ಈಗ ’ಬಾಕಾಹು’ ತುಮಕೂರಿನಲ್ಲೂ

Upayuktha
0


ಕಳೆದೊಂದು ತಿಂಗಳಲ್ಲಿ ಬಾಳೆಕಾಯಿಯ ಮೌಲ್ಯವರ್ಧನೆ ಮಾಡಿ ಬಾಕಾಹು ಮಾರಾಟಕ್ಕೆ ತೊಡಗಿರುವ ನಾಲ್ಕನೆಯ ಕೃಷಿಕುಟುಂಬ ಇದು.


ಕರ್ನಾಟಕದ ’ಬಾಕಾಹು’ (ಬಾಳೆಕಾಯಿ ಹುಡಿ / ಹಿಟ್ಟು) ಆಂದೋಳನಕ್ಕೆ ನಾಂದಿ ಹಾಡಿದವರು ತುಮಕೂರು ಗುಬ್ಬಿ ತಾಲೂಕಿನ ಅತ್ತಿಕಟ್ಟೆಯ ಕೃಷಿಕುಟುಂಬದ ಗೃಹಿಣಿ ನಯನಾ ಆನಂದ್. ನಯನಾ ಇತ್ತೀಚೆಗೆ ಹೊಸ ಡ್ರೈಯರ್ ಖರೀದಿಸಿ, ಮನೆಮಟ್ಟದಲ್ಲಿ ಬಾಕಾಹು ಉತ್ಪಾದನೆ ಆರಂಭಿಸಿದ್ದಾರೆ.


ಬಾಳೆಕಾಯಿಯ ಮೌಲ್ಯವರ್ಧನೆ ಮಾಡಿ ಬಾಕಾಹು ಮಾರಾಟಕ್ಕೆ ತೊಡಗಿರುವ ಐದನೆಯ ಕೃಷಿಕುಟುಂಬ ಇದು. ಬೆಳಗಾವಿ ಜಿಲ್ಲೆಯಲ್ಲಿ ಅಜ್ಜಪ್ಪ ಕುಲಗೋಡ್, ಉಕದಲ್ಲಿ ವಸುಂಧರಾ ಹೆಗಡೆ, ಗಂಗಾ ಹೆಗಡೆ, ದಕದಲ್ಲಿ ಶ್ರೀನಿವಾಸ ಹೊಳ್ಳ ಮಕ್ಕಾರ್ ಈಗಾಗಲೇ ಸಣ್ಣ ಪ್ರಮಾಣದಲ್ಲಿ  ’ಮನೆ ಉತ್ಪಾದಿತ’ ಬಾಳೆಕಾಯಿ ಹಿಟ್ಟನ್ನು ಆಸಕ್ತರಿಗೆ ನೇರ / ಪಾರ್ಸೆಲ್ ಮೂಲಕ ಒದಗಿಸುತ್ತಿದ್ದಾರೆ.


ಮಲೆನಾಡಿನಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆ ಈಗ ಕಡಿಮೆಯಾಗುವುದರೊಂದಿಗೆ ನೂರಾರು ಕೃಷಿಕ ಕುಟುಂಬಗಳು ಮನೆಮಟ್ಟಿಗೆ ಬಾಕಾಹು ಉತ್ಪಾದಿಸಿ ಪ್ರಯೋಗ ನಡೆಸುವ ಸಾಧ್ಯತೆ ಬಲವಾಗಿದೆ. 


ಸಿಪ್ಪೆರಹಿತ ಬಾಕಾಹು - ಕಿಲೋಗೆ ರೂ. 250 ; ಸಿಪ್ಪೆಸಹಿತ ಬಾಕಾಹು - ಕಿಲೋಗೆ ರೂ. 200. 

ಬಾಕಾ ರವೆ - ಕಿಲೋಗೆ ರೂ 280. (ಶಿಪ್ಪಿಂಗ್ ಶುಲ್ಕ ಪ್ರತ್ಯೇಕ)  

ಸಂಪರ್ಕ: ನಯನಾ ಆನಂದ್ - 91417 66536


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು

Key Words: Banana Flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top