ಪಿಯು ಫಲಿತಾಂಶ: ಪುತ್ತೂರಿನ ಅಂಬಿಕಾ ವಿದ್ಯಾಲಯದ 17 ಮಂದಿಗೆ 600 ಅಂಕ, 198 ಮಂದಿಗೆ ಡಿಸ್ಟಿಂಕ್ಷನ್

Upayuktha
0

ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿರುವ ಅಂಬಿಕಾ ಪಿಯು ಕಾಲೇಜುಗಳ ಒಟ್ಟು 17 ಮಂದಿ ವಿದ್ಯಾರ್ಥಿಗಳು ಮಂಗಳವಾರ ಘೋಷಣೆಯಾದ ಪಿಯು ಫಲಿತಾಂಶದಲ್ಲಿ ಆರು ನೂರು ಅಂಕಗಳಿಗೆ ಆರು ನೂರು ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಮೈಸೂರಿನ ರಾಜು ಹಾಗೂ ತನುಜಾ ದಂಪತಿ ಪುತ್ರಿ ರಕ್ಷಿತಾ, ಪುತ್ತೂರಿನ ರಾಜೇಶ್ ಎಂ. ಆರ್ ಹಾಗೂ ಸಪ್ನ ಆರ್ ರಾವ್ ಪುತ್ರಿ ಅನಘಾ ರಾವ್, ನೇರಳಕಟ್ಟೆಯ ಶ್ರೀಧರ ರೈ ಹಾಗೂ ರತ್ನಾ ರೈ ದಂಪತಿ ಪುತ್ರಿ ಅನೂಷಾ ರೈ ಕೆ, ಆಲಂಕಾರಿನ ಪದ್ಮನಾಭ ಕೆ ಹಾಗೂ ಸುಮಂಗಲಾ ಕೆ ದಂಪತಿ ಪುತ್ರಿ ಅನುಶ್ರೀ ಕೆ, ಪುತ್ತೂರಿನ ಬೆಳ್ಳಿಪ್ಪಾಡಿಯ ಕೊರಗಪ್ಪ ಗೌಡ ಹಾಗೂ ಶಾರದಾ ಕೆ ದಂಪತಿಗಳ ಪುತ್ರಿ ದೀಪಶ್ರೀ ಕೆ, ಪುತ್ತೂರಿನ ಇ. ನಾರಾಯಣ ಹೇರಳೆ ಹಾಗೂ ಇ ರೇಖಾ ಹೇರಳೆ ಪುತ್ರ ಇ ಶ್ರೇಯಸ್ ಹೇರಳೆ, ವಿಟ್ಲದ ಈಶ್ವರ ಭಟ್ ಡಿ ಹಾಗೂ ಶಶಿಕಲಾ ಡಿ ದಂಪತಿ ಪುತ್ರ ಗೋವಿಂದ ಪ್ರಸಾದ್ ಡಿ, ಪುತ್ತೂರಿನ ಹರಿಶ್ಚಂದ್ರ ಎಚ್ ಹಾಗೂ ಶೋಭಾ ಡಿ.ಜಿ ದಂಪತಿ ಪುತ್ರಿ ಕೃತಿ ಎಚ್.ಎಸ್, ಪುತ್ತೂರಿನ ರವೀಂದ್ರ ಪೈ ಹಾಗೂ ಛಾಯಾ ಆರ್ ಪೈ ಪುತ್ರಿ ಎನ್ ರಮ್ಯಾ ಪೈ, ಸಾಲೆತ್ತೂರಿನ ಕೆ.ವಿ.ಸೋಮಶೇಖರ ಶೆಟ್ಟಿ ಹಾಗೂ ಪೂರ್ಣಿಮಾ ದಂಪತಿ ಪುತ್ರ ಪುಷ್ಪರಾಜ್ ಶೆಟ್ಟಿ ಕೆ. ಎಸ್, ಮಾಣಿಯ ಜಿ.ಎಂ.ಅಬ್ದುಲ್ ಶುಕೂರ್ ಹಾಗೂ ನಸೀಮಾ ಬಾನು ವಿ ದಂಪತಿ ಪುತ್ರ ಎಸ್.ಮಹಮ್ಮದ್ ಆಶಿಕ್, ನೇರಳಕಟ್ಟೆಯ ಕೃಷ್ಣ ಕುಮಾರ್ ಎನ್ ಹಾಗೂ ವಿಜಯಲಕ್ಷ್ಮಿ ವಿ.ಕೆ ದಂಪತಿ ಪುತ್ರಿ ಶ್ರೀಲಕ್ಷ್ಮಿ ಎನ್, ಕೆದಿಲದ ಶ್ರೀಧರ್ ಹಾಗೂ ವನಿತಾ ದಂಪತಿ ಪುತ್ರಿ ಸುರಕ್ಷಾ ಎಸ್ ಸಾಲಿಯಾನ್, ಸುಳ್ಯದ ವಸಂತ ವಿ.ಎಂ ರೈ ಹಾಗೂ ಶಶಿಕಲಾ ದಂಪತಿ ಪುತ್ರಿ ವರ್ಷಾ ವಿ ರೈ ಆರು ನೂರು ಅಂಕಗಳಲ್ಲಿ ಆರುನೂರು ಅಂಕ ದಾಖಲಿಸಿದ್ದಾರೆ.


ಇನ್ನು ವಾಣಿಜ್ಯ ವಿಭಾಗದಲ್ಲಿ ಸುಳ್ಯದ ಸೀತಾರಾಮ್ ಎಂ ಹಾಗೂ ಸರೋಜಾ ಕೆ ಪುತ್ರಿ ಸಿಂಚನಾ ಎಂ, ಹಿರೇಬಂಡಾಡಿಯ ಅಶೋಕ್ ಕುಮಾರ್ ರೈ ಹಾಗೂ ಸುಜಾತಾ ಎ ರೈ ದಂಪತಿ ಪುತ್ರಿ ಶರಣ್ಯ ಎ ರೈ, ಪುಣಚದ ಶಿವಶಂಕರ ಶಾಸ್ತ್ರಿ ಹಾಗೂ ವಿದ್ಯಾ ದಂಪತಿ ಪುತ್ರಿ ಚೈತನ್ಯಾ ಸಿ ಆರು ನೂರು ಅಂಕಗಳಲ್ಲಿ ಸಂಪೂರ್ಣ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ವಿಜ್ಞಾನ ವಿಭಾಗದ ಒಟ್ಟು 288 ಮಂದಿ ವಿದ್ಯಾರ್ಥಿಗಳಲ್ಲಿ 183 ಮಂದಿ ಡಿಸ್ಟಿಂಕ್ಷನ್, 103 ಮಂದಿ ಪ್ರಥಮ ದರ್ಜೆ ಹಾಗೂ 2 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದರೆ ವಾಣಿಜ್ಯ ವಿಭಾಗದ ಒಟ್ಟು 35 ವಿದ್ಯಾರ್ಥಿಗಳಲ್ಲಿ 15 ಮಂದಿ ಡಿಸ್ಟಿಂಕ್ಷನ್ ಹಾಗೂ 20 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ನಟ್ಟೋಜ ಫೌಂಡೇಶನ್ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಸಂತಸ ವ್ಯಕ್ತಪಡಿಸಿದ್ದಾರೆ.

Key Words: PUC Results, 

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top