ಸಣ್ಣಕತೆ: "ಕಲ್ಲು ಹೊಡೆದು ಎಚ್ಚರಿಸಿದೆ ಅಷ್ಟೇ" ಎಂದಿದ್ದಳು ವೃದ್ದೆ ಭಿಕ್ಷುಕಿ

Upayuktha
0

ಪ್ರಾತಿನಿಧಿಕ ಚಿತ್ರ- ಕೃಪೆ: ಬೆಟರ್‌ಫೋಟೋಗ್ರಫಿ.ಇನ್


ಆ ಭಿಕ್ಷುಕಿ ಮುದುಕಿ, ತನ್ನ 3 ಮರಿಗಳಿಗೆ ಹಾಲು ಕುಡಿಸುತ್ತಿದ್ದ ಆ ನಾಯಿಗೆ ದೊಡ್ಡದೊಂದು ಕಲ್ಲಲ್ಲಿ ಹೊಡೆದಿದ್ದಳು. ಕಲ್ಲು ತಾಗಿದ ನಾಯಿ ಕುಂಯಿ ಕುಂಯಿ ಅನ್ನುತ್ತಾ ಮರಿಗಳನ್ನು ಬಿಟ್ಟು ಅಲ್ಲಿಂದ ಓಡಿತ್ತು. ಅಲ್ಲಿದ್ದ ಆ ವ್ಯಕ್ತಿಗೆ ಸಿಟ್ಟು ಬಂದಿತ್ತು. ಮುದುಕಿಗೆ ಜೋರಾಗಿ ಗದರಿದ- "ಏ ಮುದುಕಿ ನಿನಗೆ ಹುಚ್ಚು ಹಿಡಿದಿದೆಯಾ? ತನ್ನ ಮರಿಗಳಿಗೆ ಅಷ್ಟು ಪ್ರೀತಿಯಿಂದ ಹಾಲು ಕುಡಿಸುತ್ತಿದ್ದ ಆ ತಾಯಿ ನಾಯಿಗೆ ಕಲ್ಲು ಹೊಡೆದು ಓಡಿಸಿದ್ದೆಯಲ್ಲ ನೀನೂ ಒಂದು ಹೆಣ್ಣಾ? ಎಂದ...


ಮುದುಕಿ ಉತ್ತರಿಸಿದ್ದಳು... ಹೌದು ಸ್ವಾಮಿ ಹೆಣ್ಣಾಗಿದ್ದಕ್ಕೆ ಕಲ್ಲು ಹೊಡೆದೆ, ಅಷ್ಟು ಪ್ರೀತಿ ಯಿಂದ ಹಾಲು ಕೊಡುವ ತಾಯನ್ನೇ ಮರೀತಾವೆ ಆ ದರಿದ್ರ ನಾಯಿಮರಿಗಳು ಮುಂದೆ, ನಾನು 60 ವರ್ಷದ ಹಿಂದೆ 3 ಜನ ಮಕ್ಕಳಿಗೆ ಇದೇ ರೀತಿ ಮೊಲೆ ಹಾಲು ಕುಡಿಸಿ ಸಾಕಿದ್ದೆ. ನಾನೂ ಆ ನಾಯಿ ಥರವೇ ಅಂದು ಯೋಚಿಸಿದ್ದೆ, ಈ ಹಾಲು ಕುಡಿದ ಮಕ್ಕಳು ನನ್ನನ್ನು ನಾಳೆ ನೋಡುತ್ತಾರೆ ಎಂದು. ಎಲ್ಲ ಸುಳ್ಳು ಸ್ವಾಮಿ. ನೋಡಿ ನನ್ನ ಹಣ ಅಸ್ತಿ ಲಪಟಾಯಿಸಿ ನನ್ನನ್ನು ರಸ್ತೆಯಲ್ಲಿ ಬಿಟ್ಟಿದ್ದಾರೆ ಈ ನಾಯಿಗಳು. ಅಂದು ನನ್ನನ್ನು ಯಾರು ಎಚ್ಚರಿಸಿಲ್ಲ; ಅದಕ್ಕೆ ಇಂದು... ಕಲ್ಲು ಹೊಡೆದು ಎಚ್ಚರಿಸಿದೆ.


ನಾಳೆ ಈ ನಾಯಿ ಮರಿಗಳು ನಿನ್ನನ್ನು ನೋಡುವುದಿಲ್ಲ ಸುಮ್ಮನೆ   ಹುಚ್ಚು  ಕನಸಲ್ಲಿ ತೇಲಬೇಡ ಎಂದು ಹೇಳಿ ಮುದುಕಿ ಮುಂದೆ ಹೋದಳು. ಈ ಬಾರಿ ಈ ವ್ಯಕ್ತಿ ಬಾಯಿ ಮುಚ್ಚಿಕೊಂಡಿದ್ದ.


ಮಕ್ಕಳಿದ್ದು, ಭಿಕ್ಷೆ ಬೇಡುವ ಅದೆಷ್ಟೋ ತಾಯಂದಿರು ನಮ್ಮದೇ ಸಮಾಜದಲ್ಲಿದ್ದಾರೆ, ಇಂತಹ ಮಕ್ಕಳು ನಾಳೆ ಅವರ ಮಕ್ಕಳು ದೊಡ್ಡವರಾದಾಗ ಅದೇ ಕೆಲಸ ಮಾಡಿದರೆ ಮಾತ್ರ ಬುದ್ದಿ ಕಲಿತಾರು ಅಲ್ಲವೇ?


-ಡಾ.ಶಶಿಕಿರಣ್ ಶೆಟ್ಟಿ 

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ.

9945130630


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top