ಗೂಗಲ್‌ನಲ್ಲಿ ಮತ್ತೆ ಪ್ರಮಾದ: 'ಹಾಫ್ ಬಾಯ್ಲ್‌' ಪಾತ್ರದ ತಮಿಳು ನಟನ ಬದಲು ಕನ್ನಡದ ಡಾ. ರಾಜ್‌ ಫೋಟೋ

Upayuktha
0


ಬೆಂಗಳೂರು: ಕನ್ನಡ ಭಾಷೆ ವಿಚಾರದಲ್ಲಿ ಅವಮಾನ ಎಸಗಿ ಬಳಿಕ ಎಚ್ಚೆತ್ತುಕೊಂಡ ಸರ್ಚ್ ಇಂಜಿನ್ ಡೂಡಲ್ ಈಗ ಮತ್ತೆ ತನ್ನ ಪ್ರಮಾದಗಳನ್ನು ಮುಂದುವರೆಸಿದ್ದು, ತಮಿಳು ನಟನ ಹೆಸರಿಗೆ ಡಾ.ರಾಜ್ ಹೆಸರು ಹಾಕುವ ಮೂಲಕ ಅವಮಾನ ಎಸಗಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ತಮಿಳಿನ ಹಿಟ್ ಚಿತ್ರ ವಿಕ್ರಮ್ ವೇದ್ ದಲ್ಲಿ ಹಾಫ್ ಬಾಯ್ಲ್‌ ಎಂಬ ಪಾತ್ರವನ್ನು  ತಮಿಳಿನ ನಟ ರಾಜ್ ಕುಮಾರ್ ನಟಿಸಿದ್ದರು. ಈ ಚಿತ್ರದ ಕಲಾವಿದರ ಪೋಟೋ ಹಾಕುವ ಸಂದರ್ಭದಲ್ಲಿ ರಾಜಕುಮಾರ್ ಹೆಸರಿನ ಜೊತೆ ಕನ್ನಡದ ಮೇರುನಟ  ಡಾ.ರಾಜಕುಮಾರ್ ಪೋಟೋ ಹಾಕಿದೆ.

ವಿಕ್ರಮ್ ವೇದ ಸ್ಟಾರ್ ಕಾಸ್ಟ್ ಎಂದು ಗೂಗಲ್ ನಲ್ಲಿ ಹುಡುಕಿದರೆ, ಚಿತ್ರದ ತಾರಾಗಣದ ಪೋಟೋ ತೆರೆದುಕೊಳ್ಳುತ್ತದೆ. ಇದರಲ್ಲಿ ತಮಿಳು ರಾಜಕುಮಾರ್ ಪೋಟೋ ಬದಲು ಕನ್ನಡಿಗರ ಆರಾಧ್ಯದೈವ ಡಾ.ರಾಜ್ ಪೋಟೋ ಹಾಕಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಗೂಗಲ್ ನ ಈ ಪ್ರಮಾದದ  ಬಗ್ಗೆ ನಿರ್ದೇಶಕ ರಿಶಬ್ ಶೆಟ್ಟಿ  ಟ್ವೀಟ್ ಮಾಡಿದ್ದು, ಎಲ್ಲರಲ್ಲೂ ಒಂದು ಮನವಿ. ವಿಕ್ರಂ ವೇದ್ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ರಾಜಕುಮಾರ್ ಪೋಟೋವಿದೆ. ಅವರ ಪೋಟೋವನ್ನು ಬೇರೆ ಹೆಸರಿನಲ್ಲಿ ನಮೂದಿಸಲಾಗಿದೆ. ಹೀಗಾಗಿ ಎಲ್ಲರೂ ಗೂಗಲ್ ಗೆ ರಿಪೋರ್ಟ್ ಮಾಡಿ ಈ ತಪ್ಪು ಸರಿ ಹೋಗಲಿ ಎಂದಿದ್ದಾರೆ.

ಹಲವರು ಇದು ಕನ್ನಡಕ್ಕೆ ಗೂಗಲ್ ಮಾಡಿರೋ ಆವಮಾನ ಎಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top