ಸವಿರುಚಿ: ಬಾಳೆಕಾಯಿ‌ ಹುಡಿಯ ಸಿಹಿ ಕಡುಬು

Upayuktha
0




ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಇರಲೇ ಬೇಕಾದ ಪದಾರ್ಥ ಬಾಳೆಕಾಯಿ‌ ಹುಡಿ.

ಬಾಳೆಕಾಯಿ ಹುಡಿಯಿಂದ ತುಂಬಾ ರುಚಿ ರುಚಿಯಾದ ತಿಂಡಿಯನ್ನು ಮಾಡಬಹುದು.


ಬಾಳೆಕಾಯಿ‌ ಹುಡಿಯ ಸಿಹಿ ಕಡುಬು


ಬೇಕಾದ ಸಾಮಗ್ರಿಗಳು:

ಬಾಳೆಕಾಯಿ‌ ಹುಡಿ, ಬೆಲ್ಲ, ಚಿಟಿಕೆ ಉಪ್ಪು, ಕಾಯಿತುರಿ, ಏಲಕ್ಕಿಪುಡಿ.


ಮಾಡುವ ವಿಧಾನ:

ಒಂದು ಕಪ್ ಬಾಳೆಕಾಯಿ‌ ಹುಡಿಗೆ ಎರಡು ಕಪ್‌ ನೀರು, ಸಿಹಿಗೆ ಬೇಕಾದ ಬೆಲ್ಲ, ಚಿಟಿಕೆ ಉಪ್ಪು ಹಾಕಿ ಗಂಟು ಇಲ್ಲದೆ ಕರಡಿ ಗಟ್ಟಿಯಾಗುವವರೆಗೆ ಕಾಯಿಸಬೇಕು.


ನಂತರ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ ಇಟ್ಟುಕೊಳ್ಳಬೇಕು.

ಕಾಯಿತುರಿ, ಬೆಲ್ಲ, ಏಲಕ್ಕಿಪುಡಿ ಹಾಕಿ ಹೂರಣ ರೆಡಿ ಮಾಡಿ ಲಟ್ಟಿಸಿಟ್ಟ ಹಾಳೆಯಲ್ಲಿ ಹಾಕಿ ಮಡಚಿ ಉಗಿಯಲ್ಲಿ ಬೇಯಿಸಿದರೆ ರುಚಿ ರುಚಿಯಾದ ಕಡುಬು ರೆಡಿ.

ತುಪ್ಪದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.


-ವಸುಂಧರಾ ಹೆಗಡೆ ಶಿರಸಿ

WhatsApp - 99009 27988; For calls : 78991 61434

Key words: Banana Podwer, Banana Flour, Banana Kadubu, ಬಾಳೆಕಾಯಿ ಹುಡಿ, ಸಿಹಿ ಕಡುಬು, ಸವಿರುಚಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top