'ತುಳುವ ಜಾಲ್ಡ್ ಕೃಷ್ಣ ಪಾರ್ದನ'- ದಿನ ಬುಡಂದೆ ಆಜಿ ದಿನ- ನಾಳೆ ಕೊನೆಯ ದಿನ

Upayuktha
0

ಬೆಂಗಳೂರು: ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ಮತ್ತು ಇಸ್ಕಾನ್ ಬೆಂಗಳೂರು ಸೌತ್ ಜಂಟಿಯಾಗಿ ತುಳುವ ಜಾಲ್ಡ್ ಕೃಷ್ಣ ಪಾರ್ದನ ದಿನ ಬುಡಂದೆ ಆಜಿ ದಿನ ಅನ್ನುವಂತಹ ಭಕ್ತಿ ಕಾರ್ಯಕ್ರಮದ ಮೂಲಕ ಭಗವದ್ಗೀತೆಯ ಸಾರವನ್ನು ಪ್ರವಚನದ ಮೂಲಕ ಪ್ರತಿದಿನ ಸಂಜೆ 7 ಗಂಟೆಗೆ  ಶ್ರೀ ಪ್ರಸಾದೇಶ್ವರ ಕೃಷ್ಣಾ ದಾಸರು ತುಳುವಿನಲ್ಲೇ ನಡೆಸಿ ಕೊಡುತ್ತಿದ್ದಾರೆ.


ಸರ್ವೋತ್ತಮ ಶೆಟ್ಟಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶುಕ್ರವಾರ ಆರನೇ ದಿನ ಅವರಿಂದಲೇ ಮುಕ್ತಾಯಗೊಳಿಸುತ್ತಿದ್ದಾರೆ ಟೀಮ್ ಐ ಲೇಸಾ ತಂಡ. ಆರು ದಿನಗಳಲ್ಲಿ ಜಗತ್ತಿನ 20ಕ್ಕೂ ಹೆಚ್ಚಿನ ದೇಶಗಳ ಜನರು ಹಾಗೂ ಅಲ್ಲಿನ ಗಣ್ಯರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಭಾರತದಿಂದಲೂ ಹಲವಾರು ಸ್ವಾಮೀಜಿಯವರು ಹಾಗೂ ಗಣ್ಯರು ಪಾಲ್ಗೊಂಡು ತಮ್ಮ ಆಶೀರ್ವಾದ ನೀಡಿದ್ದಾರೆ.


ಒಂಬತ್ತು ತಿಂಗಳ ಐಲೀಸಾ ದಿ ವಾಯ್ಸ್ ಆಫ್ ಓಶಿಯನ್ ಮೊದಲ ಬಾರಿಗೆ ಭಗವದ್ಗೀತೆಯನ್ನು ತುಳುವಿನಲ್ಲಿ ತುಳುವ ಜಾಲ್ಡ್ ಕೃಷ್ಣ ಪಾರ್ದನ ಮೂಲಕ ಮಾಡಿಸಿ ತಮ್ಮ ಪ್ರಮುಖ ಪುಟದಲ್ಲಿ ಸೇರಿಸಿಕೊಂಡಿದೆ.



ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾಪಕರಾದ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಶ್ರೀ ಶ್ರೀ ವಿಶ್ವತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಡಾ. ಪ್ರಭಾಕರ್ ಭಟ್ ಕಲ್ಲಡ್ಕ,  ಕಾಸರಗೋಡು ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗರು, ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನ ದಾಸ್ ಪರಮಹಂಸ ಸ್ವಾಮೀಜಿ, ಶ್ರೀ ಸುಂದರ್ ದಾಸ್ ಪ್ರಭುಜಿ ಬೃಂದಾವನ್ ಐಲೇಸಾಕ್ಕೆ ಆಶೀರ್ವಚನ ನೀಡಿದ್ದಾರೆ.


ಕೊನೆಯ ದಿನವಾದ ನಾಳೆ ಒಡಿಯೂರು ಮಠಾದೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ಮತ್ತು ಇಸ್ಕಾನ್ ಬೆಂಗಳೂರು ಸೌತ್ ನಮ್ಮ ತುಳು ಭಾಷೆಗಾಗಿ ಸಂಸ್ಕೃತಿಗಾಗಿ ಕೈಗೊಂಡ ಈ ಭಕ್ತಿ ಸಾರ ಕಾರ್ಯಕ್ರಮದಲ್ಲಿ ಇನ್ನಷ್ಟು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಟೀಮ್ ಐ ಲೇಸಾ ತಂಡದವರು ವಿನಂತಿಸಿದ್ದಾರೆ.


Meeting ID: 876 0459 5039

Passcode: 1234


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top