ಸವಿರುಚಿ: ಬಾಕಾ ರವೆ ಕೇಸರಿಬಾತ್

Upayuktha
0


ಪಾಕ: ಭಾಗ್ಯಲಕ್ಷ್ಮೀ ಸತ್ಯನಾರಾಯಣ


ಬೇಕಾಗುವ ಸಾಮಾನು: ಒಂದು ಬಟ್ಟಲು ಬಾಕಾ (ಬಾಳೆಕಾಯಿ) ರವೆ, ಮೂರು ಬಟ್ಟಲು ನೀರು, ಒಂದೂವರೆ ಬಟ್ಟಲು ಸಕ್ಕರೆ ಮತ್ತು ಸ್ವಲ್ಪ ಹೆಚ್ಚೇ ಅನಿಸುವಷ್ಟು ತುಪ್ಪ, ಸ್ವಲ್ಪ ದ್ರಾಕ್ಷಿ, ಗೋಡಂಬಿ.


ಮಾಡುವ ವಿಧಾನ: ಮೊದಲು ರವೆ ಮತ್ತು ದ್ರಾಕ್ಷಿ, ಗೋಡಂಬಿಗಳನ್ನು ಪ್ರತ್ಯಪ್ರತ್ಯೇಕವಾಗಿ  ಹುರಿದಿಟ್ಟುಕೊಳ್ಳಿ. ರವೆಯನ್ನು ಪರಿಮಳ ಬರುವ ವರೆಗೆ ಹುರಿಯಬೇಕು.


ಬಾಣಲೆಯಲ್ಲಿ ನೀರು ಕುದಿಯಲು ಇಟ್ಟು ಅದು ಕುದಿದ ಮೇಲೆ ಹುರಿದ ರವೆ ಹಾಕಿ. ರವೆ ಸರಿಯಾಗಿ ಬೆಂದ ಮೇಲೆ ಸಕ್ಕರೆ ಸೇರಿಸಿ. ಅವಶ್ಯವಿದ್ದಷ್ಟು ತುಪ್ಪ ಸೇರಿಸುತ್ತಾ ಮಗುಚುತ್ತಿರಿ. ಪಾಕ ಬರುವಾಗ ಅದಕ್ಕೆ ಗೋಡಂಬಿ, ದ್ರಾಕ್ಷಿ ಸೇರಿಸಿ ಇಳಿಸಿ.

ಸ್ವಲ್ಪ ಹೊತ್ತು ಆರಲು ಬಿಟ್ಟು ನಂತರ ಉಪಯೋಗಿಸಿ.


(ಅಭಿಯಾನದ ರೂವಾರಿ ಮತ್ತು ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Powder, Banana Flour, Banana flour recipe, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಳೆಕಾಯಿ ರವೆ, ಕೇಸರಿಭಾತ್, ಸವಿರುಚಿ

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top