*****
ಪಟ್ಟು ಒಂದು ಕಡಲೆ ಹಿಟ್ಟು
ಪಟ್ಟು ಎರಡು ಸಕ್ಕರೆಯೂ
ಪಟ್ಟು ಮೂರು ತುಪ್ಪವನ್ನು
ಇಟ್ಟುಕೊಳ್ಳಿರಿ...
ಕೊಟ್ಟು ಒಲೆಗೆ ಬೆಂಕಿಯನ್ನು
ಇಟ್ಟು ಮೇಲೆ ಬಾಣಲೆಯನು
ಅಷ್ಟು ಸಕ್ಕರೆಗೂ ತಕ್ಕ
ನೀರು ಸೇರಿಸಿ...
ಅತ್ತ ತುಪ್ಪವನ್ನು ಕಾಸಿ
ಇತ್ತ ಕಡಲೆ ಹಿಟ್ಟು ಕಲಸಿ
ಮತ್ತೆ ಸಕ್ಕರೆಯ ಪಾಕ
ಏರಿಸುತ್ತಿರಿ...
ಅತ್ತ ಇತ್ತ ಗೊಟಾಯಿಸುತ್ತ
ಸ್ವಸ್ಥ ಚಿತ್ತರಾಗಿರುತ್ತ
ಮತ್ತೆ ಪಾಕ ಬಂದ ಮೇಲೆ
ಹಿಟ್ಟು ಸೇರಿಸಿ...
ಬೆರೆತ ಹಿಟ್ಟು ಮಿಳಿತವಾಗಿ
ತ್ವರಿತವಾಗಿ ಕಾಯುತಿರಲು
ಎರೆದ ತುಪ್ಪ ಬಿಡುವ ಹದಕೆ
ಕೆಳಗೆ ಇಳಿಸಿರಿ...
ಹರಿವಾಣಕೆ ಅದನು ಸುರುವಿ
ಹರಿತವಾದ ಚೂರಿಯಿಂದ
ಗೀರಿದಾಗ ಮೈಸೂರಿನ
ಪಾಕ ಸಿದ್ಧವು...
*******
-ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ