ಮಂಗಳೂರು: ಐಲೇಸಾ ದ ವಾಯ್ಸ್ ಆಫ್ ಆಶಿಯನ್ ಡಿಜಿಟಲ್ ವೇದಿಕೆಯಲ್ಲಿ ತುಳುವಿನಲ್ಲಿ ಭಗವದ್ಗೀತೆಯ ಸಾರ ಕಾರ್ಯಕ್ರಮವು ಇಂದಿನಿಂದ (ಜೂ.13) ಸತತವಾಗಿ 6 ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆಯ ವರೆಗೆ ನಡೆಯಲಿದೆ.
ಇಂದು ಶ್ರೀ ಶ್ರೀ ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಅವರು ಮೊದಲ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತುಳು ವಿಶ್ವ ಸಮ್ಮೇಳನದ ರೂವಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಗಲ್ಪ್ ರಾಷ್ಟ್ರ ಅಬುಧಾಭಿಯಲ್ಲಿನ ಅಪ್ರತಿಮ ಸಂಘಟಕ ಸರ್ವೋತ್ತಮ ಶೆಟ್ಟಿ ಅವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಹೊಸ ಯೋಜನೆ-ಯೋಚನೆಯ ಕಾರ್ಯಕ್ರಮಕ್ಕೆ ಮನೆಯಲ್ಲಿದ್ದುಕೊಂಡೇ ಆನ್‌ಲೈನ್ ಮೂಲಕ ನೋಡಿ, ಕೇಳಿ ದೇವರ ಕೃಪೆಗೆ ಪಾತ್ರರಾಗಲು ಇದೊಂದು ವಿಶೇಷ ಅವಕಾಶ, ವಿಶಿಷ್ಟ ಅನುಭವ ಮತ್ತು ಪ್ರಯತ್ನವಾಗಿದೆ ಎಂದು ಟೀಮ್ ಐಲೇಸಾ ತಂಡದ ಗೀತಾ ರಾಘವೇಂದ್ರ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಆನ್‌ಲೈನ್‌ನಲ್ಲಿ ಝೂಮ್ ಐಡಿ 87604595039 ಮತ್ತು ಪಾಸ್‌ವರ್ಡ್ : 1234 ಮೂಲಕ ಲಾಗಿನ್ ಆಗಿ ಪಾಲ್ಗೊಳ್ಳಬಹುದು ಎಂದು ಟೀಮ್ ಐಲೇಸಾ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ