ಬಾಳೆಕಾಯಿ ಹುಡಿ ತಯಾರಿಸಿ ಅದರಲ್ಲಿ ನಾನಾ ಬಗೆಯ ತಿನಿಸುಗಳನ್ನೂ ತಯಾರಿಸಿ ಯಶಸ್ವಿಯಾದ ಪ್ರಯೋಗಶೀಲ ಗೃಹಿಣಿ ಶಿರಸಿಯ ವಸುಂಧರಾ ಹೆಗಡೆ ಅವರು ಉಪಯುಕ್ತ ನ್ಯೂಸ್ ಓದುಗರಿಗಾಗಿ ಬರೆದು ಕಳಿಸಿದ ರೆಸಿಪಿ ಇದು. ನೀವೂ ಮಾಡಿ ನೋಡಿ, ಸವಿದ ಬಳಿಕ ಖುಷಿ ಹಂಚಿಕೊಳ್ಳಿ.
ಬಾಳೆಕಾಯಿ ಹುಡಿಯ ಮಂಚೂರಿ
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿಹುಡಿ, ಜೋಳದ ಹಿಟ್ಟು,ಕೆಂಪು ಮೆಣಸಿನಪುಡಿ, ಉಪ್ಪು, ಹೂ ಕೋಸು, ಈರುಳ್ಳಿ, ದೊಡ್ಡಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಟೊಮ್ಯಾಟೊ ಸಾಸ್, ರೆಡ್ ಚಿಲ್ಲಿ ಸಾಸ್, ಗ್ರೀನ್ ಚಿಲ್ಲಿ ಸಾಸ್.
ಮಾಡುವ ವಿಧಾನ:
ಬಾಳೆಕಾಯಿ ಹುಡಿ, ಜೋಳದ ಹಿಟ್ಟು ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಹುಡಿಗೆ ಚೂರು ನೀರು ಹಾಕಿ ಚೆನ್ನಾಗಿ ಕಲಸಿ ಅದಕ್ಕೆ ಹೆಚ್ಚಿದ ಹೂ ಕೋಸ್ ಅನ್ನು ಹಾಕಿ ಎಣ್ಣೆಯಲ್ಲಿ ಕರಿದು ಪಕ್ಕಕ್ಕೆ ಇಟ್ಟುಕೊಳ್ಳಬೇಕು.
ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕಾದ ಮೇಲೆ ಈರುಳ್ಳಿ, ದೊಡ್ಡಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿಕೊಳ್ಳಬೇಕು. ನಂತರ ಅದ್ಕೆ ಎಲ್ಲಾ ರೀತಿಯ ಸಾಸ್ ಹಾಕಿ, ಜೊತೆಗೆ ಅರ್ಧ ಲೋಟ ನೀರಿಗೆ ಬಾಳೆಕಾಯಿ ಹುಡಿ ಹಾಕಿ ಕರಡಿ. ಅದನ್ನೂ ಹಾಕಿ ಚೆನ್ನಾಗಿ ಎಲ್ಲಾ ಮಿಕ್ಸ್ ಆಗಿ ಒಂದು ಕುದಿ ಬಂದ ಮೇಲೆ ಮೊದಲೇ ಕರದು ಇಟ್ಟ ಹೂ ಕೊಸಿನ ಮಿಶ್ರಣ ಹಾಕಿ ತೊಳಸಿ,ಮೇಲಿಂದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮೇಲಿಂದ ಉದುರಿಸಿದರೆ ರುಚಿಯಾದ ಬಾಳೆಕಾಯಿ ಹುಡಿ ಮಂಚೂರಿ ರೆಡಿ.
-ವಸುಂಧರಾ ಹೆಗಡೆ ಶಿರಸಿ
WhatsApp - 99009 27988; For calls : 78991 61434
Key words: Banana Podwer, Banana Flour, Banana Kadubu, ಬಾಳೆಕಾಯಿ ಹುಡಿ, ಸಿಹಿ ಕಡುಬು, ಸವಿರುಚಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ