ಕವನ: ಯೋಗ ಪ್ರಜ್ಞೆ ಪರಿವರ್ಧಿನಿ

Upayuktha
0


ಬಾಗಿಸು ದೇಹದ ಭಾಗಗಳೆಲ್ಲವ

ತೂಗಿಸೆ ದೇಹದ ಭಾರವನೆಲ್ಲವ

ಯೋಗವು ದಿನವಹಿ ಕಾಯಕವಾದರೆ 

ಸಾಧನೆ ಬಲು ಸುಲಭ

ಬೇಗನೆ ಏಳುತ. ದೇವಗೆ ನಮಿಸುತ

ಸಾಗುತ ನೆಲದಲಿ ಹಚ್ವಡವಿರಿಸುತ

ರೋಗವ ತಡೆಯಲು ಮಾಡುತಲಿದ್ದರೆ 

ಜೀವಕೆ ಬಲು‌ಲಾಭ


ಮೂಗಿನ ಹೊರಳೆಯನೊತ್ತುತ ಗಾಳಿಯ

ಬಾಗುತ ಕೆಳಗಡೆ ವೇಗವ ನಿಲಿಸುತ

ಹೋಗಲು ಶ್ವಾಸವು ಹೊರಗಡೆ ಬಿಡುತಲಿ ಪ್ರಾಣಕೆಯಾಯಾಮ

ನೀಗಿಸಿ ತೃಷೆಯನು ಶೌಚ ಕರ್ಮಗಳ

ಬೀಗಿಸಿ ಪುಪ್ಪುಸ ಮಾಂಸ ಖಂಡಗಳ

ಸಾಗಲಿ ಧ್ಯಾನದ ಕಡೆಗೂ ಯತ್ನವು 

ನಿರ್ಮಲ ಭಾವದಲಿ


ನೆಟ್ಟಗೆ ನಿಲ್ಲುತ ಕರವನು ಎತ್ತುತ

ಕಟ್ಟಿದ ಶ್ವಾಸವ ಬಿಡುತಲಿ ನೇರಕೆ

ಒಟ್ಟಿಸಿ ತಲೆಯನು ಮೇಲ್ಗಡೆ ಮಾಡಲು 

ಸೂರ್ಯ ನಮಸ್ಕಾರ

ಮೆಟ್ಟುತ ನೆಲದಲಿ ಲಯವನು ಉಳಿಸುತ

ತಟ್ಟುತ ಕರವನು ಶಬ್ದವ ಹೊರಡಿಸಿ

ಕಟ್ಟಿದ ಕಾಲಿನ ಭಂಗಿಯನಿರಿದಲು 

ಸ್ವಸ್ತಿಕ ಪೀಠವದು


ಬಹುವಿಧ ಚಲನೆಯ ಕ್ರಮದಲಿ ಮಾಡುತ

ಮಹಿಯಲಿ ಮಲಗುತ ಚಲಿಸುತಲಂಗವ

ಸಿಹಿಯನು ಮೆಲ್ಲುವ ಕಬ್ಬಿನ ತೆರದಲಿ

ಯಾಸನಗಳ ಕರ್ಮ

ಕಹಿಯದು ಓಟವು ಬೆವರಿಸುವಾಟವು

ಸಹಿಸಲು ವೇದನೆ ಸಹಿತದ ಕಾಟವು

ರಹದಾರಿಯ ತೆರವಿಹ ಯೋಗಾಸನ 

ಸರಳತೆಯಿಹ ಮರ್ಮ


-ಡಾ ಸುರೇಶ ನೆಗಳಗುಳಿ

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top