'ಬಾಕಾಹು' ಮಾತ್ರ ಸಾಕು 'ತೆಳ್ಳೇವಿ'ಗೆ; ನಮ್ಮದೇ ಬಾಕಾಹು ಇದ್ದರೆ ಅಂಗಡಿಯಕ್ಕಿಯ ಹಂಗೇಕೆ?

Upayuktha
1

ಉಕ ಜಿಲ್ಲೆಯ ಹಲವು ಮನೆಗಳಲ್ಲೀಗ 'ಬಾಕಾಹು’ (ಬಾಳೆಕಾಯಿ ಹುಡಿ/ಹಿಟ್ಟು) ತಯಾರಿ, ಅದರಿಂದ ಮತ್ತೆ ಹತ್ತಾರು ಪಾಕೇತನಕ್ಕೆ ಸಿದ್ಧತೆ.


ಭಂಡಿಮನೆ ಜಾಹ್ನವಿ ಹೆಗಡೆ ಬಾಕಾಹು ತೆಳ್ಳೇವು ತಯಾರಿಯಲ್ಲಿ ಗೆದ್ದಿದ್ದಾರೆ."ಆರ್ಧರ್ಧ ಅಕ್ಕಿ ಮತ್ತು ಬಾಕಾಹು ಮಿಶ್ರ ಮಾಡಿ ನೋಡಿದೆವು. ಚೆನ್ನಾಗಿ ಬಂತು. ಬರೇ ಬಾಕಾಹುವಿನ ತೆಳ್ಳೇವು ಎಬ್ಬಿಸಲು ಬರಲಾರದೇನೋ ಎಂಬ ಸಂಶಯ ಇತ್ತು. ನೋಡಿಯೇ ಬಿಟ್ಟೆವು. ಏನೇನೂ ಅಡ್ಡಿಯಿಲ್ಲ" ಎನ್ನುತ್ತಾರೆ ಜಾಹ್ನವಿ. "ಬಾಕಾಹುವಿನ ಆಹಾರ ದಡವು ಜಾಸ್ತಿ. ಬೇಗನೆ ಹಸಿವೆಯಾಗಲು ಬಿಡುವುದಿಲ್ಲ" ಎನ್ನುತ್ತಾರೆ.


ದಿನನಿತ್ಯದ ತಯಾರಿಯ ಉಪಾಹಾರಗಳಿಗೆ ಸೂಕ್ತ ಆದರೆ ಹೆಚ್ಚು ಉಪಯೋಗ" ಎನ್ನುತ್ತಾ ಮಗ ಚಿದಾನಂದ ನಾಲ್ಕು ಟ್ರೇ ತುಂಬಾ ಬಾಳೆಕಾಯಿ ಒಣ ತಾಳಿ ಮಾಡಿಟ್ಟಿದ್ದಾರೆ. "ಕಿಲೋಗೆ ಮೂರು-ನಾಲ್ಕು ರೂಪಾಯಿಗೂ ಕೇಳುವವರಿಲ್ಲದ ಗತಿ ಬಂದು ಬಾಳೆಕಾಯಿಯನ್ನು ಆಕಳಿಗೆ ಹಾಕಿದ್ದೇವೆ. ಕಂಡಕಂಡವರಿಗೆ ತಿನ್ನಿ ಅಂತ ಕೊಟ್ಟಿದ್ದೇವೆ,"


ಚಿದಾನಂದರ ತಂದೆ ಹಿರಿಯ ಕೃಷಿಕ ಶಿವರಾಮ ಹೆಗಡೆ (71) ಈಗ ಖುಷಿಯಿಂದ ಉದ್ಗರಿಸುತ್ತಾರೆ, "ನಾವು ಸುಕೇಳಿ ಮಾಡುತ್ತೇವೆ. ಅದರಿಂದಲೂ ಇದರ ತಯಾರಿ ಸುಲಭ. ಈ ಬಾಕಾಹು ಮಾಡೋ ವಿದ್ಯೆ ಸಿಕ್ಕಿ ಧೈರ್ಯ ಬಂದಿದೆ. ಒಳ್ಳೆ ಮಾರುಕಟ್ಟೆ ಇದ್ದರೆ ವರ್ಷಪೂರ್ತಿ ಮಾಡಿ ಒದಗಿಸಬಲ್ಲೆವು."

(ಅಭಿಯಾನದ ರೂವಾರಿ- ಶ್ರೀಪಡ್ರೆ)

Key Words: Banana Powder, Banana Flour, ಬಾಳೆಕಾಯಿ ಹುಡಿ, ಬಾಕಾಹು ಅಭಿಯಾನ, ಬಾಕಾಹು ತಿನಿಸುಗಳು


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

1 Comments
  1. ಒಳ್ಳೆಯ ಪ್ರಯತ್ನ, ಆರೋಗ್ಯ ಕ್ಕೂ ಒಳ್ಳೆಯ ದು

    ReplyDelete
Post a Comment
Mandovi Motors Presents MONSOON BONANZA
Mandovi Motors Presents MONSOON BONANZA
To Top