ಸವಿರುಚಿ: ಹಲಸಿನ ಹಣ್ಣಿನ ಕೇಕ್

Upayuktha
0

ಹಲಸಿನ ಹಣ್ಣಿನ ಕೇಕ್


ಹಲಸಿನ ಹಣ್ಣಿನ ಸೀಸನ್‌ನಲ್ಲಿ ಹಲಸಿನ ಕಾಯಿ, ಹಣ್ಣಿನಿಂದ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಾಯಿ ಚಪ್ಪರಿಸುತ್ತ ತಿನ್ನುವುದೇ ಒಂದು ಖಷಿ. ಶಶೀಸ್ ಅಡುಕ್ಕಳ ಯೂಟ್ಯೂಬ್ ಚಾನೆಲ್‌ನ ಸ್ಮೃತಿ ಭಟ್ ಕೆ ಅವರು ಉಪಯುಕ್ತ ನ್ಯೂಸ್ ಓದುಗರಿಗಾಗಿ, ಹಲಸಿನ ಹಣ್ಣಿನ ಕೇಕ್ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ನೀವೂ ಮಾಡಿನೋಡಿ, ತಿನ್ನಿ, ನಂತರ ಅಭಿಪ್ರಾಯ ತಿಳಿಸಿ.

ಬೇಕಾಗುವ ಸಾಮಾಗ್ರಿಗಳು 

ಮೈದಾ - 1 ಕಪ್ 

ಬೇಕಿಂಗ್ ಪೌಡರ್ - 1 ಟೀ ಸ್ಪೂನ್ 

ಬೇಕಿಂಗ್ ಸೋಡಾ - 1/2 ಟೀ ಸ್ಪೂನ್ 

ಚಿಟಿಕೆ ಉಪ್ಪು 

ಹಲಸಿನ ಹಣ್ಣಿನ ರಸ - 1/2 ಕಪ್

ವೆನಿಲ್ಲಾ ಎಸೆನ್ಸ್ - 1/4 ಟೀ ಸ್ಪೂನ್ 

ಸಕ್ಕರೆ - 1/2 ಕಪ್

ಎಣ್ಣೆ - 1/4 ಕಪ್

ಹಾಲು - 1/4 ಕಪ್

ಚಿಟಿಕೆ ಅರಿಶಿನ ಪುಡಿ 


ಮಾಡುವ ವಿಧಾನ 

1. ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಿಟಿಕೆ ಉಪ್ಪು ಎಲ್ಲವನ್ನು ಚೆನ್ನಾಗಿ ಗಾಳಿಸಿ.

2. ಸಕ್ಕರೆಯನ್ನು ಮಿಕ್ಸರ್ ಗೆ ಹಾಕಿ ಪೌಡರ್ ಮಾಡಿ. 

3. ಒಂದು ಬೌಲ್ ಗೆ  ಎಣ್ಣೆ, ಹಾಲು, ವೆನಿಲ್ಲಾ ಎಸೆನ್ಸ್ , ಚಿಟಿಕೆ ಅರಿಶಿನ ಪುಡಿ, ಸಕ್ಕರೆ ಪುಡಿ, ಹಲಸಿನ ಹಣ್ಣಿನ ರಸ 

ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. 

4. ಮೇಲಿನ ಮಿಶ್ರಣಕ್ಕೆ ಗಾಳಿಸಿದ ಪುಡಿಗಳನ್ನು ಸೇರಿಸಿ ಗಂಟಿಲ್ಲದಂತೆ ಕಲಸಿದರೆ ಕೇಕ್ ನ ಹಿಟ್ಟು ರೆಡಿ. ಇದನ್ನು ಕೇಕ್ ಟಿನ್ ಗೆ ವರ್ಗಾಯಿಸಿ.

5. ಒಂದು ಕಡಾಯಿಗೆ ರಿಂಗ್ ಇಟ್ಟು ಮುಚ್ಚಳ  ಮುಚ್ಚಿ 5 ನಿಮಿಷ ಬಿಸಿ ಮಾಡಿ. 

6. ಕೇಕ್ ಟಿನ್  ಅನ್ನು  ರಿಂಗ್  ಮೇಲೆ ಇಟ್ಟು ಮುಚ್ಚಳ  ಮುಚ್ಚಿ 40- 45 ನಿಮಿಷ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.

7. ಚೆನ್ನಾಗಿ ತಣಿದ ಮೇಲೆ ಕೇಕ್ ಅನ್ನು ತುಂಡು ಮಾಡಿ ಸರ್ವ್‌ ಮಾಡಿ. 


-ಸ್ಮೃತಿ ಭಟ್ ಕೆ.

Post a Comment

0 Comments
Post a Comment (0)
To Top