ಶ್ರೀರಾಮಾಯಣ ಹಕ್ಕಿನೋಟ
ಸೀತೆಯ ಭೂಮಿಜಾತೆಯ
ರಾಗ: ಸಾವೇರಿ. ತಾಳ: ಅಟ್ಟ
ಸೀತೆಯ ಭೂಮಿಜಾತೆಯ ಜಗ-
ನ್ಮಾತೆಯ ಸ್ಮರಿಸಿ ವಿಖ್ಯಾತೆಯ|
ಕ್ಷೀರವಾರಿಧಿಯ ಕುಮಾರಿಯ ತನ್ನ
ಸೇರಿದವರ ಭವಹಾರಿಯ|
ತೋರುವಳು ಮುಕ್ತಿದಾರಿಯ ಸರ್ವ-
ಸಾರ ಸುಂದರ ಶ್ರೀನಾರಿಯ||
ಈಶಕೋಟಿಯೊಳು ಗಣನೆಯ ಸ್ವಪ್ರ-
ಕಾರವಾದ ಗುಣಶ್ರೇಣಿಯ|
ಈಶಾದ್ಯರ ಪೆತ್ತ ತರುಣಿಯ ನಿ-
ರ್ದೋಷ ವಾರಿಧಿಕಲ್ಯಾಣಿಯ|
ವಿಜಯವಿಠಲನ್ನ ರಾಣಿಯ ಪಂ-
ಕಜ ಮಾಲೆ ಪಿಡಿದ ಪಾಣಿಯ|
ವಿಜಯಲಕ್ಷ್ಮಿ ಗಜಗಮನೆಯ ನಿತ್ಯ
ಸುಜನವಂದಿತೆ ಅಹಿವೇಣಿಯ||
-ವಿಶ್ವ
(U S Vishweshwara Bhat)
ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ