ಒಬ್ಬ ವ್ಯಕ್ತಿ ತನಗೆ ಯಾವ ರೀತಿಯ ಸ್ನೇಹ ಬೇಕೆಂದು ಬಯಸುತ್ತಾನೆಂದರೆ ತನ್ನ ವ್ಯಕ್ತಿತ್ವವನ್ನೇ ಹೋಲುವಂತಹುದನ್ನು. ಪ್ರತೀ ಮನುಷ್ಯ ಗೆಳೆತನವಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಇದು ಒಂದು ವಿಶೇಷ ಸಂಬಂಧ.
ಅದೆಷ್ಟೋ ಬಾರಿ ಮನೆಮಂದಿಗೆ ಗೊತ್ತಿರದ ಅನೇಕ ವಿಚಾರಗಳು ಸ್ನೇಹಿತರಿಗೆ ತಿಳಿದಿರುತ್ತೆ. ಯಾವೊಬ್ಬ ವ್ಯಕ್ತಿಯೇ ಆಗಲಿ ತನ್ನ ಬೆಸ್ಟ್ ಫ್ರೆಂಡ್ಸ್ನಲ್ಲಿ ತನ್ನ ವೈಯಕ್ತಿಕ ವಾದ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತಾನೆ. ಇನ್ನು ಕೆಲವು ವಿಚಿತ್ರ ಸ್ವಭಾವದವರು ಇರುತ್ತಾರೆ ಹೇಗೆಂದರೆ ಗೆಳೆತನವನ್ನೇ ಬಯಸದ, ಸದಾ ಗಂಟು ಮುಖ ಹಾಕಿಕೊಂಡು ಇರುವವರು. ಅವರಿಗೆ ಗೆಳೆತನದ ಅನುಭವ ಇರೋದು ಕಡಿಮೆಯೇ.
ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ, ಭಾವನೆಯನ್ನು ಹಂಚಿಕೊಳ್ಳುತ್ತಾ, ಕಷ್ಟಕ್ಕೆ ಸ್ಪಂದಿಸುತ್ತಾ ಹೆಗಲಿಗೆ ಹೆಗಲು ನೀಡುವ ಒಬ್ಬ ಉತ್ತಮ ಗೆಳೆಯ/ ಗೆಳತಿಯರಿದ್ದರೆ ಅದೇನೊ ನೂರಾನೆ ಬಲ. ಕೆಲವರ ಬದುಕಲ್ಲಿ ಒಡಹುಟ್ಟಿದವರೇ ಸ್ನೇಹಿತರ ಜಾಗವನ್ನು ಸಂಪೂರ್ಣಗೊಳಿಸುತ್ತಾರೆ ಅದು ಇನ್ನು ಮಜಾ. ಹೀಗೆ ಬದುಕಿನುದ್ದಕ್ಕೂ ಗೆಳೆತನ ಅನ್ನೋದು ಬಿಡಿಸಲಾಗದ ಬಂಧ.
ಲಾಕ್ಡೌನ್ ಆಗಿ ಅದೆಷ್ಟು ಸ್ನೇಹಿತರು ಬರೀ ಆನ್ಲೈನ್ ನಲ್ಲೇ ಮಾತಾಡ್ತಾ ಯಾವಾಗ ಭೇಟಿ ಆಗ್ತೇವೋ ಎಂಬ ಕೌತುಕದಲ್ಲಿರಬಹುದು. ಒಂದರ್ಥದಲ್ಲಿ ಇದು ನನ್ನ ಚಡಪಡಿಕೆಯೂ ಹೌದು. ಗೆಳೆತನವಿರಬೇಕು ಬಾಳಲಿ ನೋವ ಮರೆಯಲು, ನಗುವ ಕಲಿಯಲು, ಬೆರೆತು ಬಾಳಲು...
-ಅರ್ಪಿತಾ ಕುಂದರ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ