ಕಲಾಧರ್ಮ ದೇಗುಲದ ಯಕ್ಷ ‌ಪ್ರಣತಿ ಅಬ್ದುಲ್ ರವೂಫ್

Upayuktha
0


 

ಉಡುಪಿ ಜಿಲ್ಲೆಯ ಗುಜ್ಜರಬೆಟ್ಟು ಶ್ರೀಮತಿ ಸೈಬಿನ್ ಹಾಗೂ ಅಹಮ್ಮದ್ ಸಾಹೇಬ್ ಇವರ ಮಗನಾಗಿ ದಿನಾಂಕ 16-04-1977 ರಂದು ಇವರ ಜನನ. 1 ರಿಂದ 5 ನೇ ತರಗತಿ ಕಲಿತದ್ದು ಕೆಮ್ಮಣ್ಣಿನಲ್ಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್ ಇವರ ವಿದ್ಯಾಭ್ಯಾಸ.


17-09-2002 ರಿಂದ 03-09-2021ರ ವರೆಗೆ 10 ವರ್ಷ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.ನಂತರ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 2012ರ ಬ್ಯಾಚಿನ ಗೆಝೆಟೆಡ್ ಪ್ರೊಬೇಷನರ್ K.E.S ಹುದ್ದೆಗೆ ಆಯ್ಕೆಯಾಗುತ್ತಾರೆ.ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆ ಬೈಂದೂರು ವಲಯದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ.


ಯಕ್ಷಗಾನವನ್ನು ನೋಡಿ ನೋಡಿ ಪ್ರೇರಿತನಾಗಿದ್ದ ಇವರು ಯಕ್ಷಗಾನ ರಂಗದ ಎಲ್ಲಾ ಕಲಾವಿದರು ನನಗೆ ಪ್ರೇರಣೆ ಎಂದು ಹೇಳುತ್ತಾರೆ. ನೀಲಾವರ ಲಕ್ಷ್ಮಿನಾರಾಯಣ ರಾವ್, ಬನ್ನಂಜೆ ಸಂಜೀವ ಸುವರ್ಣ, ಗೋರ್ಪಾಡಿ ವಿಠಲ ಪಾಟೀಲ್, ಸತೀಶ‌ ಕೆದಿಲಾಯ, ಕೃಷ್ಣಮೂರ್ತಿ ಭಟ್, ನಗರ ಸುಬ್ರಹ್ಮಣ್ಯ ಆಚಾರ್, ಪ್ರಸಾದ್ ಮೊಗೆಬೆಟ್ಟು, ಐರೋಡಿ ಮಂಜುನಾಥ ಕುಲಾಲ್ ಇವರ ಯಕ್ಷಗಾನದ ಗುರುಗಳು.


ಮಾರುತಿ ಪ್ರತಾಪ, ಧರ್ಮಾಂಗಧ ದಿಗ್ವಿಜಯ, ಕುಶಲವ, ಕೃಷ್ಣ ಸಂಧಾನ, ಭಿಷ್ಮ ವಿಜಯ, ಭೀಷ್ಮ ಪ್ರತಿಜ್ಞೆ, ಅಭಿಮನ್ಯು ಕಾಳಗ ಹಾಗೂ  ರಾಮಾಯಣದ ಮತ್ತು ಮಹಾಭಾರತದ ಎಲ್ಲಾ ಪೌರಾಣಿಕ ಕಥಾನಕಗಳು ಇವರ ನೆಚ್ಚಿನ ಪ್ರಸಂಗಗಳು.


ಅರ್ಜುನ, ವೀರಮಣಿ, ವಿಷ್ಣು, ರಾಮ, ಚಂದ್ರಸೇನ, ಶನೀಶ್ವರ, ಸಾಲ್ವ, ಕೀಚಕ, ಕೃಷ್ಣ, ಧರ್ಮಾಂಗಧ ಹಾಗೂ ಬಣ್ಣದ ವೇಷಗಳು ಇವರ ನೆಚ್ಚಿನ ವೇಷಗಳು.


ಅತಿಥಿ ಕಲಾವಿದನಾಗಿ ಮಡಾಮಕ್ಕಿ, ಚೋನಮನೆ ಮೇಳ, ವಿವಿಧ ಸಂಘಗಳಲ್ಲಿ, ಶಿಕ್ಷಕರ ತಂಡದಲ್ಲಿ ತಿರುಗಾಟ ಮಾಡಿದ ಅನುಭವವಿದೆ ಎಂದು ಶ್ರೀಯುತ ಅಬ್ದುಲ್ ರವೂಫ್ ಹೇಳುತ್ತಾರೆ. ಓದುವುದು, ಯಕ್ಷಗಾನದಲ್ಲಿ ಅಭಿನಯಿಸುವುದು, ನಾಟಕಗಳಲ್ಲಿ ಅಭಿನಯಿಸುವುದು ಇವರ ಹವ್ಯಾಸಗಳು.


ರಂಗಕ್ಕೆ ಹೋಗುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಭಾಗವತರಿಂದ ಪದ್ಯಗಳನ್ನು ತಿಳಿದುಕೊಂಡು, ಸಹ ಪಾತ್ರಧಾರಿಗಳೊಂದಿಗೆ ಚರ್ಚಿಸಿ, ಪೂರ್ವದ ವಿಷಯ ಸಂಗ್ರಹವನ್ನು ನೆನಪಿಸಿಕೊಂಡು ಅನ್ವಯಿಸಿಕೊಂಡು ರಂಗದಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಹೇಳುತ್ತಾರೆ ರವೂಫ್.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದಿನ ಯಕ್ಷಗಾನ ಪ್ರೇಕ್ಷಕರು ಜ್ಞಾನಿಗಳಿದ್ದಾರೆ. ಯಕ್ಷಗಾನ ನೋಡುವವರ ಸಂಖ್ಯೆ ಕಡಿಮೆ ಆಗಿದೆಯಾದರೂ ಪ್ರಬುದ್ಧ ಪ್ರೇಕ್ಷಕರು ಇನ್ನೂ ಇದ್ದಾರೆ. ಯುಟ್ಯೂಬ್ ಯಕ್ಷಗಾನ ಪ್ರಿಯರ ಸಂಖ್ಯೆ ಹೆಚ್ಚಾಗಿದೆ ಎಂದು ರವೂಫ್ ಅವರು ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ಮಾತ್ರ ಯಕ್ಷಗಾನ  ಸೀಮಿತವಾಗಿದ್ದರೂ 40 ಕ್ಕೂ ಹೆಚ್ಚು ಮೇಳಗಳು ಹರಕೆ ಮೇಳಗಳು ಯಕ್ಷಗಾನ ಪ್ರದರ್ಶನ ಕಾಣುತ್ತಿರುವುದು ಸಂತಸದ ವಿಷಯ. ಕೋವಿಡ್ 19 ಎಂಬ ಕೆಟ್ಟ ವೈರಸ್ ಖಾಯಿಲೆ ಯಕ್ಷಗಾನ ಕಲಾವಿದರ ಜೀವನವನ್ನು  ಕಸಿದುಕೊಳ್ಳುವ ಹಂತದಲ್ಲಿರುವುದು ಬಹಳ ಬೇಸರದ ವಿಷಯ. ಇದನ್ನು ಎದುರಿಸಲು Online ನಲ್ಲಿ, ವರ್ಚುವಲ್ ವೇದಿಕೆಗಳ ಮೂಲಕ ಯಕ್ಷಗಾನ ಪ್ರದರ್ಶನಗೊಂಡರೆ ಕಲಾವಿದರಿಗೆ ತುಂಬಾನೇ ಸಹಾಯ ಆಗುತ್ತದೆ ಎಂದು ರವೂಫ್ ಅವರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ವರ್ಷದಲ್ಲಿ 10 ಪೌರಾಣಿಕ  ಪಾತ್ರಗಳನ್ನಾದರೂ ಮಾಡಬೇಕು. ಅವಕಾಶ ಸಿಕ್ಕರೆ ಟೆಂಟ್ ಮೇಳದಲ್ಲಿ ಪಾತ್ರ ಮಾಡಬೇಕು ಎಂದು ಹೇಳುತ್ತಾರೆ ಶ್ರೀಯುತರು.


ಶಿರೂರ್ದ ಸಿರಿ ಪ್ರಶಸ್ತಿ, ಹಲವು ಸನ್ಮಾನ ಪ್ರಶಸ್ತಿಗಳು ಶ್ರೀಯುತ ರವೂಫ್ ಅವರಿಗೆ ಸಿಕ್ಕಿರುತ್ತದೆ.


01-06-2008ರಂದು ಉಮ್ಮೆ ಸಲ್ಮಾ ಇದ್ರೂಸಿಯಾ ಅವರನ್ನು ಮದುವೆಯಾದ ಶ್ರೀಯುತ ಅಬ್ದುಲ್ ರವೂಫ್ ಇಬ್ಬರು ಮಕ್ಕಳಾದ ನೂರ್ ಮಾಝಿನ್ (12 ವರ್ಷ) ಹಾಗೂ ಬದಿಉಝ್ ಝಮನ್ (8 ವರ್ಷ) ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top