ಬಾಳೆಕಾಯಿ ಹುಡಿ ಅಭಿಯಾನಕ್ಕೆ ಇನ್ನೊಂದು ಗರಿ. ವಿಟ್ಲ ಬಳಿಯ ಸಾರಡ್ಕದ ಗೃಹಿಣಿ ಶ್ರೀಮತಿ ಗೀತಾ ಸಾರಡ್ಕ ಅವರು ಬಾಳೆಕಾಯಿ ಹುಡಿಯಿಂದ ಚಾಕ್ಲೆಟ್ ತಯಾರಿಸಿ ಯಶಸ್ವಿಯಾಗಿದ್ದಾರೆ.
ತಯಾರಿಯ ವಿಧಾನ ಹೀಗೆ ಇದೆ :
ಅವರ ಪ್ರಯೋಗದ ವಿವರನ್ನು ಅವರ ಮಾತಿನಲ್ಲೇ ಓದಿ:
'ಬಾಕಾಹು' ಚಾಲ್ಕೆಟ್ ಮಾಡುವ ವಿಧಾನ:
ಒಂದು ಗ್ಲಾಸ್ ಬಾಕಾಹು, ಕಾಲು ಗ್ಲಾಸ್ ರಾಗಿ ಹುಡಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದು, ಒಂದು ಗ್ಲಾಸ್ ಬೆಲ್ಲವನ್ನು ಬಿಸಿಮಾಡಿ ಕರಗಿಸಿ ಇದಕ್ಕೆ ಸೇರಿಸಿ ಕಾಯಿಸಿರಿ. ಸ್ವಲ್ಪ ತುಪ್ಪವನ್ನು ಹಾಕಿ ತಳಬಿಡುವವರೆಗೆ ಕಾಯಿಸಿ. ಏಲಕ್ಕಿ, ಗೇರು ಬೀಜವನ್ನು ಬೇಕಿದ್ದರೆ ಸೇರಿಸಿ. ಗಟ್ಟಿಯಾಗಿ ಚಾಕಲೇಟಿನ ಹದ ಬರುತ್ತದೆ.
ತಿನ್ನುವುದಕ್ಕೆ ಮೊದಲೇ ಫೋಟೊ ತೆಗೆದದ್ದು ಒಳ್ಳೆಯದಾಯಿತು; ಇಲ್ಲವಾದರೆ ನಿಮಗೆ ಫೋಟೋ ಇಲ್ಲದೆ ಬರೇ ಪಾಕವಿಧಾನ ಕಳಿಸಬೇಕಾಗಿತ್ತು.
-ಗೀತಾ ಸಾರಡ್ಕ
(ಕೃತಜ್ಞತೆಗಳು: ಶ್ರೀಪಡ್ರೆ)
Key Words: Banana Flour, Banana Powder, Bakahu Chocolate, Banana Flour Chocolate, ಬಾಕಾಹು ಚಾಕ್ಲೇಟ್, ಬಾಳೆಕಾಯಿ ಹುಡಿ ಚಾಕ್ಲೇಟ್, ಬಾಕಾಹು ಅಭಿಯಾನ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Very very tasty chokalate
ReplyDelete