ರೈತರು, ಗೃಹೋದ್ಯಮಿಗಳ ಮುಖದಲ್ಲಿ ಹೊಸ ಮಂದಹಾಸ ಮೂಡಿಸುವ ಬಾಳೆಕಾಯಿ ಹುಡಿ ತಯಾರಿಸುವ ಅಭಿಯಾನ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಮನೆ ಮನೆಯಲ್ಲಿ 'ಬಾಕಾಹು' ಪ್ರಯೋಗಗಳು ರಂಗೇರುತ್ತಿವೆ.
ನಿಮ್ಮಲ್ಲಿ ಯಾವಾಗಮ್ಮಾ ಬಾಕಾಹು ತಯಾರಿ? ಅದು ಸುಲಭ, ಖುಷಿದಾಯಕ, ರುಚಿಕರ, ಪೋಷಕಾಂಶಭರಿತ. ಬಾಕಾಹುವನ್ನು ಕೃಷಿಕರ ಹೆಮ್ಮೆ, ನೆರೆಯವರ ಅಸೂಯೆಯಾಗಿಸೋಣ.
ಬಾಳೆಕಾಯಿ ಹುಡಿ (ಬಾಕಾಹು) ಬಗ್ಗೆ ಆಸಕ್ತಿ ಚಿಗುರೊಡೆದಾಗ ಮನೆಯಲ್ಲಿ ಡ್ರೈಯರ್ ಇಲ್ಲದ ಕೃಷಿ ಮಹಿಳೆಯರಿಗೆ ಮುಖ ಬಾಡಿದ್ದು ನಿಜ. ಹಾಗೆ ಬಾಡಿದ ಮುಖಗಳಲ್ಲಿ ಇಂಫು ಮಂದಹಾಸ. ಕಾರಣ ಬೆಳಗಿನಿಂದಲೇ ಎಲ್ಲೆಲ್ಲೂ ಉತ್ತಮ ಬಿಸಿಲು.
ಮೊದಲ ಚಿತ್ರ ಉಕ ಜಿಲ್ಲೆಯ ಶಿರಗೋಡಿನ ಸುವರ್ಣಕ್ಕನ ಅಂಗಳದ್ದು. ಬಿಸಿಲಲ್ಲೇ ಬಾಳೆಕಾಯಿಯ ಚಿಪ್ಸ್ ಮಾಡುತ್ತಾ ತಾವೂ ಒಣಗುತ್ತಿರುವ ಚಿತ್ರ ದಕ ಜಿಲ್ಲೆಯ ಉಜಿರೆ ಬಳಿಯ ಉಷಾ ಮೆಹೆಂದಳೆ ಅವರ ಮನೆಯದು.
ಬಾಕಾಹು ಪಕೋಡ ಮಾಡಿ ಸಂಜೆ ಕಾಫಿಗೆ ಸವಿಯಹತ್ತಿದವರು ಉಕ ಜಿಲ್ಲೆಯ ಸಿದ್ದಾಪುರ ತಾಲೂಕಿನ 'ಸಾವಯಯ ಗ್ರಾಮ’ ಖ್ಯಾತಿಯ ಕಿಲಾರದವರು. ಸತೀಶ್ ಹೆಗಡೆ ಕುಟುಂಬ.
ತಡವೇಕೆ? ನೀವೂ ಆರಂಭಿಸಿ. ಬಗೆಬಗೆಯ ತಿನಿಸುಗಳ ಪ್ರಯೋಗವನ್ನೂ ಮಾಡಿ. ನಿಮ್ಮ ಯಶೋಗಾಥೆಯನ್ನು ಎಲ್ಲರ ಜತೆ ಹಂಚಿಕೊಳ್ಳಿ. ತಿಂಗಳೊಳಗೆ ದೊಡ್ಡ ದೊಡ್ಡ ಉದ್ಯಮಿಗಳೇ ಇತ್ತ ಕಣ್ಣು ಹಾಯಿಸದಿದ್ದರೆ ಮತ್ತೆ ಕೇಳಿ...
(ಅಭಿಯಾನದ ದಿಗ್ದರ್ಶಕರು- ಶ್ರೀಪಡ್ರೆ)
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ