ಸಮಾಜ ಸೇವೆಗೆ ಹೆಸರುವಾಸಿ ಕುದ್ಮಾರಿನ ತಿರಂಗಾ ವಾರಿಯರ್ಸ್ ತಂಡ

Upayuktha
0

 


ಇಂದು ಇಡೀ ದೇಶದ ರಕ್ಷಣೆ ಯೋಧರ ಕೈಯಲ್ಲಿದೆ. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ, ಆ ನೆಮ್ಮದಿಯ ಹಿಂದೆ ಯೋಧರ ಬಲಿದಾನ ಇದೆ. ಬ್ರಿಟಿಷರ ಕೈಯಲ್ಲಿ ಸಿಲುಕಿದ್ದ ಭಾರತ ದೇಶವನ್ನು ದೇಶಪ್ರೇಮಿಗಳು ಅಂದು ಬಿಡುಗಡೆಗೊಳಿಸಿದರು. ಅಂದು ಸ್ವತಂತ್ರಗೊಂಡ ಭಾರತ ದೇಶವನ್ನು ಪುನಃ ಪರಕೀಯ ಪಾಲಾಗದಂತೆ ರಕ್ಷಣೆ ಮಾಡುತ್ತಿರುವವರು ಭಾರತೀಯ ವೀರಯೋಧರು.  


ತಮ್ಮ ಕುಟುಂಬವನ್ನು ಬಿಟ್ಟು, ದೇಶ ರಕ್ಷಣೆಯ ಪಣತೊಟ್ಟು ತಮ್ಮ ಜೀವವನ್ನೂ ಲೆಕ್ಕಿಸದೆ ದೇಶವಿರೋಧಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಎಷ್ಟೋ ಜನ ಯೋಧರು ತಾಯಿ ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅಪಿ೯ಸಿದ್ದಾರೆ. ಇಂತಹ ವೀರಯೋಧರಿಗೆ ಗೌರವ ಸಲ್ಲಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಸುಮಾರು 500ಕ್ಕಿಂತಲೂ ಹೆಚ್ಚು ಜನ ಇಂದು ಒಂದು ಸಂಘಟನೆಯ ಮೂಲಕ ವೀರಯೋಧರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿರಪರಿಚಿತವಾದ ಈ ಸಂಘಟನೆಯೇ "ತಿರಂಗಾ ವಾರಿಯರ್ಸ್".


ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಎಂಬ ಗ್ರಾಮದಲ್ಲಿ ಯುವ ತರುಣರಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಲು ಊರಿನ ಎಲ್ಲಾ ಹಿರಿಯರ ಮಾರ್ಗದರ್ಶನ ದೊಂದಿಗೆ ಲೋಕೇಶ್ ಬಿಎಸ್ ಮತ್ತು ಲೋಹಿತಾಕ್ಷ ಕೆ ಇವರ ಸಾರಥ್ಯದಲ್ಲಿ ತಿರಂಗಾ ವಾರಿಯರ್ಸ್ ಸಂಘಟನೆ ಹುಟ್ಟಿಕೊಂಡಿತು.  ಕಳೆದ ನಾಲ್ಕು ವರ್ಷಗಳಿಂದ ಸೈನಿಕರ ದಿನಾಚರಣೆಯನ್ನು ಈ ಸಂಘಟನೆಯ ಎಲ್ಲಾ ಕಾರ್ಯಕರ್ತರು ಸೇರಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಾರೆ.  


ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಸಂಘಟನೆಗಳ ಹೆಸರು ದೇವರ ಹೆಸರುಗಳಾಗಿವೆ ಆದರೆ ತಿರಂಗ ವಾರ್ಯ ಎಂಬ ಹೆಸರು ದೇಶದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಹುಟ್ಟಿಕೊಂಡ ಸಂಘಟನೆ ಅದೆಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಈ ಸಂಘಟನೆ ಅಲ್ಪ ಅವಧಿಯಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚಿಸಲು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹೆಮ್ಮೆಯ ಸಂಘಟನೆಯಾಗಿದೆ.


ಪ್ರತಿವರ್ಷ ನಡೆಯುವ ಸೈನಿಕರ ದಿನಾಚರಣೆಯ ಸಂದರ್ಭದಲ್ಲಿ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಾರೆ. ಆ ದಿನ ಕಬಡ್ಡಿ, ಕ್ರಿಕೆಟ್ ಹೀಗೆ ಯಾವುದಾದರೊಂದು ಕ್ರೀಡೆಯನ್ನು ಏರ್ಪಡಿಸುವುದಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ.  


ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ತಿರಂಗಾ ವಾರಿಯರ್ಸ್ ತಂಡದ ಸದಸ್ಯರು ಬೆಳಕಿನಡೆಗೆ ಅಂಧರ ಬದುಕನ್ನು ಸಾಗಿಸಬೇಕು ಎಂಬ ಮಹತ್ತರ ಯೋಜನೆಯಿಂದ ಸುಮಾರು 300 ಮಂದಿ ಇವತ್ತು ಇವತ್ತು ನೇತ್ರದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸಿರುವ ಈ ತಂಡದ ಸದಸ್ಯರು ತಮ್ಮ ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ.


ಯುವಕ ಮಂಡಲದ ಕಾರ್ಯಗಳೆಲ್ಲವೂ ಸಮಾಜೋಪಯೋಗಿಯಾಗಿದ್ದು, ಹಗಲಿರುಳೆನ್ನದೆ  ದುಡಿಯುವ ಯುವ ಪಡೆಯು ತಮ್ಮ ಬಿಡುವಿನ ವೇಳೆ ಹಾಗೂ ರಜಾದಿನಗಳನ್ನು ಬಳಸಿಕೊಂಡು ಸಮಾಜಸೇವೆಯಲ್ಲೀ ನಿರತರಾಗಿರುವುದು ಗಮನಾರ್ಹ ಸಂಗತಿ.


ನರೇಗಾ ಯೋಜನೆ ಅಡಿಯಲ್ಲಿ ಸುಮಾರು 5000 ಇಂಗುಗುಂಡಿಗಳನ್ನು ನಿರ್ಮಿಸಿ ಊರಿನಲ್ಲಿ ನೀರಿನ ಪ್ರಮಾಣ ಹೆಚ್ಚಿಸುವುದು ಶ್ರಮಿಸುತ್ತಿದ್ದಾರೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉನ್ನತಮಟ್ಟದ ಕ್ರೀಡಾಂಗಣದಲ್ಲಿರುವ ಮಕ್ಕಳ ಬೆಳವಣಿಗೆಯ ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವ ಈ ತಂಡ ತಮ್ಮ ಊರಿನ ಸಾವ೯ಜನಿಕ ಕ್ರೀಡಾಂಗಣಕ್ಕೂ ಆಥಿ೯ಕ ನೆರವು ನೀಡಿ  ಸಹಕರಿಸಿದೆ.


ಆಯುಷ್ಮಾನ್ ಅಂತಹ ಸರ್ಕಾರಿ ಯೋಜನೆಗಳನ್ನು ಊರಿನ ಎಲ್ಲಾ ನಾಗರಿಕರಿಗೂ ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸಿದೆ.  ಊರಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿರುವ ತಿರಂಗಾ ವಾರಿಯರ್ಸ್ ತಂಡ ಕುದ್ಮಾರು ಗ್ರಾಮದ ಆಧಾರ‌ಸ್ತಂಭವಾಗಿದೆ.


ಊರಿನ ಎಲ್ಲಾ ಯುವಕರು ಸಕ್ರಿಯವಾಗಿ ಭೇದ ಭಾವವಿಲ್ಲದೆ ಒಡನಾಡಿಗಳಂತೆ, ಸಹೋದರರಂತೆ ಪರಸ್ಪರ ಕೈ ಜೋಡಿಸಿ ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನ ರಾಮರಾಜ್ಯದ ಚಿಂತನೆಯು ಪರಿಪೂರ್ಣ ಗೊಳ್ಳುವಿಕೆಯಲ್ಲಿ ಯುವಕರು ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದಕ್ಕೆ ಈ ಸಂಘಟನೆ ಸಾಕ್ಷಿಯಾಗಿದೆ.


ಕೊರೋನಾದ ಮೊದಲನೇ ಅಲೆಯಲ್ಲಿ ಅದೆಷ್ಟೋ ಜನ ಅಸಹಾಯಕರಿಗೆ ದಾನಿಗಳು ನೀಡಿದ ಅಗತ್ಯ ವಸ್ತುಗಳನ್ನು ಈ ತಂಡ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದೆ. ತಮ್ಮ ಸೇವೆಯನ್ನು ಯಾವುದೇ ಪ್ರಚಾರಕ್ಕಾಗಿ ಮಾಡದೆ, ತೊಂದರೆಗೊಳಗಾದವರಿಗೆ ಸರಿಯಾದ ಸಮಯದಲ್ಲಿ ನೆರವು ನೀಡುತ್ತಿದ್ದಾರೆ. 


ಸಮಾಜದ ಸವ೯ತೋಮುಖ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಸಮಾಜಸೇವೆ ಮಾಡುವ ನೂರಾರು ಯುವಕರನ್ನೊಳಗೊಂಡ ಈ ತಂಡ ಎಂತಹ ಸನ್ನಿವೇಶದಲ್ಲೂ ಧೃತಿಗೆಡದೆ, ದುಃಖದಲ್ಲಿದ್ದವರಿಗೆ, ಅಶಕ್ತರಿಗೆ ತಮ್ಮಿಂದಾದ ಸೇವೆ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಮನೋಭಾವ ಹೊಂದಿದೆ.


"ಯುವಕರೇ ಜೀವಂತ ಸಂಪನ್ಮೂಲಗಳು" ಎನ್ನುತ್ತಾ ಸ್ವಾಮಿ ವಿವೇಕಾನಂದರು, ನನಗೆ ನೂರು ಜನ ಸಿಂಹದ ಬಲವಿರುವ, ಧೈರ್ಯವಂತ ಸಾಹಸಿ ಯುವಕರನ್ನು ನೀಡಿ. ನಾನು ಇಡೀ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಹಾಗೆಯೇ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ತಮ್ಮ "ಮಿಷನ್ 2020" ಕೃತಿಯಲ್ಲಿ ವಿವರಿಸಿರುವಂತೆ, ಭಾರತ ದೇಶದ ಬದಲಾವಣೆಯಲ್ಲಿ ಯುವಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಕನಸನ್ನು ಹೊತ್ತಿದ್ದಾರೆ. ತಿರಂಗಾ ವಾರಿಯರ್ಸ್ ತಂಡದ ಯುವಕರು ಮಹಾತ್ಮರು ನಿರೀಕ್ಷಿಸಿದ ಬದಲಾವಣೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.


-ಸರೋಜ ಪಿ ಜೆ ದೋಳ್ಪಾಡಿ

ದ್ವಿತೀಯ ಬಿ ಎ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಪದವಿ ಕಾಲೇಜು ಪುತ್ತೂರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top