'ಶ್ಲಾಘ್ಯ'ದಲ್ಲಿ ಜೀವಶಾಸ್ತ್ರ ಅಧ್ಯಾಪಕರಿಗೆ ಉದ್ಯೋಗಾವಕಾಶ

Upayuktha
0


ಮಂಗಳೂರು: ನಗರದ ಹೆಸರಾಂತ ಶೈಕ್ಷಣಿಕ ತರಬೇತಿ ಸಂಸ್ಥೆ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗೆ ರಾಜ್ಯ ಮತ್ತು ಸಿಬಿಎಸ್‌ಇ ಪಠ್ಯಕ್ರಮದಂತೆ 8, 9 ಮತ್ತು 10ನೇ ತರಗತಿಗಳಿಗೆ ಪಾಠ ಮಾಡಲು ಜೀವಶಾಸ್ತ್ರ (ಬಯಾಲಜಿ) ವಿಷಯದಲ್ಲಿ ಅಧ್ಯಾಪಕರು ಬೇಕಾಗಿದ್ದಾರೆ.


ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡಬೇಕಾಗಿದ್ದು, ಒಂದು ಹುದ್ದೆಗೆ ಅವಕಾಶವಿದೆ. ತರಗತಿಗಳು ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌, ಬೋಂದೆಲ್, ಮಂಗಳೂರು- ಇಲ್ಲಿ ನಡೆಯುತ್ತವೆ. ಆಸಕ್ತ ಅಭ್ಯರ್ಥಿಗಳು (ಪುರುಷ ಅಥವಾ ಮಹಿಳೆ) ಸ್ವವಿವರಗಳನ್ನು  shlaghya.mangaluru@gmail.com ಗೆ ಇ-ಮೇಲ್ ಮಾಡಬೇಕಾಗಿದೆ.


ಟ್ಯೂಷನ್ ಬ್ಯಾಚ್‌ಗಳು ಬೆಳಗ್ಗೆ ಬೇಗನೆ ಹಾಗೂ ರಾತ್ರಿ ತಡವಾಗಿ ಇರುತ್ತವೆ. ಯಾವುದೇ ಪದವೀಧರ ಅಥವಾ ಸ್ನಾತಕೋತ್ತರ ಡಿಗ್ರಿ ಪಡೆದವರು, ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಮತ್ತು ಮೇಲೆ ತಿಳಿಸಿದ ಸ್ಥಳದಲ್ಲಿ ಕೆಲಸ ಮಾಡಲು ಅನುಕೂಲತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.


ಹೊಸಬರು (ಫ್ರೆಶರ್ಸ್‌), ಅನುಭವಿಗಳು ಮತ್ತು ನಿವೃತ್ತ ಶಿಕ್ಷಕರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಜೂನ್ 2021.


ಹೆಚ್ಚಿನ ವಿವರಗಳಿಗೆ ಅಕಾಡೆಮಿಕ್ ಡೈರೆಕ್ಟರ್, ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಬೋಂದೆಲ್, ಮಂಗಳೂರು- ಈ ವಿಳಾಸವನ್ನು ಸಂಪರ್ಕಿಸಬಹುದು. ಅಥವಾ www.shlaghya.in ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top