ಬಾಕಾಹು ಹಾಲ್ಬಾಯಿ: ಮುಂದೇನು?

Upayuktha
0


ಪಾಕ: ಪ್ರಸನ್ನಾಪ್ರಸಾದ್ ಭಟ್


ಉಡುಪಿ ಜಿಲ್ಲೆಯಲ್ಲಿ  ಪ್ರಪ್ರಥಮವಾಗಿ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಿಂಡಿ ತಯಾರಿಸಿದವರು ಅನ್ನಪೂರ್ಣ ನರ್ಸರಿಯ ಪ್ರಸನ್ನಾಪ್ರಸಾದ್ ಭಟ್. ಅವರು ತಯಾರಿಸಿದ ಬಾಕಾಹು ಹಾಲ್ಬಾಯಿಯ ವಿವರ ಇಲ್ಲಿದೆ.


ಸಾಮಗ್ರಿಗಳು: 1 ಲೋಟ ಬಾಕಾಹು, 3 ಲೋಟ ನೀರು, 1 ಲೋಟ ಹಾಲು, 1 ಲೋಟ ತುಪ್ಪ, 1 ಅಚ್ಚು ಬೆಲ್ಲ ಮತ್ತು, 3 ಏಲಕ್ಕಿ.


ವಿಧಾನ: ಬಾಕಾಹುವನ್ನು 3 ಲೋಟ ನೀರು, 1 ಲೋಟ ಹಾಲು ಮತ್ತು 3 ಅಚ್ಚು ಬೆಲ್ಲ ಹಾಕಿ ಚೆನ್ನಾಗಿ ತಿರುಗಿಸಿ. 10 ನಿಮಿಷ ಹಾಗೆಯೇ ಬಿಡಬೇಕು. ನಂತರ 1 ಲೋಟ ತುಪ್ಪ ಹಾಕಿ ಒಲೆಯ ಮೇಲಿಟ್ಟು, ಸಣ್ಣ ಉರಿಯಲ್ಲಿ ತಿರುಗಿಸುತ್ತಾ, ತಳ ಬಿಟ್ಟು ಬರುವಾಗ ಏಲಕ್ಕಿ ಪುಡಿ ಹಾಕಿ ತಿರುಗಿಸಿ, ಬಾಳೆಎಲೆಯಲ್ಲಿ ಹರಡಿ. ಬಾಕಾಹು ಹಾಲ್ಬಾಯಿ ಕೇವಲ 15 ನಿಮಿಷಗಳಲ್ಲಿ ಸಿದ್ದ. ಬೊಚ್ಚು ಬಾಯಿಯ ಮಕ್ಕಳಿಂದ ಹಿಡಿದು ಬೊಕ್ಕು ಬಾಯಿಯ ಹಿರಿಯರೂ ಕೂಡಾ ಸವಿಯಬಹುದು.


ಪ್ರಸನ್ನಾಪ್ರಸಾದ್ ಭಟ್ ಸಮೃದ್ಧಿ ಪೇತ್ರಿ, ಚೇರ್ಕಾಡಿಯಲ್ಲಿ ಸಕ್ರಿಯವಾಗಿರುವ ಸಂಜೀವಿನಿ ಮಹಿಳಾ ಗುಂಪಿನ ಅಧ್ಯಕ್ಷೆ. ಮೊದಲ ಬಾಕಾಹು ಪ್ರಯೋಗದ ನಂತರ ಇವರಿಗೆ ಈ ಪ್ರಯೋಗವನ್ನು ಇನ್ನೂ ವಿಸ್ತರಿಸಿದರೆ ಹೇಗೆ ಎಂಬ ಉಮೇದು ಹುಟ್ಟಿದೆ. ಮಹಿಳಾ ಗುಂಪಿನ ಇತರರನ್ನೂ ಬಾಕಾಹು ಆಕರ್ಷಿಸಿದೆ. 


ಇವರುಗಳು ನಾಳೆಯಿಂದ ಎರಡನೆ ಸುತ್ತು ಬಾಕಾಹು ತಯಾರಿ. ಇಷ್ಟರಲ್ಲೇ ಇವರು ಕಚ್ಚಾವಸ್ತು ಲಭ್ಯತೆ, ಅದರ ಬೆಲೆ, ಬಾಕಾಹುವಿನ ರಿಕವರಿ ರೇಟ್ ಇತ್ಯಾದಿಗಳ ಬಗ್ಗೆ ಅಭ್ಯಸಿಸಿದ್ದಾರೆ. ಬಾಕಾಹುವಿನ ಚಿಕ್ಕ ಮನೆ ಉದ್ದಿಮೆ ಮಾಡಬಾರದೇಕೆ ಎಂಬ ಪ್ರಶ್ನೆ ಮನದಲ್ಲಿ ಎದ್ದಿದೆ. ನೋಡೋಣ.

- Key Words: Banana Flour, Banana Powder, Bakahu, Recipe, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಹಾಲ್ಬಾರಿ, ಸವಿರುಚಿ, 

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top