ದಾವಣಗೆರೆಗೂ ತಲುಪಿದ 'ಬಾಕಾಹು' ಹುಮ್ಮಸ್ಸು

Upayuktha
0


ಕೃಷಿ ಮತ್ತು ಅಭಿವೃದ್ಧಿ ಪತ್ರಕರ್ತ ಶ್ರೀಪಡ್ರೆ ಅವರ ಪ್ರೇರಣೆಯಿಂದ ಚಾಲನೆಗೊಂಡಿರುವ 'ಬಾಕಾಹು' ಅಭಿಯಾನ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೂ ಹಬ್ಬುತ್ತಿದೆ. ಕೃಷಿಕರ ಮತ್ತು ಗೃಹೋದ್ಯಮಿಗಳ ಜೋಳಿಗೆ ತುಂಬುವ ಅಭಿಯಾನದ ಭಾಗವಾಗಿ 'ಬಾಕಾಹು' (ಬಾಳೆಕಾಯಿ ಹುಡಿ) ಪ್ರಯೋಗಗಳಿಗೆ ಸತತ ಪ್ರೇರಣೆ ಮತ್ತು ಉತ್ಸಾಹ ತುಂಬುತ್ತಿರುವ ಶ್ರೀಪಡ್ರೆಯವರ ಕಲ್ಪನೆಗೆ ಬೆಂಬಲವಾಗಿ ಉಪಯುಕ್ತ ನ್ಯೂಸ್ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಗ್ರಾಮೀಣ ಕೃಷಿ ಕುಟುಂಬಗಳ ಮತ್ತು ಗೃಹೋದ್ಯಮಿಗಳಿಗೆ ಶಕ್ತಿ ತುಂಬುವ ಪ್ರಯತ್ನ ಯಶಸ್ವಿಯಾಗಲಿ. ಆ ಮೂಲಕ 'ಆತ್ಮನಿರ್ಭರ ಭಾರತ'ದ ಕನಸು ಸಾಕಾರವಾಗಲಿ ಎಂಬುದು ಎಲ್ಲರ ಪ್ರಾಮಾಣಿಕ ಆಶಯ.


ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕೆಲವು ಉತ್ಸಾಹಿ ಪ್ರಯೋಗಶೀಲರ ಮನೆಗಳಲ್ಲಿ ಆರಂಭವಾದ ಈ ಪ್ರಯೋಗಗಳು ಅಲ್ಲಲ್ಲಿ ಸಣ್ಣದಾಗಿ ಗೃಹೋದ್ಯಮದ ರೂಪ ಪಡೆದುಕೊಳ್ಳುತ್ತಿವೆ. ಶಿರಸಿಯ ವಸುಂಧರಾ ಹೆಗಡೆ ಅವರು ಈಗಾಗಲೇ ಒಂದು ಹೆಜ್ಜೆ ಮುಂದಿದ್ದು, ಬಾಳೆಕಾಯಿ ಹುಡಿಯ ನಾನಾ ತಿನಿಸುಗಳ ಪ್ರಯೋಗ ಮಾಡಿದ ಬಳಿಕ ಈಗ ಬಾಳೆಕಾಯಿ ಹುಡಿಯನ್ನು ಒಂದು ಕೆಜಿಯ ಪೊಟ್ಟಣಗಳಾಗಿ ಮಾಡಿ ಆನ್‌ಲೈನ್ ಮೂಲಕ ಆರ್ಡರ್ ತರಿಸಿಕೊಂಡು ಪೂರೈಕೆ ಮಾಡಲು ಆರಂಭಿಸಿದ್ದಾರೆ. ಇದು ಉಳಿದ ಪ್ರಯೋಗಶೀಲ ರೈತರು, ಗೃಹೋದ್ಯಮಿಗಳಿಗೂ ಮಾದರಿಯಾಗಿದೆ.

ಈ ಅಭಿಯಾನದ ಅಲೆ ಈಗ ದಾವಣೆಗೆರೆ ಜಿಲ್ಲೆಗೂ ವ್ಯಾಪಿಸುತ್ತಿದೆ.  ಅಲ್ಲಿನ ಕರಿಗನೂರಿನ ರಮೇಶ್ ಅವರ ಪ್ರಯೋಗದ ಕಥೆ ಮುಂದಿದೆ. ಓದಿ:



"ಡ್ರೈಯರ್ ಇಲ್ಲ, ಬಿಸಿಲಲ್ಲೇ ಒಣಗಿಸಿ ತಾಲಿಪ್ಪಿಟ್ಟು, ಜಾಮೂನು ಮಾಡಿ ನೋಡ್ತೀನಿ", 52ರ ಹರೆಯದ ಉತ್ಸಾಹಿ ಕೃಷಿಕ ರಮೇಶ್ ಕರಿಗನೂರ್ ಜಿ9 ಬಾಳೆಕಾಯಿ ಹೆಚ್ಚುತ್ತಾ ಹೇಳುತ್ತಾರೆ. ಇವರು 2005ರ ಕೃಷಿ ಪಂಡಿತ ವಿಜೇತರು.


ದಾವಣಗೆರೆಯ ಕರಿಗನೂರಿನಲ್ಲಿ ಇದೆ ಇವರ ಅಡಿಕೆ ತೋಟ. ತೋಟದ ನಡುವೆ ಏಲಕ್ಕಿ ಬಾಳೆ ಕೃಷಿ. ಕೃಷಿಯಲ್ಲಿ ಹೊಸಹೊಸತು ಏನಿದ್ದರೂ ಊರಿನಲ್ಲಿ ಮಾಡಿ ನೋಡುವ ಮೊದಲಿಗ.


ಈ ವಾರಾಂತ್ಯಕ್ಕೆ ರಮೇಶ್ ಮನೆಯಲ್ಲಿ ಬಾಕಾಹು ಸಿದ್ಧವಾಗುತ್ತದೆ. ಜತೆಗೆ ಅದರ ಹೊಸಹೊಸ ಪಾಕವೂ.  


ತಾವೂ ಪ್ರಯೋಗಿಸಲು ಅಪ್ಪಟ ಉತ್ಸಾಹ ಇರುವವರು ಅವರ ಜತೆ ಸಂಜೆ 4- 6ರ ನಡುವೆ ಫೋನಿನಲ್ಲಿ ಮಾತುಕತೆ ನಡೆಸಬಹುದು. ರಮೇಶ್ ಕರಿಗನೂರ್- 99728 63090 (ಸಂಜೆ 4- 6)

(ಮಾಹಿತಿ ಕೃಪೆ: ಶ್ರೀಪಡ್ರೆ)


Key Words: Bakahu, Banana Flour, Banana Powder, Banana Powder recipe, ಬಾಕಾಹು, ಬಾಳೆಕಾಯಿ ಹುಡಿ, ತಿಂಡಿ ತಿನಿಸು


(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top