ಸಣ್ಣಕತೆ: ನೀ ನಂಬಿದವರೇ ನಿನ್ನ ಕೊರಳ ಕೊಯ್ಯುವರಯ್ಯ!!

Upayuktha
0

ಆ ಕೋಳಿ ಫಾರ್ಮ್ ಅಲ್ಲಿ ಕೋಳಿಗಳು ಚರ್ಚಿಸುತ್ತಿದ್ದವು. ಆ ಚಿಕ್ಕ ಕೋಳಿ ಹೇಳಿತು, "ಕಟುಕ ಮನುಷ್ಯ ಹೋದ ವಾರ ನನ್ನ ಹೆಂಡತಿಯನ್ನು ಕೊಂದ, ಮೊನ್ನೆ ನನ್ನ ಅಪ್ಪನನ್ನು ಕೊಂದ, ನಿನ್ನೆ ನನ್ನ ಅಣ್ಣನನ್ನು ಕೊಂದು ತಿಂದ. ಹಾಳಾದವ.. ಇವನಿಗೆ ಬರ ಬಾರದ ರೋಗ ಬಾರಾ ಹಾಳಾಗಿ ಹೋಗುತ್ತಾನೆ" ಎಂದು ಶಾಪ ಹಾಕಿತು ತನ್ನವರನ್ನು ಕಳಕೊಂಡ ದುಃಖದಲ್ಲಿ.


ಆ ದೊಡ್ಡ ತಾಯಿ ಕೋಳಿ ಮಧ್ಯೆ ಮಾತಾಡಿತು, "ನೋಡಿ ಸುಮ್ಮ ಸುಮ್ಮನೆ ಮನುಷ್ಯರನ್ನು ಬಯ್ಯುವುದು ತಪ್ಪು, ನಮ್ಮನ್ನು ಹುಟ್ಟಿಸಿದ್ದೇ ಅವರು, ನಮ್ಮ ಹೊಟ್ಟೆ ತುಂಬಿಸುವವರು ಅವರೇ ಹಾಗಿದ್ದ ಮೇಲೆ ಆಶ್ರಯದಾತರನ್ನು ಹಾಗೆಲ್ಲ ಬಯ್ಯುವುದು ಸರಿ ಅಲ್ಲ ಎಂಬುವುದು ಅದರ ವಾದವಾಗಿತ್ತು.


ಅಲ್ಲೇ ಸಮೀಪದಲ್ಲಿದ್ದ ಮರಿ ಕೋಳಿ ಈ ತಾಯಿಯ ಬಳಿ ಬಂದು ನಿಂತಿತು. ತಾಯಿಯ ಬೆಚ್ಚಗಿನ ಸ್ಪರ್ಶ ಖುಷಿ ಕೊಡುತಿತ್ತು ಅದಕ್ಕೆ. ಮತ್ತಷ್ಟು ಮೈ ತಾಗಿಸಿಕೊಂಡು ನಿಂತಿತ್ತು,  ತಾಯಿಯ ಬಿಸಿ ಅಪ್ಪುಗೆ ಅದಕ್ಕೆ ಖುಷಿ ಕೊಡುತ್ತಿತ್ತು.


ಯಾರೋ ಬಂದು ದೊಡ್ಡ ಕೋಳಿ ಕೊಡಿ ಎಂದದ್ದಷ್ಟೇ ಕಟುಕ ಆ ಕೋಳಿಯ ಕುತ್ತಿಗೆ ಹಿಡಿದು ಮೇಲೆತ್ತಿದ ಆ ಬಲಿಷ್ಠ ಬಾಹುಗಳ ಮಧ್ಯೆ ಕೊಕೊ... ಕೋ .. ಎನ್ನುತ್ತಾ ಮರಿಯಿಂದ ಬೇರ್ಪಟ್ಟಿತು ತಾಯಿ ಕೋಳಿ. ಅದ್ಯಾವುದರ ಅರಿವೇ ಇಲ್ಲದ ಮರಿ ಕೋಳಿ ಅತ್ತ ನೋಡುತ್ತಿದ್ದಂತೆ ತಾಯಿಯನ್ನು ಬಿಸಿ ನೀರಿನ ಡ್ರಮ್ ಒಳಗೆ ಮುಳುಗಿಸಲಾಯಿತು.


ಮತ್ತೆ ಚರ್ಮ ಸುಲಿದು ಕತ್ತರಿಸಲು ಹರಿತವಾದ ಕತ್ತಿಯ ಕೆಳಗೆ ಇಡಲಾಯಿತು. ಮೈಯಲ್ಲಿ ಬಿಸಿ ನೀರ ಬೊಬ್ಬೆ ಚರ್ಮ ಸುಲಿದಾಗಲೂ ತಾಯಿ ಪಂಜರದೊಳಗಿದ್ದ ಮರಿಯನ್ನೇ ನೋಡುತ್ತಿತ್ತು. ಮರಿ ಕೂಡ ತಾಯನ್ನೇ ಕೊನೆಯ ಬಾರಿ ನೋಡಿ ಕಣ್ತುಂಬಿಸಿ ಕೊಳ್ಳುತ್ತು. ಮರಿ ಒಂದರೆ ಕ್ಷಣ ಆ ದೃಶ್ಯ ನೋಡಲಾಗದೆ ಕಣ್ಣು ಮುಚ್ಚಿತು. ಕಚಕ್ ಎಂದು ಕತ್ತರಿಸಿದ ಕಟುಕ ಮಾಂಸ ತೊಟ್ಟೆಯಲ್ಲಿ ತುಂಬಿಸಿ ಕೊಟ್ಟಿದ್ದ. ಮರಿ ಮತ್ತೆ ಕಣ್ಣು ತೆರೆದಿತ್ತು. ಅಲ್ಲಿ ಇಟ್ಟಿದ್ದ ಕತ್ತಿಯಲ್ಲಿ ತಾಯಿಯ ಬಿಸಿ ರಕ್ತ ತೊಟ್ಟಿಕ್ಕುತ್ತಿತ್ತು.


ಅದೆಷ್ಟು ಕ್ರೂರಿ ಸಮಾಜದ ಭಾಗವಾಗಿದ್ದೇವೆ. ನಾವು ಆ ಕೋಳಿ ಪಾಪ ಮನುಷ್ಯರ ಪರವಾಗಿ ಮಾತಾಡುತ್ತಿತ್ತು. ಕ್ರೂರಿ ಮನುಷ್ಯ ಅದರ ಕತ್ತನ್ನೇ ಕತ್ತರಿಸಿದ. ಕತೆ ಬದಿಗಿಡೋಣ  ನೆನಪಿಡಿ. ಇಂತಹ ಕ್ರೂರಿಗಳೇ ತುಂಬಿದ್ದಾರೆ. ನಮ್ಮ ಸುತ್ತ ಅವ ನಮ್ಮವ ಇವ ನಮ್ಮವ ಎನ್ನುವ ಮುಂಚೆ ಮತ್ತೆ ಮತ್ತೆ ಯೋಚಿಸಿ ಯಾಕೆಂದರೆ ಇಲ್ಲಿ- ನೀ ನಂಬಿದವರೇ ನಿನ್ನ ಕೊರಳ ಕೊಯ್ಯುವರಯ್ಯ.


-ಡಾ. ಶಶಿಕಿರಣ್ ಶೆಟ್ಟಿ 

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ 

9945130630 (ವಾಟ್ಸಪ್)

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top