ಸುಲಭ ವಿಷಮುಕ್ತ ನೈಸರ್ಗಿಕ ಕೃಷಿ ಕ್ರಮಗಳು - 2

Upayuktha
0

(ಕೃಷಿ ವಿಜ್ಞಾನಿಗಳು ಹೇಳದ ಪಾಠ)



ಒಂದು ಗಿಡ/ಮರಕ್ಕೆ - 6 ಮುಖ್ಯ ಪೋಷಕಾಂಶಗಳ ಅವಶ್ಯಕತೆ ಇದೆ, ಅದರಲ್ಲಿ potash ಒಂದು. ಒಂದು ಎಕರೆ ಅಡಿಕೆ ತೋಟಕ್ಕೆ ಬೇಕಾಗುವ ಪೊಟ್ಯಾಷ್ ಸುಮಾರು 80 - 100 ಕೆಜಿ. ಇದನ್ನು ಅತೀ ಸುಲಭವಾಗಿ, ನೈಸರ್ಗಿಕವಾಗಿ ಹೀಗೆ ಕೊಡಬಹುದು-

ಬಾಳೆಗಿಡ

ಒಂದು ಎಕರೆಗೆ ಸುಮಾರು 200 ಬಾಳೆಗಿಡ ಹಾಕಿ. ಅದರ ಪ್ರತಿಯೊಂದು ವಸ್ತುಗಳಿಂದ (ಹಣ್ಣು, ಎಲೆ, ಕಾಂಡ) ಬೇಕಾದಷ್ಟು potash ಲಭ್ಯ.


ಇನ್ನು ಒಂದು ಬಾಳೆಗಿಡದಿಂದ ಏನೆಲ್ಲಾ ಲಾಭ ಅಂತ ತಿಳಿಯೋಣ

1. ಬಾಳೆ ಎಲೆ - ಊಟ ಮಾಡಲು ಉಪಯೋಗಿಸಬಹುದು, ಮಾರಾಟ ಕೂಡಾ ಮಾಡಬಹುದು.

2. ಬಾಳೆ ಹಣ್ಣು - ಅತ್ಯುತ್ತಮ ಹಣ್ಣು, ಸ್ವಂತ ಉಪಯೋಗಕ್ಕೆ ಹಾಗೂ ಮಾರಾಟ ಮಾಡಲು.

3. ಬಾಳೆಕಾಯಿ - ಇದನ್ನು ಅಡಿಗೆಯಲ್ಲಿ ಉಪಯೋಗ ಮಾಡಬಹುದು, ಇದರಿಂದ ಹುಡಿ ತಯಾರಿಸಿ (ರೂ 200/ಕೆಜಿ) ಮಾರಾಟ ಮಾಡಬಹುದು.

4. ಬಾಳೆ ದಂಡು - ಅಡಿಗೆಯಲ್ಲಿ, ಜ್ಯೂಸು ಮಾಡಲು ಉಪಯೋಗ ಮಾಡಬಹುದು, ಕೆಲವು ಕಿಡ್ನಿ ಸ್ಟೋನ್ ನಿವಾರಿಸಲು ಉತ್ತಮ.

5. Potash ಅಂಶ ಇರುವ ಒಂದು ಅತೀ ಉತ್ತಮ ಗಿಡ.

6. ಇದರ ಗಡ್ಡೆ ಮಾರಿ ಹಣ ಮಾಡಬಹುದು.


ನೋಡಿ ಒಂದು ಬಾಳೆಗಿಡದಿಂದ ಎಷ್ಟೆಲ್ಲ ಉಪಯೋಗ ಅಲ್ಲವೇ?

ನಿಮ್ಮ ತೋಟದಲ್ಲಿ, ಯಾವುದೇ ತರಹದ ಬಾಳೆಗಿಡ ನೆಡಿ, ಒಳ್ಳೆಯ ಆದಾಯ + ನೈಸರ್ಗಿಕವಾಗಿ ಭೂಮಿಗೆ potash ಕೊಡಲು ಒಂದು ಅತೀ ಉತ್ತಮ ಗಿಡ.

-ಶಿವರಾಮ ಭಟ್ ಮಣಿಪಾಲ

Key Words: Natural Farming, ಸಹಜ ಕೃಷಿ, ನೈಸರ್ಗಿಕ ಕೃಷಿ, ವಿಷಮುಕ್ತ ನೈಸರ್ಗಿಕ ಕೃಷಿ,


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top