ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೇವರಕೇರಿ ದತ್ತಾತ್ರೇಯ ಭಟ್ ಅವರದು ಚಿಕ್ಕ ಹಿಡುವಳಿ. ಪತ್ನಿ ಮಮತಾ ಭಟ್ ಕಳೆದೊಂದು ವರ್ಷದಿಂದ ಮನೆಯಲ್ಲೇ ಹಲಸು ಮೌಲ್ಯವರ್ಧಿತ ಉತ್ಪನ್ನ ಮಾಡಿ ಮಾರುತ್ತಿದ್ದಾರೆ. ಹಲಸು- ಬಾಳೆಕಾಯಿ ಚಿಪ್ಸ್, ಹಪ್ಪಳ. ಶಂಕರ ಪೋಳಿ, ಮನೋಹರ, ಚಿಕ್ಕಿ- ಹೀಗೆ ಇವರ ಉತ್ಪನ್ನಗಳು ಹಲವಿವೆ. ಫೇಸ್ ಬುಕ್ಕಿನ ’ಮಹಿಳಾ ಮಾರುಕಟ್ಟೆ’ ವೇದಿಕೆಯಿಂದಾಗಿ ಇವರಿಗೆ ಈ ಥರದ ಆನ್ ಲೈನ್ ಮಾರಾಟ ಸಾಧ್ಯವಾಗಿದೆ.
ಇವರ ಬಳಿ ಡ್ರೈಯರ್ ಇಲ್ಲ. ಆದರೆ ಬಾಕಾಹು ಊರಲ್ಲಿ ಮನೆಮಾತಾದ ನಂತರ ಅದನ್ನು ತಯಾರಿಸುವ ಹಂಬಲ ಜಾಸ್ತಿ ಆಯಿತು. ಆದರೆ ವಾರದಿಂದ ಸಿಕ್ಕಾಪಟ್ಟೆ ಮಳೆ. ಕೊನೆಗೂ ಮಳೆ ಕಡಿಮೆ ಆದ ಮೇಲೆ ಬಿಸಿಲಲ್ಲೇ ಒಣಗಿಸಿ ಬಾಳೆಕಾಯಿ ಹುಡಿ (ಬಾಕಾಹು) ತಯಾರಿಸಿದರು. ರೊಟ್ಟಿ- ದೋಸೆಗಳಿಗೆ ಅರ್ಧರ್ಧ ಪಾಲು ಸೇರಿಸಿ ಮಾಡಿಯೂ ನೋಡಿದರು.
"ತಯಾರಿ ಮಾಡಲೂ ಕಷ್ಟವಿಲ್ಲ. ರುಚಿಯೂ ಚೆನ್ನಾಗಿಯೇ ಆಗುತ್ತೆ. ಬೇರೆ ಏನೂ ವಾಸನೆ ಇಲ್ಲ. ಚಪಾತಿ ಮೃದು ಆಗುತ್ತೆ. ಇಷ್ಟ ಆಯಿತು" ಎನ್ನುತ್ತಾರೆ ಮಮತಾ ಭಟ್. ಇವರು ಇಲ್ಲಿನ ಹುಳಗೋಳ ಗ್ರೂಪ್ ಗ್ರಾಮಗಳ ಸೊಸೈಟಿಯ ಮಹಿಳಾ ಸಂಘದ ಸದಸ್ಯೆ. ಈ ದಂಪತಿಗಳಿಗೀಗ 'ಒಂದು ಡ್ರೈಯರ್ ಇರಬೇಕಿತ್ತು’ ಎನಿಸಹತ್ತಿದೆ. ಸೊಸೈಟಿಯವರು ಡ್ರೈಯುರಿಗೆ ಸಾಲ ಕೊಡುತ್ತಿದ್ದಾರೆ. ಈಗಾಗಲೇ ಊರಲ್ಲಿ ಕೆಲವು ಸಣ್ಣ ಹಿಡುವಳಿದಾರರು ಡ್ರೈಯರ್ ಹಾಕಿಸಿಕೊಂಡಿದ್ದಾರೆ.
ಡ್ರೈಯರ್ ಇದ್ದರೆ ಬೇಕೆಂದಾಗ ಬಾಕಾಹು ಮಾಡಬಹುದು. ಕಚ್ಚಾವಸ್ತು ಹನ್ನೆರಡು ತಿಂಗಳು ಸಿಗುತ್ತದೆ. "45,000 ರೂ.ಯದು ಸ್ವಲ್ಪ ಗಟ್ಟಿಮುಟ್ಟಾದ ಡ್ರೈಯರ್ ಮತ್ತು ಇನ್ನೊಂದು 25,000ದ್ದು ಸಣ್ಣ ಬೆಳೆಗಾರರಿಗೆ ಅನುಕೂಲವಾದದ್ದು ಇದೆಯಂತೆ. ನೋಡಬೇಕು" ಎನ್ನುತ್ತಿದ್ದಾರೆ.
ಸಂಪರ್ಕ: ದತ್ತಾತ್ರೇಯ ಭಟ್- 87628 46259
ಮಮತಾ ಭಟ್- 82775 98811 (ರಾತ್ರಿ 7:30- 8:30)
ಚಿತ್ರ: ಗೌತಮ್ ಡಿ. ಭಟ್
(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Dryer, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಡ್ರೈಯರ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ