇ  ನವಂಬರ್ 01 ಕನ್ನಡ ರಾಜ್ಯೋತ್ಸವದ ದಿನದಂದು, ಮಹಾರಾಷ್ಟ್ರ -ಕರ್ನಾಟಕದ ಗಡಿಭಾಗವಾದ ಬೀದರ್ ಜಿಲ್ಲೆ  ವನಮಾರ್ಪಳ್ಳಿಯಿಂದ  ಪ್ರಾರಂಭಗೊಂಡ ಈ ಪಾದಯಾತ್ರೆ, ಇದುವರೆಗೆ, ಕಲ್ಯಾಣ ಕರ್ನಾಟಕ ಬಾಗದ  17 ಜಿಲ್ಲೆಗಳ ಎಲ್ಲಾ ತಾಲ್ಲೂಕು ಕೇಂದ್ರಗಳನ್ನು 244 ದಿನಗಳಲ್ಲಿ ಒಟ್ಟು 8500 ಕಿ, ಮಿ ದೂರ  ಕಾಲ್ನಡಿಗೆಯಲ್ಲಿ ಹಾಯ್ದು, ಇಂದು 245 ದಿನ  18ನೇ ಜಿಲ್ಲೆಯಾಗಿ ಚಿಕ್ಕಮಗಳೂರು ಜಿಲ್ಲೆಗೆ ಅಜ್ಜಂಪುರ ತಾಲೂಕ ಗಡಿ ಗ್ರಾಮವಾದ ಸಾಣೇಹಳ್ಳಿ ಸಮೀಪದ ಅಹಮದ್ ನಗರದ ಮೂಲಕ ಪ್ರವೇಶವಾಗಿದೆ.  


ಇಂದು ಈ ಪಾದಯಾತ್ರೆ ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕೃತಿಕ ಪಟ್ಟಣ ತಾಲ್ಲೂಕು ಕೇಂದ್ರ ಅಜ್ಜಂಪುರವನ್ನು ಸಂಜೆ ಯೊಳಗೆ ತಲುಪಿ, ಅಲ್ಲಿನ ಅನೇಕ ಸಮಾನ ಮನಸ್ಸಿನ ಸಂಸ್ಕೃತಿ ಚಿಂತಕರೊಟ್ಟಿಗೆ ಸಂವಾದ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಲಿದೆ. 


ನಾಳೆಯಿಂದ ಅಂದಾಜು 15 ಕಾಲ ದಿನಗಳ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ, ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಬಾಳೆಹೊನ್ನೂರು, ನ.ರಾ. ಪುರ, ಕೊಪ್ಪ, ಶೃಂಗೇರಿ ಮೂಲಕ ಹಾದು ಉಡುಪಿ ಜಿಲ್ಲೆಯ ಕಡೆ ಪಾದಯಾತ್ರೆ ಸಾಗುತ್ತದೆ. 


ಈ ಪಾದಯಾತ್ರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ದಿನಗಳ ಕಾಲ ಸಾಗಿ ಹೋಗುವುದರಿಂದ, ಅ ಸಮಯದಲ್ಲಿ  ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಸಮಾಜಮುಖಿ ಸಂಗಾತಿಗಳು ಈ ಕಾಲ್ನನೆಡೆಗೆಯ ಸಾರಥಿ ಶ್ರೀ ಹೆಚ್, ಕೆ, ವಿವೇಕಾನಂದ ಅವರನ್ನು ತಮ್ಮ ತಮ್ಮ ತಾಲ್ಲೂಕು ಪ್ರವೇಶವಾಗುವ ಸಮಯದಲ್ಲಿ ಸ್ವಾಗತಿಸಿ ಬರಮಾಡಿಕೊಂಡು ಅವರೊಟ್ಟಿಗೆ ಹೆಜ್ಜೆ ಹಾಕಿ ಮುಂದಿನ ತಾಲೂಕಿಗೆ ಬೀಳ್ಕೊಡವ ಮೂಲಕ ಈ ಪಾದಯಾತ್ರೆಗೆ ಸಹಕರಿಸಿ ಮುನ್ನೆಡೆಸಿ, ಚಿಕ್ಕಮಗಳೂರು ಜಿಲ್ಲೆಯ ವತಿಯಿಂದ ಗೌರವಿಸಿ ಕಳುಹಿಸಿ ಕೊಡಲು ಸಾರ್ವಜನಿಕರಲ್ಲಿ ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮೂಲಕ ಕೋರಿದೆ.  


ಇಂದು ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಪರವಾಗಿ ರಂಗಕರ್ಮಿ ಸಾಣೇಹಳ್ಳಿ ರಂಗಶಾಲೆಯ ಶ್ರೀ ಮಧು ಚಿಕ್ಕಮಗಳೂರು ಗಡಿ ಭಾಗದವರೆಗೆ ಜೊತೆಯಲಿ ಬಂದು ಬೀಳ್ಕೊಟ್ಟಿದ್ದಾರೆ. 


ಚಿಕ್ಕಮಗಳೂರು ಜಿಲ್ಲೆಯ ಜನತೆಯ ಪರವಾಗಿ ಅಜ್ಜಂಪುರದ ಸಾಂಸ್ಕೃತಿಕ ಸಂಘಟಕ, ರಾಜಕಾರಣಿ ಎ, ಸಿ, ಚಂದ್ರಪ್ಪನವರು, ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮುಖಂಡ, ಸಂಪನ್ಮೂಲ ವ್ಯಕ್ತಿ ಗೆಳೆಯ ಬೇಗೂರು ಮಲ್ಲಿಕಾರ್ಜುನ ಹಾಗೂ ಗ್ರಾಮ, ಪಂ, ಮಾಜಿ ಸದಸ್ಯೆ, ಸಮಾಜ ಸೇವಕಿ ಸಹೋದರಿ ಲಲಿತಮ್ಮ ಇತರರು ಶ್ರೀ ವಿವೇಕಾನಂದ ಅವರನ್ನು ಸ್ವಾಗತಮಾಡಿ ಅವರೊಟ್ಟಿಗೆ ಬೇಗೂರು ಮಾರ್ಗವಾಗಿ ಅಜ್ಜಂಪುರದ ಕಡೆ ಕಾಲ್ನನೆಡಿಗೆಯಲ್ಲಿ ಜೊತೆಗೂಡಿ ಕರೆತರುತ್ತಿದ್ದಾರೆ. 


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top