ನಿತ್ಯ ಸತ್ಯ- ಹುಡುಕಾಟ

Upayuktha
0


83. ಹುಡುಕಾಟ 

****

ಬ್ರಹ್ಮಾಂಡದಿ 

ಇರುವುದೆಲ್ಲ

ಪಿಂಡಾಂಡದಿ

ಅಡಗಿ ಇಹುದು 

ಹುಡುಕುವಂಥ

ಜಾಣತನವು 

ನಮಗೆ ಬೇಕಿದೆ 

*****

ಸಹಸ್ರಬುಧ್ಯೆ ಮುಂಡಾಜೆ


84. ಕರ್ಮ ಬಂಧ

*****

ಕರುವು ದನವ

ಹಿಂಡಿನೊಳಗು

ಹುಡುಕಿಕೊಂಡು

ಸೇರುವಂತೆ 

ನಮ್ಮ ಕರ್ಮ 

ಬೆನ್ನು ಬಿಡದು  

ಯಾವ ಕಾಲಕು 

*****

ಸಹಸ್ರಬುಧ್ಯೆ ಮುಂಡಾಜೆ


85. ಗೀತೆ

***

ಕಾಮ್ಯ ಕರ್ಮ

ತೂರೆದರದುವೆ

ಸಂನ್ಯಾಸವು 

ಎನ್ನುವಾಗ 

ಕರ್ಮಫಲವ 

ತೂರೆದರದುವೆ 

ತ್ಯಾಗ ಎನುವುದು. 

******

ಸಹಸ್ರಬುಧ್ಯೆ ಮುಂಡಾಜೆ


86. ಸದ್ಗುಣ

**

ಮಾನವೀಯ 

ಗುಣಗಳಷ್ಟೆ 

ಭವಿಷ್ಯಕ್ಕೆ 

ಒದಗಬಹುದು

ವಿಮೆಯ ಹಣವು 

ಧನ ಕನಕವು 

ಸೌಖ್ಯ ತಾರದು.

*****

ಸಹಸ್ರಬುಧ್ಯೆ ಮುಂಡಾಜೆ


87. ಆತ್ಮ ಶಕ್ತಿ

****

ಕರಿಯೆ ಇರಲಿ 

ಇರುವೆ ಇರಲಿ 

ಒಳಗಿನಾತ್ಮ 

ಒಂದೆ ತಾನೆ 

ಕಾಯದೊಡನೆ 

ಹೊಂದಾಣಿಕೆ 

ಆತ್ಮ ತಿಳಿದಿದೆ. 

*****

ಸಹಸ್ರಬುಧ್ಯೆ ಮುಂಡಾಜೆ


88. ಪ್ರತಿಕ್ರಿಯೆ 

****

ಯಾವ ಕ್ರಿಯೆಯು

ನಡೆಯಬಹುದು 

ಬೇಕು ಬೇಡ 

ಎನಲು ಉಂಟೆ 

ಪ್ರತಿಕ್ರಿಯೆಯ

ಪ್ರೌಢಿಮೆಯೇ

ನಿರ್ಣಾಯಕವು 

*****

ಸಹಸ್ರಬುಧ್ಯೆ ಮುಂಡಾಜೆ


89. ಚಂದ್ರ ಗ್ರಹಣ 

****

ಪೂರ್ಣಚಂದ್ರ 

ನೆದುರು ವಸುಧೆ 

ರವಿಯ ಬೆಳಕಿ

ಗಡ್ಡ ಬಂದು 

ಗ್ರಹಣವೆಂಬ 

ಸೋಜಿಗವನು 

ಮಾಡಿ ಬಿಟ್ಟಳು 

*****

ಸಹಸ್ರಬುಧ್ಯೆ ಮುಂಡಾಜೆ


90. ಸೂರ್ಯ ಗ್ರಹಣ 

*****

ರವಿಯ ಕಿರಣ 

ವಸುಧೆ ಬಳಿಗೆ 

ಬರುವುದನ್ನು

ಶಶಿಯು ತಡೆದು 

ಸೂರ್ಯ ಗ್ರಹಣ

ವೆಂಬಂತಹ 

ಭ್ರಮೆಯ ಬರಿಸಿದ 

******

ಸಹಸ್ರಬುಧ್ಯೆ ಮುಂಡಾಜೆ


91. ಸುನಾಮಿ

****

ಶರಧಿಯೊಳಗೆ 

ನೆಲವು ನಡುಗಿ 

ಜಲವು ತನ್ನ 

ಎಲ್ಲೆ ಮೀರಿ 

ನೆಲದ ಮೇಲೆ 

ನುಗ್ಗಿ ಹರಿವು 

ದೇ ಸುನಾಮಿಯು 

******

ಸಹಸ್ರಬುಧ್ಯೆ ಮುಂಡಾಜೆ


92. ನಾಯಿ ಬದುಕು 

*****

ಸರಕಾರದ 

ವೇತನ ಜತೆ

ಲಂಚ ತಿನ್ನು 

ವವರ ಬದುಕು 

ಅನ್ನಕಿಂತ 

ಮಲವ ತಿನುವ 

ನಾಯಿಯಂತೆಯೇ 

******

ಸಹಸ್ರಬುಧ್ಯೆ ಮುಂಡಾಜೆ


93. ವಿನಯ 

***

ವಿನಯವಿರದ 

ವಿದ್ಯೆ ಏಕೆ 

ದಾನಕಿರದ 

ಧನವು ಏಕೆ 

ಹೊಂದಿ ಬಾಳ 

ಲರಿಯದವನ 

ಬಾಳು ಏತಕೆ 

****

ಸಹಸ್ರಬುಧ್ಯೆ ಮುಂಡಾಜೆ


94. ಜೀವ ಗಂಗೆ 

****

ಜಲಜನಕದ 

ಅಣುಗಳೆರಡು 

ಆಮ್ಲಜನಕ 

ದೊಂದು ಅಣುವ 

ಸೇರಿದಾಗ 

ಜೀವ ಗಂಗೆ 

ಸೃಷ್ಟಿಯಾದಳು

*****

-ಸಹಸ್ರಬುಧ್ಯೆ ಮುಂಡಾಜೆ


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top