ಪಾಲಿಟಿಕ್ಸ್: ಕರ್ನಾಟಕ ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವವರು ಯಾರು?

Upayuktha
0

ಇದು ಇಂದು ನಮ್ಮ ಮುಂದಿರುವ ಯಕ್ಷ ಪ್ರಶ್ನೆ. ಭಾರತೀಯ ಜನತಾ ಪಕ್ಷವೇ ಅಲ್ಲವೇ ಅಲ್ಲ...! ಕಾಂಗ್ರೆಸ್ ಪಕ್ಷವೇ ಖಂಡಿತವಾಗಿಯೂ ಅಲ್ಲ; ರಾಷ್ಟೀಯ ಪಕ್ಷವೆಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಜೆಡಿಎಸ್ಸೇ ನೂರಕ್ಕೆ ನೂರು ಅಲ್ಲ. ಹಾಗಾದರೆ ಕರುನಾಡಿನ ಇಡಿ ರಾಜಕಾರಣದ ಭವಿಷ್ಯವನ್ನು ಬರೆಯುತ್ತಿರುವವರು ಯಾರು? ಇದಕ್ಕೆ ಉತ್ತರ ಬೇಕೇ. ಹಾಗಾದರೆ ಈ ನಾಲ್ಕು ವ್ಯಕ್ತಿಗಳ ಕಡೆಗೆ ಕಣ್ಣು ಹಾಯಿಸಿ. ಗಮನವಿಟ್ಟು ಕೇಳಿ.


ತಾನು ಬಿಜೆಪಿಯ ಕಟ್ಟಾಳು ಎಂದೇ ಕರೆದು ಕೊಂಡಿರುವ ಲಿಂಗಾಯಿತ ಸಮುದಾಯದ  ಉದ್ದಾರಕರಾಗಿಯೇ ಬಿಂಬಿಸಿಕೊಂಡಿರುವ ರಾಜ್ಯದ ಜನ ಮಾನಸದಲ್ಲಿ ಮಾಸ್ ಲೀಡರ್ ಅನ್ನಿಸಿ ಕೊಂಡಿರುವ ಯಡಿಯೂರಪ್ಪನವರು. ಕರುನಾಡ ರಾಜ್ಯ ದಲ್ಲಿ ಬಿಜೆಪಿಗೆ ಅಧಿಕಾರ ಬೇಕಿದ್ದರೆ ಯಡಿಯೂರಪ್ಪ ಅನಿವಾರ್ಯ ಅನ್ನುವುದು ಜನ ಜನಿತವಾದ ಮಾತು. ಮಾತು ಮಾತ್ರವಲ್ಲ ಅದು ಸತ್ಯವೂ ಹೌದು. ಯಡಿಯೂರಪ್ಪ ಇಲ್ಲದ ಬಿಜೆಪಿ ಅಧಿಕಾರ ಹಿಡಿಯುವುದು ಕಷ್ಟ ಅನ್ನುವುದನ್ನು ಈ ಹಿಂದೆಯೇ ಬಿಜೆಪಿಗೆ ಅಥ೯ವಾಗಿದೆ. ಇದು ಬಿಜೆಪಿಯ ಹೆೈಕಮಾಂಡಿಗೂ ತಿಳಿದಿದೆ. ಹಾಗಾಗಿ ಇವರನ್ನು ಮಾತನಾಡಿಸುವ ಮೊದಲು ಮೂರು ಬಾರಿ ಯೇೂಚಿಸ ಬೇಕಾದ ಪರಿಸ್ಥಿತಿ ಬಿಜೆಪಿ ಹೆೈಕಮಾಂಡರುಗಳದ್ದು. ಉತ್ತರ ಭಾರತದಲ್ಲಿ ಹಿಂದುತ್ವ; ಮೇೂದಿ ಫ್ಯಾಕ್ಟರ್ ಎಷ್ಟೇ ಗಟ್ಟಿ ಇದ್ದರೂ ದಕ್ಷಿಣ ಭಾರತದಲ್ಲಿ ಅದರಲ್ಲಿ ಕನಾ೯ಟಕ ಮಟ್ಟಿಗೆ ಲಿಂಗಾಯತ ಒಕ್ಕಲಿಗರ ಧ್ವನಿಯೇ ಹೆಚ್ಚು ಮೇಳೆೈಸುತ್ತದೆ ಅನ್ನುವುದು ಮೇೂದಿಗೂ ತಿಳಿದಿದೆ ಅಮಿತ್ ಶಾರಿಗೂ ಅರಿವಿದೆ.


ಇನ್ನೂ ಕಾಂಗ್ರೆಸ್ ನದ್ದು ಕತೆಯೇ ಬೇರೆ.ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಉಸಿರಾಡುತ್ತಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮಾತಿನ ವರಸೆಯ ಮೇಲೆ ಹೊರತು ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಹೆೈಕಮಾಂಡ್ ಬರೇ ಬಿದಿರಿನ ಗೊಂಬೆಗಳೇ ಹೊರತು ರಾಜ್ಯ ರಾಜಕಾರಣದ ಭವಿಷ್ಯದ ಮೇಲೆ ಪ್ರಭಾವ ಬೀರುವಷ್ಟು ವರ್ಚಸ್ಸಾಗಲಿ ತಾಕತ್ತಾಗಲಿ ಇಲ್ಲ ಅನ್ನುವುದು ಸಿದ್ದರಾಮಯ್ಯನವರಿಗೂ ಗೊತ್ತಿದೆ, ಡಿಕೆಶಿಗೂ ತಿಳಿದಿದೆ. ಇಂದು ಕಾರ್ಯಕರ್ತರಲ್ಲಿ ಜೀವ ತುಂಬಿ ಒಗ್ಗೂಡಿಸುವ ಶಕ್ತಿಗಳೆಂದರೆ  ಕಾಂಗ್ರೆಸ್ ಪಕ್ಷದ ಸಾಂಕೇತಿಕವಾದ ಚಿಹ್ನೆಗಳೇ ಹೊರತು ನಾಯಕರುಗಳಲ್ಲ ಅನ್ನುವುದು ಹೊರ ನೇೂಟಕ್ಕೆ ಬಿಂಬಿತವಾದ ಸತ್ಯಾಂಶವೂ ಹೌದು. ಹಾಗಾಗಿ ಗೌಡರು ಕುರುಬರನ್ನೂ ಬಿಟ್ಟು ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅನ್ನುವುದು ಕಾಂಗ್ರೆಸ್ ಪಕ್ಷದ ಹೆೈಕಮಾಂಡಿಗೂ ತಿಳಿದಿದೆ. ಲೇೂ ಕಮಾಂಡಿಗೂ ಗೊತ್ತಿರುವುದರಿಂದಲೇ ಮೂಲನಿವಾಸಿಗಳು ಮತ್ತು ವಲಸಿಗರ ಪ್ರಶ್ನೆಗಳಿಗೆ ಮೌನ ವಹಿಸುವುದೇ ಇಂದಿನ ಸುರಕ್ಷತಾ ವಿಧಾನ ಅನ್ನುವುದು ಕಾಂಗ್ರೆಸ್‌ಗೆ ಅಥ೯ವಾಗಿದೆ.


ರಾಜ್ಯದಲ್ಲಿ ಇನ್ನು ಉಳಿದಿರುವುದು ಜಾತಿ ವಂಶಾವಳಿಯ ತೆಕ್ಕೆಯಲ್ಲಿ ಬೆಳೆದು ಬಂದಿರುವ ಜಾತ್ಯತೀತ ಜನತಾದಳ. ಕರ್ನಾಟಕದಲ್ಲಿ ಏಕ ಪಕ್ಷೀಯವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ದೇವೇಗೌಡರಿಗೂ ತಿಳಿದಿದೆ, ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಹಾಗಾಗಿ ತಮ್ಮ ಜಾತಿ ಶಕ್ತಿಗೆ ಯಾರು ಲಗ್ಗೆ ಹಾಕದ ಹಾಗೆ ಜಾಗೃತಿ ವಹಿಸಿ ರಾಜಕಾರಣ ಮಾಡುತ್ತಾರೆ. ಇವರ ಮತ ಬ್ಯಾಂಕ್‍ಗಳ ಕ್ಷೇತ್ರಗಳನ್ನು ಸುರಕ್ಷತೆಯಾಗಿ ಇಟ್ಟುಕೊಂಡಾಗ ಮಾತ್ರ ಸಮಿಶ್ರ ಸರಕಾರ ಇವರಿಗೆ ವರದಾನ. ಆದುದರಿಂದಲೇ ದೇವೇಗೌಡ್ರು ಕುಮಾರಸ್ವಾಮಿ ರೇವಣ್ಣನವರು ಯಾವಾಗೂ ಒಟ್ಟಿಗೆ ಸೇರಿ ಯಾವುದೇ ಒಂದು ಪಕ್ಷದ ಪರ ವಕಾಲತ್ತು ವಹಿಸಿ ಮಾತನಾಡುವ ಗೌಜಿಗೆ ಹೇೂಗುವುದೇ ಇಲ್ಲ. ಇದು ಅವರ ರಾಜಕೀಯ ತಂತ್ರಗಾರಿಕೆಯೂ ಹೌದು.


ಒಂದು ವೇಳೆ ಈ ಮೂರು ಪಕ್ಷಗಳನ್ನು ಬದಿಗಿಟ್ಟುಈ ನಾಲ್ವರ ಜಾತಿ ರಾಜಕೀಯ ಸಮೀಕರಣ ಭವಿಷ್ಯದಲ್ಲಿ ಹೇಗಾಗಬಹುದು ಅನ್ನುವುದು ರಾಜಕೀಯ ವಲಯದಲ್ಲಿ ಹುಟ್ಟಿ ಕೊಳ್ಳುವ ಕುತೂಹಲದ ಪ್ರಶ್ನೆಯೂ ಹೌದು.


ರಾಜಕೀಯ ಸಮೀಕರಣದ ಸಾಧ್ಯತೆಗಳು:

ಯಡಿಯೂರಪ್ಪ-ಡಿ.ಕೆ.ಶಿ ಮತ್ತು ಕುಮಾರಸ್ವಾಮಿ. ಈ ಹೊಂದಾಣಿಕೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಇನ್ನೊಂದು ರಾಜಕೀಯ ಹೊಂದಾಣಿಕೆಯ ಸಾಧ್ಯತೆ ಯಡಿಯೂರಪ್ಪ-ಸಿದ್ದರಾಮಯ್ಯ. ಇಲ್ಲಿ ಡಿ.ಕೆ.ಶಿ.-ಕುಮಾರಸ್ವಾಮಿ ಹೊರಗೆ ಇರಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಇದೆಲ್ಲವೂ ಪಕ್ಷ ತತ್ವಗಳನ್ನು ಮೀರಿ ಜಾತಿ ಪ್ರಾಬಲ್ಯದಲ್ಲಿಯೇ ಸರಕಾರ ರಚನೆಗೆ ಮುಂdAದಾಗ ಕಾಣುವ ಕರ್ನಾಟಕದ ರಾಜಕೀಯ ಪರಿಸ್ಥಿತಿ.


ಈ ಎರಡು ಸಮೀಕರಣದಲ್ಲಿ ಯಡಿಯೂರಪ್ಪನವರ ಪಾತ್ರ ಮಹತ್ವವಾಗಿರುವ ಕಾರಣ ಬಿಜೆಪಿ ಯಡಿಯೂರಪ್ಪನವರ ಸಂಬಂಧವನ್ನು ಕಳಚಿಕೊಳ್ಳಲು ಖಂಡಿತವಾಗಿಯೂ ಸಾಧ್ಯವಿಲ್ಲ. ಆದುದರಿಂದಲೇ ಯಡಿಯೂರಪ್ಪನವರ ಮಕ್ಕಳಾದ ರಾಘವೇಂದ್ರ ಅಥವಾ ವಿಜಯೇಂದ್ರ ಅವರಿಗೆ ಬಿಜೆಪಿಯಲ್ಲಿ ಉನ್ನತವಾದ ಹುದ್ದೆ ನೀಡಲೇಬೇಕಾದ ವಾತಾವರಣ ರಾಜ್ಯದಲ್ಲಿ  ಸೃಷ್ಟಿಯಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top