ಸವಿರುಚಿ-ಹೊಸ ಪ್ರಯೋಗ: ತೀರ್ಥಹಳ್ಳಿಯಲ್ಲಿ 'ಬಾಕಾಹು' ಶ್ಯಾವಿಗೆ

Upayuktha
0

ತೀರ್ಥಹಳ್ಳಿಯ ಕೃಷಿಕ ಕುಟುಂಬಗಳಲ್ಲಿ ನಡೆಯುತ್ತಿರುವ ಬಾಕಾಹು ಅಡುಗೆ ಪ್ರಯೋಗಗಳಲ್ಲಿ ಆಯ್ದ ಒಂದು ನಿಮಗಾಗಿ. ಇದು ಚಕ್ಕೋಡಬೈಲು ವಿನಯಾ ರಾಜೇಶ್ ಅವರ ಯಶಸ್ವಿ ಪ್ರಯೋಗ.


ಬೇಕಾಗುವ ವಸ್ತುಗಳು :

ಒಂದು ಲೋಟ ಬಾಕಾಹು, ಕಾಲು ಲೋಟ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು, ಸ್ವಲ್ಪ ತುಪ್ಪ.


ಮಾಡುವ ವಿಧಾನ:

ಎರಡೂ ಹಿಟ್ಟುಗಳನ್ನು ಬಟ್ಟಲಿಗೆ ಹಾಕಿ. ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಉಪ್ಪು, ನಸು ಸಿಹಿ ಬೇಕಾದರೆ ಬೆಲ್ಲ ಸೇರಿಸಿ. ಬಾಣಲೆಗೆ ಸ್ವಲ್ಪ ತುಪ್ಪ / ಎಣ್ಣೆ ಸವರಿ ಹಿಟ್ಟಿನ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದಾಗ ಈ ಮಿಶ್ರಣವನ್ನು ಉಂಡೆ ಕಟ್ಟಿ ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ. ನಂತರ ಶ್ಯಾವಿಗೆ ಒರಳಿನಲ್ಲಿ ಒತ್ತಿ. ರುಚಿಕರ, ಮೆದುವಾದ ಬಾಕಾಹು ಶ್ಯಾವಿಗೆ ರೆಡಿ.

(ಪ್ರಯೋಗಕ್ಕೆ ಪ್ರೇರಣೆಯಾದವರು: ಶ್ರೀಪಡ್ರೆ)


Key words: Banana Powder, Banana Flour, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಶ್ಯಾವಿಗೆ, ಸವಿರುಚಿ


(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top