ತುಳುನಾಡಿನ ಮಧುರ ಧ್ವನಿಯ ಉದಯೋನ್ಮುಖ ಗಾಯಕಿ- ಶೀಲಾ ಪಡೀಲ್

Upayuktha
0




ತುಳುನಾಡಿನ 'ಗಾನಕೋಗಿಲೆ' ಶೀಲಾ ಪಡೀಲ್ ಅವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ. ಹಲವಾರು ಸಾಂಸ್ಕೃತಿಕ- ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಗಾಯನ ಸುಧೆಯನ್ನು ಸಂಗೀತ ಪ್ರೇಮಿಗಳಿಗೆ ಉಣಿಸಿದ್ದಾರೆ.


ಹಲವಾರು ಕಡೆಗಳಲ್ಲಿ ಭಕ್ತಿ ರಸಮಂಜರಿ, ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಸಲ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳನ್ನೂ ಪ್ರದರ್ಶಿಸಿದ್ದಾರೆ.


ಗಾಯಕಿ ಶೀಲಾ ಪಡೀಲ್ ಅವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪುರಸ್ಕರಿಸಿ ಗೌರವ ಸಲ್ಲಿಸಿವೆ.


ಅಳದಂಗಡಿಯಲ್ಲಿ ಶ್ರೀ ವಿಜಯಕುಮಾರ್ ಜೈನ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೀಲಾ ಪಡೀಲ್ ಅವರಿಗೆ 'ಗಾಯಕಿ ಅವಾರ್ಡ್‌' ನೀಡಿ ಗೌರವಿಸಲಾಗಿದೆ. ಪುತ್ತೂರಿನ ಸಾಹಿತ್ಯ ವೇದಿಕೆಯಲ್ಲಿ  ಖ್ಯಾತ ತುಳು ಕವಿ ಮಹೇಂದ್ರನಾಥ ಸಾಲೆತ್ತೂರು ಮತ್ತು ಹೆಸರಾಂತ ತುಳು-ಕನ್ನಡ ಬರಹಗಾರರಾದ ಗೋಪಾಲಕೃಷ್ಣ ಭಟ್ ಅವರ ಪ್ರೋತ್ಸಾಹದಿಂದ ಪುರಸ್ಕಾರ, ಸನ್ಮಾನ ಪತ್ರಗಳನ್ನು ಪಡೆದಿದ್ದಾರೆ.


ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಂಗೀತ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇವರ ವೇದಿಕೆಗಳಲ್ಲಿ ಚಲನಚಿತ್ರ ನಟರು, ಜ್ಯೋತಿಷಿಗಳೂ ಆದ ಭೀಮರಾವ್ ವಾಷ್ಟರ್ ಸುಳ್ಯ ಇವರ ಪ್ರೋತ್ಸಾಹದಿಂದ 2020ನೇ ಸಾಲಿನ ಸಜ್ಜನ ಚಂದನ ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ಶೀಲಾ ಪಡೀಲ್ ಅವರು ಪಡೆದಿರುತ್ತಾರೆ.



ಗ್ರಾಮ ಸಾಹಿತ್ಯ ಸಮ್ಮೇಳನದ ನಾಡು ನುಡಿಯ ಅನನ್ಯ ಸಾಧನೆಗಾಗಿ 'ಯುವ ಸಿರಿ' ಗೌರವ ಸನ್ಮಾನ ಪುರಸ್ಕಾರ ಪಡೆದಿದ್ದಾರೆ.


ಶೀಲಾ ಪಡೀಲ್ ಅವರು ಹಾಡಿರುವ ಇತ್ತೀಚೆಗೆ ಬಿಡುಗಡೆಯಾದ ಆಲ್ಬಂ ಸಾಂಗ್‌ಗಳು ಬಹಳಷ್ಟು ಜನಪ್ರಿಯತೆ ಪಡೆದಿವೆ. ಪುಣ್ಣಮೆ ಚಂದ್ರ, ಅರೆಬಿಂಗಿರಿ ಜವನೆರ್, ಮನಸ್‌ ದಿನ ಬಯಕುನ, ಜೀವದ ಮೋಕೆ ಎನ್ನ, ನಮ್ಮ ಭೂಮಿ, ಎನ್ನ ಜೀವ ಈಯೆ, ಪನೊಲಿಬೈಲ್‌ದ ಅಪ್ಪೆ ಕಲ್ಲುರ್ಟಿ, ಸತ್ಯೊದ ಬೊಲ್ಪು ಮೂಡುಂಡುಯೆ, ತ್ರಿಶೂಲವ ಹಿಡಿದವಳೆ ತ್ರಿಶೂಲ ಕಾಳಿಯೆ, ಹಾಡುವೆ ಪಾಡುವೆ ನಿನ್ನಯ ತಾಯೆ- ಹೀಗೆ 10 ಆಲ್ಬಂ ಗೀತೆಗಳನ್ನು ಶೀಲಾ ಪಡೀಲ್ ಅವರು ಹಾಡಿದ್ದಾರೆ.

ಗಾಯನ ಲೋಕದಲ್ಲಿ ತುಳುನಾಡಿನ ಕುವರಿ ಶೀಲಾ ಪಡೀಲ್ ಅವರು ಇನ್ನಷ್ಟು ಯಶಸ್ಸಿನ ಶಿಖರವನ್ನೇರಲಿ ಎಂದು ಹಾರೈಸೋಣ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top