ಮಂಗಳೂರು: ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮುಖ್ಯಮಂತ್ರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಳೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸರಕಾರದಿಂದ ಅನುಮತಿ ಸಿಕ್ಕಿದೆ.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಬಹುದು. ಆದರೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಮಧ್ಯಾಹ್ನದ ವೇಳೆಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಉಸ್ತುವಾರಿ ಸಚಿವರು ವೀಡಿಯೋದಲ್ಲಿ ತಿಳಿಸಿರುವುದು ಅಧಿಕೃತ ಆದೇಶ ಹೊರಬೀಳುವಾಗ ಸಮಯದಲ್ಲಿ ಬದಲಾವಣೆಯಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಎಂದು ಸಚಿವರು ಹೇಳಿದ್ದರೆ, ಅಧಿಕೃತ ಆದೇಶದಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಎಂದು ಬದಲಾಯಿಸಲಾಗಿದೆ.
ಸಂಸದ ನಳಿನ್ ಮತ್ತು ಎಲ್ಲಾ ಶಾಸಕರ ಮನವಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಬುಧವಾರದಿಂದ ಅನ್ವಯವಾಗುವ ಲಾಕ್‌ಡೌನ್ ಪರಿಷ್ಕರಣೆ ಮುಖ್ಯಾಂಶಗಳು
- ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರ ಸಹಿತ ಬೆಳಗ್ಗೆ 7ರಿಂದ ಅಪರಾಹ್ನ 1ರ ತನಕ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿಂತು ಪ್ರಯಾಣಕ್ಕೆ ಅವಕಾಶ ಇಲ್ಲ.
- ಬೆಳಗ್ಗೆ 7ರಿಂದ ಅಪರಾಹ್ನ 1ರ ವರೆಗೆ ಹವಾನಿಯಂತ್ರಿತ ಹೊರತು ಪಡಿಸಿ ಬಾಕಿ ಎಲ್ಲ ಅಂಗಡಿ, ಮಳಿಗೆ ತೆರೆಯಬಹುದು.
- ಬೆಳಗ್ಗೆ 7ರಿಂದ 10ರ ವರೆಗೆ ನಡಿಗೆ, ಜಾಗಿಂಗ್ ಬಳಕೆಗೆ ಉದ್ಯಾನಗಳನ್ನು ತೆರೆಯಬಹುದು.
- ವಾರಾಂತ್ಯ ಕರ್ಪ್ಯೂ ಸಂದರ್ಭ ಅಗತ್ಯ ಸೇವೆ ಹೊರತು ಇನ್ಯಾವ ಸೇವೆ, ಬಸ್, ಇತರ ವಾಹನ ಸಂಚಾರಕ್ಕೂ ಅವಕಾಶ ಇಲ್ಲ.
- ಹೊಟೇಲುಗಳಿಂದ ಪಾರ್ಸೆಲ್, ಹೋಂ ಡೆಲಿವರಿಗೆ ಮಾತ್ರ ಅವಕಾಶ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ