ಅಂದ-ಚೆಂದ: 'ಬಾಕಾಹು ಫೇಸ್ ಪ್ಯಾಕಿಗೆ ಅತ್ಯುತ್ತಮ’

Upayuktha
0


"ಬ್ಯೂಟಿ ಪಾರ್ಲರುಗಳಲ್ಲಿ ಬಾಳೆಹಣ್ಣಿನಿಂದ ಫೇಸ್ ಪ್ಯಾಕ್ ಮಾಡುತ್ತಾರೆ. ಮುಖದ ನೆರಿಗೆಗಳು ಮಾಯವಾಗಬೇಕಾದರೆ ಈ ಫೇಸ್ ಪ್ಯಾಕ್ ಒಣಗಿ ಅಂಟಿ ಹಿಡಿದುಕೊಳ್ಳಬೇಕು. ಬಾಳೆ ಹಣ್ಣು ಒಣಗಲು ತುಂಬ ಕಾಲ 2- 3 ಗಂಟೆ ಬೇಕು. ಬಾಳೆಕಾಯಿ ಹುಡಿ ನೋಡಿ, ಹತ್ತೇ ನಿಮಿಷದಲ್ಲಿ ಒಣಗಿ ಗಟ್ಟಿಯಾಗಿಬಿಟ್ಟಿತು", ಹಾಸನದ ಕೃಷಿ ಮಹಿಳೆ ಹೇಮಾ ಅನಂತ್ ತಿಳಿಸುತ್ತಾರೆ. 


ಅವರು ಮುಂದುವರಿಸುತ್ತಾರೆ: "ಬಾಳೆಹಣ್ಣಿನ ಫೇಸ್ ಪ್ಯಾಕ್ ತೊಳೆದ ಮೇಲೆ ಮುಖದ ಚಿಕ್ಕಚಿಕ್ಕ ರೋಮ ಹೋಗಲು ವ್ಯಾಕ್ಸಿಂಗ್ ಮಾಡುತ್ತಾರೆ. ಬಾಕಾಹು ಫೇಸ್ ಪ್ಯಾಕ್ ಗಟ್ಟಿಯಾಗಿದ್ದಾಗಲೇ ಮೆಲ್ಲಮೆಲ್ಲನೆ ತೆಗೆದುಬಿಟ್ಟರೆ ರೋಮಗಳೂ ಹೋಗಿಬಿಡುತ್ತವೆ. ಮತ್ತೆ ವ್ಯಾಕ್ಸಿಂಗ್ ಬೇಕಾಗಿಲ್ಲ"


"ಹೇಮಾ ಅವರು ಬಳಸಿದ್ದು ಪುಟ್ಟ ಬಾಳೆ. ಒಂದು ಕಿಲೋ ಬಾಳೆಕಾಯಿಯಲ್ಲಿ 100 ಗ್ರಾಮ್ ಸಿಪ್ಪೆ ಹೋಯಿತು. ಪುಡಿ ಮಾಡಿದಾಗ 360 ಗ್ರಾಂ ಆಯಿತು" ಎನ್ನುತ್ತಾರೆ. ಇವರ ತೋಟದ ಮನೆಯಲ್ಲಿ ಒಬ್ಬರು ಅಜ್ಜಿ ಇದ್ದಾರೆ. ಅವರಿಗೆ ಮಲಬದ್ಧತೆಯ ಸಮಸ್ಯೆ. ಬಾಳೆಹಣ್ಣು ತಿನ್ನಲು ಒಪ್ಪುವುದಿಲ್ಲ. ಹೇಮಾ ದಿನಕ್ಕೆರಡು ಬಾರಿ ಅರ್ಧರ್ಧ ಚಮಚೆ ತಾನು ತಯಾರಿಸಿದ ಬಾಕಾಹುವನ್ನು ಒಂದೊ ಲೋಟ ಹಾಲಿನಲ್ಲಿ ಕರಗಿಸಿ ಕುಡಿಸಿದರು. ಒಂದು ಆರದಲ್ಲಿ ಪೂರ್ತಿ ಸಲೀಸಂತೆ.

ಹೇಮಾ ಅನಂತ್ - 94824 44406 (ರಾತ್ರಿ  7- 8)

- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Banana Flour facepack, Beauty tips, ಬಾಕಾಹು, ಬಾಳೆಕಾಯಿ ಹುಡಿ, ಸೌಂದರ್ಯ, ಅಂದಚೆಂದ, 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top