ಮಂಗಳೂರು: ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ವಿನೂತನ ವಿಸ್ಟಾಡೋಮ್ ಕೋಚ್‌ನ ಉದ್ಘಾಟನೆ ಈ ಬೆಳಗ್ಗೆ ನೆರವೇರಿತು. ಸಂಸದ ನಳಿನ್ ಕುಮಾರ್ ಕಟೀಲ್, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ನೂತನ ರೈಲಿಗೆ ಹಸಿರು ನಿಶಾನೆ ತೋರಿದರು.
ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಟ್ರೈನ್ ಸಂಖ್ಯೆ. 06540/06539 ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ಸಾಪ್ತಾಹಿಕ ವಿಶೇಷ ರೈಲು ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಹೊಂದಿರುತ್ತದೆ.
ವಿಸ್ಟಾಡೋಮ್ ಕೋಚ್ ವಿಶೇಷವಾಗಿ ಪ್ರಯಾಣಿಕರಿಗೆ ರಮಣೀಯ ಪರಿಸರವನ್ನು ಸವಿಯಲು ಅನುಕೂಲವಾಗುವಂತೆ ಪಾರದರ್ಶಕ ಛಾವಣಿ ಹಾಗೂ ಅಗಲವಾದ ಗಾಜಿನ ಕಿಟಕಿಗಳನ್ನು ಹೊಂದಿರುತ್ತದೆ. ವಿಶಾಲವಾದ ಸುಖಾಸನಗಳನ್ನು ಹೊಂದಿದ್ದು, 180 ಡಿಗ್ರಿ ಕೋನದಲ್ಲಿ ತಿರುಗುವ ಸೌಲಭ್ಯವನ್ನೂ ಹೊಂದಿದೆ.
ಶಿರಾಡಿ ಘಾಟಿ ಮಾರ್ಗದಲ್ಲಿ ಪ್ರಯಾಣಿಸುವಾಗ ಪ್ರಕೃತಿ ಸೌಂದರ್ಯವನ್ನು ಸವಿಯಲು ಈ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಸಾಧ್ಯವಾಗುತ್ತದೆ. ಪ್ರವಾಸಪ್ರಿಯರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ರೈಲ್ವೇಗೂ ಇದರಿಂದ ಹೆಚ್ಚಿನ ಆದಾಯ ಬರಲಿದೆ.
ಇನ್ನಷ್ಟು ವಿವರಗಳಿಗಾಗಿ ಇದನ್ನೂ ಓದಿ: