ಮದ್ಯಕ್ಕಾಗಿ ಎರಡೂವರೆ ಕಿ.ಮೀಗೂ ಹೆಚ್ಚು ಉದ್ದದ ಸಾಲುಗಟ್ಟಿ ನಿಂತವರ 'ವೈಭವ'ವನ್ನು ಒಮ್ಮೆ ನೋಡಿ...

Upayuktha
0

ತಿರುವನಂತಪುರಂ: ಕೇರಳದಲ್ಲಿ ಕೋವಿಡ್‌  ಲಾಕ್‌ಡೌನ್‌ ನಿರ್ಬಂಧಗಳನ್ನು ಭಾಗಶಃ ಸಡಿಲಿಸಲಾಗಿದ್ದು, ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.


ಇದು ಪಾಲಕ್ಕಾಡ್ ಜಿಲ್ಲೆಯ ಒಂದು ಹಳ್ಳಿಯ ದೃಶ್ಯ. ಹೆದ್ದಾರಿ ಬದಿಯಲ್ಲಿ ಮದ್ಯಕ್ಕಾಗಿ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲುಗಟ್ಟಿ ನಿಂತ 'ದೈವತ್ತಿಂಡೆ ಸ್ವಂತಂ ನಾಟ್ಟಿಂಡೆ' ಜನರು ಇವರು.


ಯಾರೋ ವಾಹನ ಚಾಲಕರು 'ಈ ಸಂಭ್ರಮದ' ದೃಶ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟದ್ದಾರೆ. ಇದು ವೈರಲ್‌ ಆಗುತ್ತಿದೆ. ಮದಿರೆಗಾಗಿ ಸುಮಾರು ಎರಡು ಕಿ.ಮೀಗೂ ಉದ್ದದ ಕ್ಯೂ ಇರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.


ಮದಿರಾ ಪ್ರಿಯರ ಸಂಭ್ರಮವನ್ನೊಮ್ಮೆ ನೀವೂ ಕಣ್ಣಾರೆ ನೋಡಿ ಅಮಲೇರಿಸಿಕೊಳ್ಳಬಹುದು.




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top