'ಬಾಕಾಹು' ಸಕ್ಸಸ್ ಸ್ಟೋರಿ: "ಅಡುಗೆಮನೆ ಬಿಡಿ, ಉದ್ದಿಮೆ ಜಗತ್ತಿನಲ್ಲೂ ಗಟ್ಟಿ ಸ್ಥಾನಕ್ಕೆ ’ಬಾಕಾಹು’ ಅರ್ಹ"

Upayuktha
0


 

'ಹರಿಯಣ್ಣ’, ಕಾಸರಗೋಡು ಜಿಲ್ಲೆಯ ಸಜಂಗದ್ದೆ ಶ್ರೀಹರಿ ಭಟ್, ಕೃಷಿಕ, ಕೃಷಿ ಚಿಂತಕ. ಮಾಜಿ ಕ್ಯಾಂಪ್ಕೋ ನಿರ್ದೇಶಕರೂ, ಪೆರ್ಲ ಸೊಸೈಟಿಯ ಮಾಜಿ ಅಧ್ಯಕ್ಷರೂ ಹೌದು. ಧನಾತ್ಮಕ ಚಿಂತನೆಯ ಸಾಮಾಜಿಕ ಕಾರ್ಯಕರ್ತರೂ ಹೌದು, ನೇತಾರರೂ ಹೌದು.


ಇವರ ಅಡುಗೆ ಮನೆಯಲ್ಲೀಗ ಸಕ್ಕರೆ, ಕಡ್ಲೆಬೇಳೆ, ಉದ್ದಿನಬೇಳೆ, ಇತ್ಯಾದಿಗಳ ಜತೆಗೆ 'ಬಾಕಾಹು’ವಿಗೂ ಒಂದು ಡಬ್ಬ ಜಾಗ ಪಡೆದಿದೆ.


"ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಹಲವಾರು ಪಾಕೇತನಗಳ ತಯಾರಿಗೆ ಯೋಗ್ಯವಾದ ಕಚ್ಚಾವಸ್ತು ಎನ್ನುವುದರಲ್ಲಿ ಅನುಮಾನವಿಲ್ಲ. ನಮ್ಮ ಅಡುಗೆ ಮನೆಯನ್ನದು ಅಲಂಕರಿಸಿರುವುದು ಚಿಕ್ಕ ವಿಚಾರ. ವಿಶಾಲವಾಗಿ ಚಿಂತಿಸಿದರೆ,  ಹೊಸದೊಂದು ಗಟ್ಟಿ ಉದ್ಯಮವಾಗಿ ಹಲವು ಕುಟುಂಬಗಳನ್ನು ಮೇಲೆತ್ತುವ ಸಾಮರ್ಥ್ಯ ಇದಕ್ಕಿದೆ" ಎನ್ನುತ್ತಾರೆ ಹರಿಯಣ್ಣ.

(ಮಾಹಿತಿ ಕೃಪೆ: ಶ್ರೀಪಡ್ರೆ)

Key Words; Banana Flour, Banana Powder, Banana Flour recipe, ಬಾಳೆಕಾಯಿ ಹುಡಿ, ಬಾಕಾಹು, ಬಾಕಾಹು ಅಭಿಯಾನ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top