ಮಾಜಿ ಪ್ರಧಾನಿ ದೇವೇಗೌಡರಿಗೆ ನ್ಯಾಯಾಲಯ 2 ಕೋಟಿ ರೂ. ದಂಡ ವಿಧಿಸಿದ್ದೇಕೆ?

Upayuktha
0

 


ಬೆಂಗಳೂರು: ಬೆಂಗಳೂರು  ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್  (ನೈಸ್) ವಿರುದ್ಧ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ನ್ಯಾಯಾಲಯ 2 ಕೋಟಿ ರೂ. ದಂಡ ವಿಧಿಸಿದೆ.

 ಈ ಕುರಿತಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ನೈಸ್ ಕಂಪೆನಿಗೆ 2 ಕೋಟಿ ರೂ. ದಂಡ ಮೊತ್ತವನ್ನು ಮಾನನಷ್ಟಕ್ಕೆ ಆದ ಪರಿಹಾರವಾಗಿ ಪಾವತಿಸುವಂತೆ ಸೂಚಿಸಿದೆ.  


ಹಿಂದೆ, ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ದೇವೇಗೌಡರು, ನೈಸ್ ಕಂಪನಿ ವಿರುದ್ಧ ಆರೋಪ ಮಾಡಿದ್ದರು. ನೈಸ್ ಕಂಪನಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡರು ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿ 2 ಕೋಟಿ ರೂ. ದಂಡ ವಿಧಿಸಿದೆ.

ಆದರೆ, ದೇವೇಗೌಡರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಖಚಿತ ಮಾಹಿತಿ ತಿಳಿದುಬಂದಿಲ್ಲ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top